ಬೆಂಗಳೂರು : ವಯಸ್ಸು ಹೆಚ್ಚಾದಂತೆ, ದೇಹವು ಅನೇಕ ಕಾಯಿಲೆಗಳಿಗೆ ಒಳಗಾಗಲು ಪ್ರಾರಂಭಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ದಿನದಲ್ಲಿ ಸುಮಾರು 8 ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ. 40 ವರ್ಷ ವಯಸ್ಸು ತಲುಪಿದ ನಂತರವಂತೂ 8 ಗಂಟೆಗಿಂತ ಕಡಿಮೆ ಅವಧಿ ನಿದ್ದೆ ಮಾಡಲೇಬಾರದು.  ನಮ್ಮ ದೇಹದಂತೆಯೇ ಮನಸ್ಸಿಗೂ ವಿಶ್ರಾಂತಿ ಬೇಕಾಗಿರುತ್ತದೆ. ಹಾಗಾಗಿ ದಿನಕ್ಕೆ ಎಂಟು ಗಂಟೆಗಳ ನಿದ್ದೆ ಸಿಗದೇ ಹೋದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಉತ್ತಮ ನಿದ್ರೆ ಪಡೆಯಲು ಏನು ಮಾಡಬೇಕು ?
1. ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ :
ನೆಮ್ಮದಿಯ ನಿದ್ದೆ ಬರಬೇಕಾದರೆ, ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ಆಯಾಸ  ನಿವಾರಣೆಯಾಗುತ್ತದೆ. ಇದು ಹಿತ ನಿದ್ದೆ ತರಿಸುತ್ತದೆ. 


ಇದನ್ನೂ ಓದಿ : Turmeric Side Effects : ಈ ಕಾಯಿಲೆ ಇದ್ದವರು ತಪ್ಪಿಯೂ ಅರಿಶಿನ ಸೇವಿಸಬೇಡಿ


2. 40 ನೇ ವಯಸ್ಸಿಗೆ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ :
ಪುರುಷ ಮತ್ತು ಮಹಿಳೆ ಇಬ್ಬರ ಮೇಲೆ ಕುಟುಂಬದ ಜವಾಬ್ದಾರಿಗಳ ಹೊರೆ ತುಂಬಾ ಹೆಚ್ಚಾಗಿರುತ್ತದೆ. ಇದರಿಂದಾಗಿ ಒತ್ತಡ ಕೂಡಾ ಸಾಮಾನ್ಯ. ಈ ಒತ್ತಡವು ರಾತ್ರಿಯ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ರಾತ್ರಿ ಸರಿಯಾಗಿ ನಿದ್ರೆ ಮಾಡುವುದು ಸಾಧ್ಯವಾಗುವುದಿಲ್ಲ. ರಾತ್ರಿ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಆಗ ಮಾತ್ರ 8 ಗಂಟೆಗಳ ಕಾಲ ಆರಾಮವಾಗಿ  ನಿದ್ದೆಗೆ ಜಾರುವುದು ಸಾಧ್ಯವಾಗುತ್ತದೆ. 


3. ಧ್ಯಾನ ಮಾಡಿ : 
ಧ್ಯಾನ ಜೀವನದ ಪ್ರಮುಖ ಭಾಗವಾಗಿದೆ. ಈ ಮೂಲಕ ಉದ್ವೇಗ ಮತ್ತು ಆತಂಕವನ್ನು ಒದ್ದೋಡಿಸಬಹುದು. ಇದಕ್ಕಾಗಿ, ತಜ್ಞರ ಸಹಾಯವನ್ನು ತೆಗೆದುಕೊಳ್ಳಿ. ನಿರಂತರ ಧ್ಯಾನ ಮಾಡುತ್ತಿದ್ದಂತೆಯೇ ಕೆಲವು ದಿನಗಳ  ನಂತರ, ಶಾಂತವಾಗಿ ಮಲಗುವುದು ಸಾಧ್ಯವಾಗುತ್ತದೆ. 


ಇದನ್ನೂ ಓದಿ : Bay Leaves: ನಿಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಈ ಎಲೆಯ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಿಸಿ


4. ರಾತ್ರಿಯಲ್ಲಿ ಟೀ ಕುಡಿಯಬೇಡಿ :
ಟೀ ಕುಡಿಯುವುದರಿಂದ ಆಯಾಸ ದೂರವಾಗುತ್ತದೆ. ತಾಜಾತನದ ಅನುಭವವಾಗುತ್ತದೆ. ಆದರೆ, ರಾತ್ರಿ ಚಹಾ ಕುಡಿದರೆ ಸರಿಯಾಗಿ ನಿದ್ದೆ ಬರುವುದಿಲ್ಲ. ಚಹಾ ಕುಡಿಯಲೇ ಬೇಕು ಎಂದಿದ್ದರೆ ರಾತ್ರಿಯ ಬದಲು ಸಂಜೆ ಚಹಾ ಕುಡಿಯಿರಿ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.