Tips For Pregnancy: ಈ ಮೂರು ಗಿಡಮೂಲಿಕೆಗಳು ಮಹಿಳೆಯರಿಗೆ ಗರ್ಭಧರಿಸಲು ಸಹಾಯ ಮಾಡುತ್ತವೆ, ಫ್ಯಾಮಿಲಿ ಪ್ಲಾನಿಂಗ್ ಮಾಡುವವರಿಗೆ ಉತ್ತಮ!
Tips To Married Women: ಸಾಮಾನ್ಯವಾಗಿ ಮಹಿಳೆಯರಲ್ಲಿ ಗರ್ಭಧಾರಣೆಗೆ ಫಲವತ್ತತೆ ಉತ್ತಮವಾಗಿರುವುದು ತುಂಬಾ ಮುಖ್ಯ. ಹೀಗಿರುವಾಗ ನೀವು ಕುಟುಂಬ ಯೋಜನೆ ಮಾಡುತ್ತಿರುವಾಗ, ನೀವು ಸುಲಭವಾಗಿ ಗರ್ಭಿಣಿಯಾಗಲು, ಈ ಲೇಖನದಲ್ಲಿ ನಾವು ಸೂಚಿಸುತ್ತಿರುವ ಗಿಡಮೂಲಿಕೆಗಳನ್ನು ಟ್ರೈ ಮಾಡಬಹುದು (Lifestyle News In Kannada)
Female Fertility Issue: ಅನೇಕ ಮಹಿಳೆಯರಿಗೆ ತೂಕ ಏರಿಕೆಯ ಕಾರಣದಿಂದಾಗಲಿ ಅಥವಾ ಬೇರೆ ಯಾವುದೋ ಒಂದು ಕಾರಣದಿಂದಾಗಲಿ ಗರ್ಭಧಾರಣೆ ಸುಲಭದ ಮಾಗಾಗಿರುವುದುಕ್ಕ. ಇದಕ್ಕೆ ಇನ್ನೂ ಹಲವು ಕಾರಣಗಳಿರಬಹುದು, ಆದರೆ, ಅವುಗಳಲ್ಲಿ ಒಂದು ಪ್ರಮುಖ ಕಾರಣ ಎಂದರೆ, ಅವರ ಸ್ವಂತ ಫಲವತ್ತತೆ. ಸ್ತ್ರೀಯರ ಫಲವತ್ತತೆಯನ್ನು ಹೆಚ್ಚಿಸದಿದ್ದರೆ, ಹಲವಾರು ಬಾರಿ ಪ್ರಯತ್ನಿಸಿದ ಬಳಿಕವೂ ಮಹಿಳೆಯರು ಗರ್ಭಿಣಿಯಾಗಲು ಸಾಧ್ಯವಾಗುವುದಿಲ್ಲ. (Lifestyle News In Kannada)
ಮಹಿಳೆಯರಲ್ಲಿ ಕಡಿಮೆ ಫಲವತ್ತತೆಯ ಲಕ್ಷಣಗಲಾವುವು?
ಅನಿಯಮಿತ ಋತುಚಕ್ರ, ಲೈಂಗಿಕ ಬಯಕೆಯ ಕೊರತೆ, ಖಾಸಗಿ ಅಂಗದಲ್ಲಿ ಕಿರಿಕಿರಿ, ನೋವಿನಿಂದ ಕೂಡಿದ ಲೈಂಗಿಕತೆ, ಮುಟ್ಟಿನ ಸಮಯದಲ್ಲಿ ಅಸಹನೀಯ ನೋವು ಮುಂತಾದ ಲಕ್ಷಣಗಳು ಮಹಿಳೆಯರಲ್ಲಿ ಕಡಿಮೆ ಮಟ್ಟದ ಫಲವತ್ತತೆಯನ್ನು ಸೂಚಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕುಟುಂಬ ವಿಸ್ತರಿಸಲು ಬಯಸುತಿದ್ದರೆ, ನೈಸರ್ಗಿಕ ರೀತಿಯಲ್ಲಿ ಫಲವತ್ತತೆಯನ್ನು ಹೆಚ್ಚಿಸಲು ನೀವು ಈ ಲೇಖನದಲ್ಲಿ ಉಲ್ಲೇಖಿಸಲಾಗಿರುವ ಗಿಡಮೂಲಿಕೆಗಳನ್ನು ಟ್ರೈ ಮಾಡಬಹುದು.
ಶತಾವರಿ
ಶತಾವರಿಯನ್ನು ಸಾಮಾನ್ಯವಾಗಿ ಸ್ತ್ರೀಯರಲ್ಲಿ ಫಲವತ್ತತೆ ಹೆಚ್ಚಿಸುವ ಒಂದು ಟಾನಿಕ್ ಎಂದು ಹೇಳಲಾಗುತ್ತದೆ, ಹೆಸರೇ ಸೂಚಿಸುವಂತೆ, ಇದು ಫಲವತ್ತತೆ ಮತ್ತು ಚೈತನ್ಯವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಇದು ಫೈಟೊಈಸ್ಟ್ರೊಜೆನ್‌ನಿಂದ ಸಮೃದ್ಧವಾಗಿದೆ, ಈಸ್ಟ್ರೊಜೆನ್‌ನಂತೆಯೇ ರಾಸಾಯನಿಕ ಸಂರಚನೆ ಹೊಂದಿರುವ ನೈಸರ್ಗಿಕವಾಗಿ ಕಂಡುಬರುವ ಸಂಯುಕ್ತಗಳ ಒಂದು ಗುಂಪು ಇದಾಗಿದ್ದು, ಇದು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಚಸ್ಟ್ಬೆರಿ
ಬೆರ್ರಿ ವರ್ಗಕ್ಕೆ ಸೇರಿದ ಚಸ್ಟ್ಬೆರಿ ಸಂತಾನೋತ್ಪತ್ತಿ ಹಾರ್ಮೋನುಗಳನ್ನು ಸಮತೋಲನದಲ್ಲಿಡಲು ಸಹಾಯಮಾಡುತ್ತದೆ ಮತ್ತು ಋತುಚಕ್ರವನ್ನು ಕೂಡ ಸಮತೋಲನಗೊಳಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಯಮಿತ ಋತುಚಕ್ರದ ಅವಧಿಗಳನ್ನು ಹೊಂದಿಲ್ಲದಿದ್ದರೆ ಮತ್ತು ಗರ್ಭಧಾರಿಸಲು ಇದು ಕಾರಣವಾಗಿದ್ದರೆ, ನೀವು ಚಸ್ಟ್ಬೆರಿಯನ್ನು ಬಳಸಬಹುದು.
ಇದನ್ನೂ ಓದಿ-ಜೇನುತುಪ್ಪಕ್ಕೆ ಈ ವಸ್ತು ಬೆರೆಸಿ ಸೇವಿಸಿದರೆ ರಕ್ತ ನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಕರಗಿ ನೀರಾಗುವುದು
ಶಿಲಾಜಿತ್
ಶಿಲಾಜಿತ್ ಪುರುಷ ಫಲವತ್ತತೆಯನ್ನು ಹೆಚ್ಚಿಸುವ ಅತ್ಯುತ್ತಮ ಗಿಡಮೂಲಿಕೆಯಾಗಿದೆ. ಇದು ನೈಸರ್ಗಿಕ ಕಾಮೋತ್ತೇಜಕವಾಗಿ ಕೆಲಸ ಮಾಡುತ್ತದೆ, ಇದು ಲೈಂಗಿಕ ಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ, ಪುರುಷರಲ್ಲಿ ವೀರ್ಯಾಣು ಮತ್ತು ಅವುಗಳ ಚಲನಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಮಹಿಳೆಯರಲ್ಲಿ ಅಂಡಾಣುಗಳ ಗುಣಮಟ್ಟವನ್ನು ಇದು ಸುಧಾರಿಸುತ್ತದೆ.
ಇದನ್ನೂ ಓದಿ-ಜೇನುತುಪ್ಪಕ್ಕೆ ಈ ವಸ್ತು ಬೆರೆಸಿ ಸೇವಿಸಿದರೆ ರಕ್ತ ನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಕರಗಿ ನೀರಾಗುವುದು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-