ಚಾಮರಾಜನಗರ: ಚಾಮರಾಜನಗರದ ಹಿಂದೂಪರ ಸಂಘಟನೆಗಳು ಪ್ರತಿಷ್ಠಾಪಿಸಿದ್ದ ದೊಡ್ಡ ಗಣಪತಿ ಎಂಥಲೇ ಕರೆಯುವ "ಅಯೋಧ್ಯಾ ರಾಮ ಮಂದಿರ ಗಣಪತಿ" ನಿಮಜ್ಜನ ಮೆರವಣಿಗೆ ನಡೆಯುತ್ತಿದೆ.


COMMERCIAL BREAK
SCROLL TO CONTINUE READING

ಚಾಮರಾಜನಗರದ ರಥದ ಬೀದಿಯಿಂದ ಬೆಳಗ್ಗೆ 11 ಕ್ಕೆ ಆರಂಭಗೊಂಡ ಮೆರವಣಿಗೆಯು ಇಂದು ಮಧ್ಯರಾತ್ರಿ ತನಕವೂ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಲಿದೆ.


ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಸರ್ಪಗಾವಲಿದ್ದು ಮೆರವಣಿಗೆ ಮಾರ್ಗ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ರೂಪಿಸಲಾಗಿದೆ. 


ಇದನ್ನೂ ಓದಿ- ಈ ಮೂರು ಗಣೇಶನ ದೇಗುಲಕ್ಕೆ ಬೇಡಿಕೊಳ್ಳಿ, ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ..!


ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡದ ಮೇಲೆ ಕೂರುವುದು, ಪಟಾಕಿ ಸಿಡಿಸುವುದಕ್ಕೆ  ನಿರ್ಬಂಧ  ಹೇರಲಾಗಿದ್ದು ನಿನ್ನೆಯಿಂದಲೇ ಮದ್ಯ ಮಾರಾಟವನ್ನು ಜಿಲ್ಲಾ ಕೇಂದ್ರದಲ್ಲಿ ಬಂದ್ ಮಾಡಲಾಗಿದೆ.


ಗಣಪತಿ ಮೆರವಣಿಗೆಗೆ ವಿವಿಧ ಜಾನಪದ ಕಲಾತಂಡಗಳು ಮೆರುಗು ಕೊಟ್ಟಿದ್ದು ಗಾರುಡಿಗೊಂಬೆ, ಕಂಸಾಳೆ, ಗೊರವರ ಕುಣಿತ, ಚಂಡೆ, ವಿವಿಧ ವೇಷದಾರಿಗಳು ಗಮನ ಸೆಳೆದವು.


ಪೊಲೀಸ್ ಗಣಪತಿ ಎಂಥಲೇ ಫೇಮಸ್: 
ಜನರಿಗಿಂತ ಹೆಚ್ಚು ಪೊಲೀಸರೇ ಇರುವುದರಿಂದ ಇದು ಪೊಲೀಸ್ ಗಣಪತಿ ಎಂಥಲೇ ಫೇಮಸ್ ಆಗಿದ್ದು ಆರ್ ಎಸ್ ಎಸ್ ಗಣಪತಿ, ದೊಡ್ಡ ಗಣಪತಿ ಎಂಥಲೂ ಕರೆಯಲಾಗುತ್ತದೆ.


ಇದನ್ನೂ ಓದಿ- ಸಂಕಷ್ಟಹರ ಚತುರ್ಥಿಯ ದಿನ ಈ ತಪ್ಪುಗಳನ್ನು ಮಾಡಲೇಬಾರದು!


ಈ ಬಾರಿ 6 ಡಿವೈಎಸ್ಪಿ, 28 ಪಿಐ, 48 ಮಂದಿ ಪಿಎಸ್ಐ ಸೇರಿ 750 ಮಂದಿ ಪೊಲೀಸರು, 100 ಮಂದಿ ಹೋಂ ಗಾರ್ಡ್ ಗಳು, 5 ಕೆಎಸ್ಆರ್ ಪಿ, 6 ಡಿಆರ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ‌.ಟಿ.ಕವಿತಾ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.