ಬೆಂಗಳೂರು : ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕು ಮತ್ತು ವಸ್ತುಗಳ ಬಗ್ಗೆ ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳನ್ನು ಪಾಲಿಸಿದರೆ  ಮನೆಯಲ್ಲಿ ಸಕಾರಾತ್ಮಕತೆ ನೆಲೆಯಾಗುತ್ತದೆ. ಸಮೃದ್ಧಿ, ಸಂತೋಷ ಮನೆ ಮಾಡುತ್ತದೆ. ಇದಕ್ಕಾಗಿ, ಮನೆಯ ವಿಶೇಷ ದಿಕ್ಕುಗಳಲ್ಲಿ ಮತ್ತು ಸ್ಥಳಗಳಲ್ಲಿ ಶುಭ ವಸ್ತುಗಳನ್ನು ಇಡುವುದು ತುಂಬಾ ಪ್ರಯೋಜನಕಾರಿಯಾಗಿರಲಿದೆ. ಇದು ಮನೆಯ ವಾಸ್ತು ದೋಷಗಳನ್ನು ಕೂಡಾ ತೆಗೆದುಹಾಕುತ್ತದೆ. ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ಅದ್ಭುತ ಪರಿಹಾರಗಳನ್ನು ಇಲ್ಲಿ ತಿಳಿಸಿ ಹೇಳಲಿದ್ದೇವೆ. ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ  ಹಣ ಹರಿದು ಬರುತ್ತದೆ. ಮನೆ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. 


COMMERCIAL BREAK
SCROLL TO CONTINUE READING

ತುಳಸಿ ಬೇರಿನ ಪರಿಹಾರ : 
ಧರ್ಮ, ಜ್ಯೋತಿಷ್ಯ ಮತ್ತು ವಾಸ್ತು ದೃಷ್ಟಿಯಲ್ಲಿ ತುಳಸಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ತುಳಸಿಯನ್ನು ಪೂಜಿಸಲಾಗುತ್ತದೆ.  ಇದನ್ನು  ಲಕ್ಷ್ಮೀ ದೇವಿಯ ರೂಪ ಎಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ಪೂಜಿಸುವುದರಿಂದ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ.  ತುಳಸಿ ಗಿಡ ಎಲೆಯಿಂದ ಬೇರಿನವರೆಗೆ ತುಂಬಾ ಮಂಗಳಕರ ಮತ್ತು ಉಪಯುಕ್ತವಾಗಿದೆ. ಧರ್ಮ, ವಾಸ್ತುಗಳ ಹೊರತಾಗಿ ತುಳಸಿಯ ಔಷಧೀಯ ಪ್ರಾಮುಖ್ಯತೆಯನ್ನೂ ಹೊಂದಿದೆ. ವಾಸ್ತು ಶಾಸ್ತ್ರದಲ್ಲಿ, ತುಳಸಿ ಬೇರಿನ  ಪರಿಹಾರವನ್ನು ಉಲ್ಲೇಖಿಸಲಾಗಿದೆ. ಈ ಪರಿಹಾರವನ್ನು ಅಳವಡಿಸುವುದರಿಂದ ಮನೆಯಲ್ಲಿ ಹಣದ ಹರಿವು ವೇಗವಾಗಿ ಹೆಚ್ಚಾಗುತ್ತದೆ. 


ಇದನ್ನೂ ಓದಿ : ಬಿಳಿಗಿರಿ ರಂಗನಿಗೆ ಬಗೆಬಗೆ ಪತ್ರ ಬರೆದ ಭಕ್ತರು‌...!


ತುಳಸಿ ಬೇರನ್ನು ಮನೆಯ ಮುಖ್ಯ ಬಾಗಿಲಿಗೆ ನೇತು ಹಾಕಿ :  
ಮೊದಲೇ ಹೇಳಿದಂತೆ ತುಳಸಿ ಗಿಡವನ್ನು ಲಕ್ಷ್ಮೀ ದೇವಿಯ ರೂಪವೆಂದು ಹೇಳಲಾಗಿದೆ. ತುಳಸಿ ಗಿಡವಿರುವ ಮನೆಯಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸಿರುತ್ತಾಳೆಎನ್ನುವುದು ನಂಬಿಕೆ. ಈ ಕಾರಣಕ್ಕಾಗಿಯೇ ತುಳಸಿಯನ್ನು ನಿತ್ಯ ಪೂಜಿಸಲಾಗುತ್ತದೆ.  


ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಬೇರನ್ನು ಮನೆಯ ಮುಖ್ಯ ಬಾಗಿಲಿಗೆ ನೇತು ಹಾಕಿದರೆ ಮನೆಯ ಎಲ್ಲಾ ವಾಸ್ತು ದೋಷಗಳು ದೂರವಾಗುತ್ತವೆ. ಮನೆಯಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ.  ಮನೆಯ ಮುಖ್ಯ ದ್ವಾರಕ್ಕೆ ತುಳಸಿ ಬೇರನ್ನು ಕಟ್ಟುವುದರಿಂದ ಮನೆ ಅಥವಾ ಸುತ್ತಲಿನ ಎಲ್ಲಾ ರೀತಿಯ ವಾಸ್ತು ದೋಷವನ್ನು ಹೋಗಲಾಡಿಸಬಹುದು. 


ಇದನ್ನೂ ಓದಿ : Kaal Sarp Dosha ತುಂಬಾ ಅಪಾಯಕಾರಿ, ಸಂಕಷ್ಟದಲ್ಲಿಯೇ ಕಳೆದುಹೋಗುತ್ತೆ ಇಡೀ ಜೀವನ!


ತುಳಸಿ ಬೇರನ್ನು ಹೀಗೆ ಕಟ್ಟಿಕೊಳ್ಳಿ  : 
ಮನೆಯ ಮುಖ್ಯ ಬಾಗಿಲಿಗೆ ತುಳಸಿ ಬೇರನ್ನು ನೇತು ಹಾಕಲು ಅಥವಾ ಕಟ್ಟಲು, ಮೊದಲು ತುಳಸಿ ಬೇರನ್ನು ಗಂಗಾಜಲದ ಮೂಲಕ  ಸ್ವಚ್ಛಮಾಡಿಕೊಳ್ಳಿ. ನಂತರ ಕೆಂಪು ಬಟ್ಟೆಯಲ್ಲಿ ಸ್ವಲ್ಪ ಅಕ್ಕಿ ಮತ್ತು ತುಳಸಿ ಬೇರನ್ನು ಹಾಕಿ ಕಟ್ಟಿಕೊಳ್ಳಿ. ಈಗ ಈ ಗಂಟನ್ನು ಮನೆಯ ಮುಖ್ಯ ಬಾಗಿಲಿಗೆ ಕಟ್ಟಿ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.