ದೀಪಾವಳಿಗಿಂತ ಮೊದಲು ಈ 5 ವಸ್ತುಗಳನ್ನು ಮನೆಯಿಂದ ಹೊರ ಹಾಕಿ.! ಸ್ವಚ್ಚತೆಯ ಜೊತೆಗೆ ಆರೋಗ್ಯವನ್ನೂ ಕಾಪಾಡಬಹುದು
ದೀಪಾವಳಿಯ ಮೊದಲು ಮನೆಯನ್ನು ಶುಚಿಗೊಳಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಈ ಸಂದರ್ಭದಲ್ಲಿ ಮನೆಯಿಂದ ಈ ಐದು ವಸ್ತುಗಳನ್ನು ಎಸೆಯಬೇಕು. ಯಾಕೆಂದರೆ ಈ ವಸ್ತುಗಳಲ್ಲಿ ಅದೆಷ್ಟೋ ಬ್ಯಾಕ್ಟೀರಿಯಾಗಳು ಅಡಗಿರುತ್ತವೆ.
ಬೆಂಗಳೂರು : ಎಲ್ಲಿ ಸ್ವಚ್ಚತೆ ಇರುವುದಿಲ್ಲವೋ ಅಲ್ಲಿ ಬಡತನ ನೆಲೆಸುತ್ತದೆ ಎನ್ನುವುದು ನಂಬಿಕೆ. ಇದೆ ನಂಬಿಕೆಯ ಆಧಾರದ ಮೇಲೆ ದೀಪಾವಳಿ ಹಬ್ಬ ಮುನ್ನ ಇಡೀ ಮನೆಯನ್ನು ಶುಚಿಗೊಳಿಸಲಾಗುತ್ತದೆ. ಇದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ. ಲಕ್ಷ್ಮೀಯ ಆಶೀರ್ವಾದ ಸಿಕ್ಕರೆ ಜೀವನಪೂರ್ತಿ ಅಷ್ಟೈಶ್ವರ್ಯ ನೆಲೆಯಾಗುತ್ತದೆ.
ಈ ಐದು ವಸ್ತುಗಳನ್ನು ತಕ್ಷಣ ಮನೆಯಿಂದ ಹೊರಹಾಕಿ :
ದೀಪಾವಳಿಯ ಮೊದಲು ಮನೆಯನ್ನು ಶುಚಿಗೊಳಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಈ ಸಂದರ್ಭದಲ್ಲಿ ಒಡೆದ ವಸ್ತುಗಳು, ಅನುಪಯುಕ್ತ ಶೂಗಳು, ಹರಿದ ಬಟ್ಟೆಗಳು ಮುಂತಾದ ಎಲ್ಲಾ ಅನಗತ್ಯ ವಸ್ತುಗಳನ್ನು ಮನೆಯಿಂದ ಹೊರಹಾಕಬೇಕು. ಇದರೊಂದಿಗೆ ಮನೆಯ ಮೂಲೆ ಮೂಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಈ ಸಂದರ್ಭದಲ್ಲಿ ಮನೆಯಿಂದ ಈ ಐದು ವಸ್ತುಗಳನ್ನು ಎಸೆಯಬೇಕು. ಯಾಕೆಂದರೆ ಈ ವಸ್ತುಗಳಲ್ಲಿ ಅದೆಷ್ಟೋ ಬ್ಯಾಕ್ಟೀರಿಯಾಗಳು ಅಡಗಿರುತ್ತವೆ.
ಇದನ್ನೂ ಓದಿ : ನಿಮ್ಮ ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭ ಮಾರ್ಗ...!
1. ಟಾಯ್ಲೆಟ್ ಸೀಟ್ : ದಿನನಿತ್ಯ ಬಳಸುವ ಕೆಲವು ವಸ್ತುಗಳು ಬ್ಯಾಕ್ಟೀರಿಯಾದ ವಾಸ ಸ್ಥಾನವಾಗಿರುತ್ತದೆ. ಹಾಗಾಗಿ ಅದನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಟಾಯ್ಲೆಟ್ ಶೀಟ್ ತುಂಬಾ ಹಳೆಯದಾಗಿದ್ದರೆ, ದೀಪಾವಳಿ ಸ್ವಚ್ಚತೆಯ ನೆಪದಲ್ಲಿ ಅದನ್ನು ಬದಲಾಯಿಸಿ. ಟಾಯ್ಲೆಟ್ ಸೀಟ್‌ಗಳಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾಗಳು ಅಡಗಿರುತ್ತವೆ ಎನ್ನುವುದು ಸಂಶೋಧನೆಯಿಂದ ಸಾಬೀತಾಗಿದೆ. ಹೀಗಾಗಿ ಹೊಸ ಟಾಯ್ಲೆಟ್ ಶೀಟ್ ಹಾಕುವ ಮೂಲಕ, ಬ್ಯಾಕ್ಟೀರಿಯಾದ ದಾಳಿಯಿಂದ ಇಡೀ ಕುಟುಂಬವನ್ನು ಕಾಪಾಡಬಹುದು.
2. ಅಡುಗೆ ಮನೆಯ ಸಿಂಕ್ : ಕಿಚನ್ ಸಿಂಕ್ ಹಳೆಯದಾಗಿದ್ದರೆ, ಅದು ಮಾರ್ಬಲ್ ನದ್ದೇ ಆಗಿರಲಿ ಅಥವಾ ಸ್ಟೀಲ್ ನದ್ದಾಗಿರಲಿ ಬದಲಾಯಿಸಿ ಬಿಡಿ. ಯಾಕೆಂದರೆ ಇದರಲ್ಲಿ ನೊರೊವೈರಸ್, ಹೆಪಟೈಟಿಸ್ ಎ ಮುಂತಾದ ಮಾರಣಾಂತಿಕ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ ಎಂದು ವೈದ್ಯರು ಮತ್ತು ತಜ್ಞರು ಹೇಳುತ್ತಾರೆ. ಕೊಲಾಯಿ ಹೆಸರಿನ ಬ್ಯಾಕ್ಟೀರಿಯಾ ಹುಟ್ಟಿಕೊಂಡರೆ, ಅದು ಸಿಂಕ್‌ನ ಮೇಲ್ಮೈಯಲ್ಲಿ ಹಲವಾರು ಗಂಟೆಗಳ ಕಾಲ ಬದುಕಬಲ್ಲದು. ಹೆಪಟೈಟಿಸ್ ಎ ಹಲವಾರು ತಿಂಗಳುಗಳವರೆಗೆ ಬದುಕಬಲ್ಲದು. ಈ ಹಿನ್ನೆಲೆಯಲ್ಲಿ ಅಡುಗೆಮನೆಯಿಂದ ಹಳೆಯ ಅಥವಾ ಮುರಿದ ಸಿಂಕ್ ಅನ್ನು ಹೊರ ಹಾಕುವುದು ಉತ್ತಮ.
3. ರಿಮೋಟ್ ಕಂಟ್ರೋಲ್, ಫ್ರಿಡ್ಜ್ ಕವರ್ ಮತ್ತು ಮೊಬೈಲ್ ಕವರ್ :ಈ ಬಾರಿಯ ದೀಪಾವಳಿಯ ಸ್ವಚ್ಛತೆಯ ವೇಳೆ, ಮನೆಯ ಕರ್ಟನ್ ಗಳನ್ನು ಬದಲಿಸುವುದರ ಜೊತೆಗೆ ನಿಮ್ಮ ಮನೆಯಲ್ಲಿರುವ ಎಲ್ಲಾ ರಿಮೋಟ್ ಗಳನ್ನೂ ಬದಲಾಯಿಸಿ. ರೆಫ್ರಿಜರೇಟರ್‌ನ ಕವರ್ ಅನ್ನು ಹೊಸದಾಗಿ ಹಾಕಿದರೆ, ಇನ್ನೂ ಉತ್ತಮ. ಮನೆಯ ಎಲ್ಲಾ ಸದಸ್ಯರ ಮೊಬೈಲ್‌ನ ಹಳೆಯ ಕವರ್ ಅನ್ನು ಸಹ ಬದಲಾಯಿಸಬೇಕು. ವಾಸ್ತವವಾಗಿ, ಮೊಬೈಲ್ ಫೋನ್ ಕವರ್ ನಲ್ಲಿ ಶೌಚಾಲಯಕ್ಕಿಂತ ಹೆಚ್ಚಿನ ಬ್ಯಾಕ್ಟೀರಿಯಾಗಳು ನೆಲೆಯಾಗುತ್ತವೆ ಎನ್ನುವುದು ಕೆಲವು ವರದಿಗಳಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ : ನ್ಯಾಚುರಲ್ ಫೇಸ್ ವಾಶ್ ಆಗಿ ಕೆಲಸ ಮಾಡುತ್ತದೆ ಈ ಎಲೆ.! ತ್ವಚೆಯ ಸಮಸ್ಯೆಗಳಿಗೆ ಸಿಗುವುದು ಇದು ಸುಲಭ ಪರಿಹಾರ
4. ವೆಜಿಟೇಬಲ್ ಚಾಪಿಂಗ್ ಚಾಪಿಂಗ್ ಬೋರ್ಡ್ : ಅಮೆರಿಕದಲ್ಲಿ ನಡೆಸಿದ ಸಮೀಕ್ಷೆಯೊಂದರ ವರದಿಯಲ್ಲಿ ಅಡುಗೆ ಮನೆಯ ಚಾಪಿಂಗ್ ಬೋರ್ಡ್ ಕೂಡ ಹಲವು ಅಪಾಯಕಾರಿ ಬ್ಯಾಕ್ಟೀರಿಯಾಗಳ ನೆಲೆಯಾಗಿರುತ್ತದೆ ಎಂದು ತಿಳಿದುಬಂದಿದೆ. ಇದರಲ್ಲಿ ಸಾಲ್ಮೊನೆಲ್ಲಾ, ಇ-ಕೋಲಿಯಂತಹ ಬ್ಯಾಕ್ಟೀರಿಯಾಗಳೂ ಉತ್ಪತ್ತಿಯಾಗುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಚಾಪಿಂಗ್ ಬೋರ್ಡ್ ಅನ್ನು ಆಗಾಗ ಬದಲಿಸುತ್ತಾ ಇರಿ.
5. ಡಿಶ್‌ವಾಶರ್ ಸ್ಕ್ರಬ್ಬರ್ : 10 ರಿಂದ 20 ರೂಪಾಯಿ ಮೌಲ್ಯದ ಸ್ಕ್ರಬರ್ ಅನ್ನು , ಅದು ಸವೆಯುವವರೆಗೆ ಬಳಸುತ್ತಿದ್ದರೆ, ಈ ಅಭ್ಯಾಸವನ್ನು ತಕ್ಷಣ ಬದಲಿಸಿ. ಇದರಲ್ಲಿ ಸಾವಿರಾರು ಬ್ಯಾಕ್ಟೀರಿಯಾಗಳೂ ವಾಸಿಸುತ್ತವೆ. ಅದರಲ್ಲೂ ಸ್ಪಾಂಜ್ ಅತ್ಯಂತ ಅಪಾಯಕಾರಿ. ಇದು ಪ್ರತಿ ಚದರ ಇಂಚಿಗೆ 10 ಮಿಲಿಯನ್ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಆದ್ದರಿಂದ ಇದನ್ನು 15 ದಿನಗಳಿಗೊಮ್ಮೆ ಬದಲಾಯಿಸಬೇಕು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.