Deepika Padukone Diet Plan : ದೀಪಿಕಾ ಪಡುಕೋಣೆ ಮುಖ ಸೌಂದರ್ಯಕ್ಕೆ  ಎಷ್ಟು ಒತ್ತು ನೀಡುತ್ತಾರೆಯೋ ಅಷ್ಟೇ ಪ್ರಾಮುಖ್ಯತೆಯನ್ನು ದೇಹ ಸೌಂದರ್ಯ ಕಾಪಾಡಿಕೊಳ್ಳಲು ಕೂಡಾ ನೀಡುತ್ತಾರೆ.ಇದಕ್ಕಾಗಿ ವ್ಯಾಯಾಮ,ಯೋಗ, ಜಿಮ್ ಮಾಡಿ ಬೆವರಿಳಿಸುವುದು ಮಾತ್ರವಲ್ಲ ತಾವು ಸೇವಿಸುವ ಆಹಾರದ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾರೆ.ತನ್ನ ಡಯಟ್ ಲಿಸ್ಟ್ ಅನ್ನು ಕ್ರಮ ಬದ್ದವಾಗಿ ಪಾಲಿಸುತ್ತಾರೆ. ಏನು ತಿನ್ನಬೇಕು ಏನು ತಿನ್ನಬಾರದು ಎನ್ನುವ ನಿಯಮದ ಪ್ರಕಾರವೇ ಇವರ ಆಹಾರ ಸೇವನೆ ಇದೆಯಂತೆ.ಹಾಗಂತ ದೀಪಿಕಾ ಬಾಯಿಕಟ್ಟಿ ಬದುಕುತ್ತಾರೆ ಎಂದೇನಲ್ಲ.ಮೂರು ಹೊತ್ತು ಕೂಡಾ ಚೆನ್ನಾಗಿಯೇ ತಿನ್ನುತ್ತಾರೆ. ಆದರೆ ಏನು ತಿನ್ನುತ್ತಾರೆ ಎನ್ನುವುದರ ಬಗ್ಗೆ ಕಾಳಜಿ ಇರುತ್ತದೆ ಅಷ್ಟೇ. 


COMMERCIAL BREAK
SCROLL TO CONTINUE READING

ದೀಪಿಕಾ ಪಡುಕೋಣೆ ದೊಡ್ಡ ಫೂಡಿ ಅಂತೆ. ಎಲಾ ರೀತಿಯ ಆಹಾರವನ್ನೂ ಟ್ರೈ ಮಾಡುತ್ತಾ ಇರುತ್ತಾರೆಯಂತೆ. ಒಟ್ಟಿನಲ್ಲಿ ಅವರಿಗೆ ತಿನ್ನುವುದೆಂದರೆ ಇಷ್ಟ. ಇಷ್ಟಿದ್ದರೂ ತಮ್ಮ ಫಿಗರ್ ಮತ್ತು ತೂಕ ಎರಡನ್ನೂ ಚೆನ್ನಾಗಿ ನಿರ್ವಹಿಸುತ್ತಾರೆ. ಇದಕ್ಕಾಗಿ ದೀಪಿಕಾ ವಿಶೇಷ  ಡಯೆಟ್ ಪ್ಲಾನ್ ಹೊಂದಿದ್ದು ಅದನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ವರದಿಗಳ ಪ್ರಕಾರ,ದೀಪಿಕಾ ಪಡುಕೋಣೆ ಅವರ ಡಯೆಟಿಷಿಯನ್ ಪೂಜಾ ಮಖಿಜಾ ಅವರು ನಟಿಯ ಆಹಾರದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ.


ಇದನ್ನೂ ಓದಿ : ಬಿಳಿ ಕೂದಲಿಗೆ ಬೆಸ್ಟ್ ಮನೆಮದ್ದು ಈ ಹೂವಿನ ಎಣ್ಣೆ.. ಗಂಟೆಯಲ್ಲಿ ಕೂದಲು ಕಡು ಕಪ್ಪಾಗಿ ರೇಷ್ಮೆಯ ನೂಲಿನಂತಾಗುವುದು!


ದೀಪಿಕಾ ಅತಿಯಾಗಿ ಇಷ್ಟಪಡುವ ಆಹಾರಗಳಿವು : 
ತನ್ನ ನಟನೆಯ ಜೊತೆಗೆ ಸೌಂದರ್ಯ ಮತ್ತು ಫಿಟ್ನೆಸ್ ನಿಂದ ಎಲ್ಲರ ಮನ ಗೆದ್ದಿರುವ ದೀಪಿಕಾ ಪಡುಕೋಣೆ,ತಮ್ಮ ಆಹಾರ ಕ್ರಮದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ.ದೀಪಿಕಾ ಪಾಸ್ಟಾ, ಚೈನೀಸ್ ಫುಡ್ ಮತ್ತು ಭಾರತೀಯ ಆಹಾರ ಅದರಲ್ಲೂ ಬೇಳೆ ಸಾರು ಮತ್ತು ಅನ್ನವನ್ನು ಇಷ್ಟಪಡುತ್ತಾರೆ.ಸ್ಟ್ರೀಟ್ ಫುಡ್‌ನಲ್ಲಿ ಅವರಿಗೆ  ಸೇವ್ ಪುರಿ ಅಂದರೆ ತುಂಬಾ ಇಷ್ಟ.  ಸೇವ್ ಪೂರಿ ಎಲ್ಲೇ ಕಣ್ಣಿಗೆ ಬಿದ್ದರೂ ತಿನ್ನದೇ ಮುಂದೆ ಸಾಗುವುದಿಲ್ಲವಂತೆ.   


ದೀಪಿಕಾ ಅನುಸರಿಸುವ ಆಹಾರ ಪದ್ಧತಿ : 
ದೀಪಿಕಾ ಪಡುಕೋಣೆ ಸಿನಿಮಾ ಮತ್ತು ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಕಾರಣ ತಮ್ಮ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.ಆದ್ದರಿಂದ ಅವರು  ಬೆಳಿಗ್ಗೆ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ.


ಇದನ್ನೂ ಓದಿ : ನಿಮ್ಮ ಮನೆಯಂಗಳದಲ್ಲಿ ಪಾರಿಜತಾದ ಮರವೊಂದಿದ್ದರೆ ಸಾಕು, ಈ ರೋಗಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು !


ಬೆಳಗಿನ ಉಪಾಹಾರ : 
ದೀಪಿಕಾ ತುಂಬಾ ಕಟ್ಟುನಿಟ್ಟಿನ ಆಹಾರಕ್ರಮವನ್ನು ಅನುಸರಿಸುತ್ತಾರೆ. ಬೆಳಗಿನ ಉಪಾಹಾರಕ್ಕಾಗಿ, ಲೋ ಫ್ಯಾಟ್ ಹಾಲು,ಮೊಟ್ಟೆಯ ಬಿಳಿ ಭಾಗ ಅಥವಾ ದಕ್ಷಿಣ ಭಾರತೀಯ ಆಹಾರವನ್ನು ಸೇವಿಸುತ್ತಾರೆ.ಉಪ್ಪಿಟ್ಟು, ರವಾ ದೋಸೆ ಅಥವಾ ಇಡ್ಲಿಯನ್ನು ಬಹಳವಾಗಿ ಇಷ್ಟಪಡುತ್ತಾರೆ ದೀಪಿಕಾ. 


ಮಧ್ಯಾಹ್ನದ ಊಟಕ್ಕೆ  ದೀಪಿಕಾ ಚಪಾತಿ, ಪಲ್ಯ, ಸಲಾಡ್ ಮತ್ತು  ತಂದೂರಿ ಫಿಶ್ ತಿನ್ನುತ್ತಾರೆ. 


ರಾತ್ರಿ ಲಘು ಆಹಾರವನ್ನು ಸೇವಿಸುತ್ತಾರೆ.ಅಂದರೆ ಸಲಾಡ್, ಚಪಾತಿ- ಪಲ್ಯ ಮತ್ತು ಕಾಲೋಚಿತ ತರಕಾರಿಗಳನ್ನು ಸೇವಿಸುತ್ತಾರೆ. 


ಇದಲ್ಲದೆ, ಅವರು ತಾಜಾ ಹಣ್ಣುಗಳು, ಎಳ ನೀರು ಮತ್ತು ಒಣ ಹಣ್ಣುಗಳನ್ನು   ತಿನ್ನುತ್ತಾರೆ. ಇದೇ ಕಾರಣದಿಂದ ವರ್ಷಗಳು ಕಳೆದರೂ ಅವರ ತೂಕದಲ್ಲಿ ಹೆಚ್ಚಳವಾಗುವುದೂ ಇಲ್ಲ, ದೇಹ ಸೌಂದರ್ಯ ಹಾಳಾಗುವುದೂ ಇಲ್ಲ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.