Dehradun Tourist Places: ಈ ವಸಂತ ಋತುವು ಪ್ರಯಾಣಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಈ ವಸಂತ ಋತುವಿನ ಸಮಯದಲ್ಲಿ ತುಂಬಾ ಶೀತ ಅಥವಾ ಬಿಸಿಯಾಗಿರುವುದಿಲ್ಲ ಬದಲಿಗೆ ಎರಡು ಸಮವಾಗಿರುತ್ತದೆ. ಅಲ್ಲದೇ, ಡೆಹ್ರಾಡೂನ್‌ನ ತಾಪಮಾನವು ಹಗಲಿನಲ್ಲಿ ಸುಮಾರು 20 ಡಿಗ್ರಿ ಮತ್ತು ರಾತ್ರಿಯಲ್ಲಿ ಸುಮಾರು 10 ಡಿಗ್ರಿ ಇರುತ್ತದೆ. ನೀವು ಸಹ ಡೆಹ್ರಾಡೂನ್‌ಗೆ ಪ್ರವಾಸ ಹೋಗಲು ಯೋಚಿಸುತ್ತಿದ್ದರೆ, ಅಂತಹ ಕೆಲವು ಜಾಗಗಳ ಬಗ್ಗೆ ನಾವೀಂದು ಹೇಳಹೊರಟ್ಟಿದ್ದೇವೆ. ಅವುಗಳೆಂದರೆ,


COMMERCIAL BREAK
SCROLL TO CONTINUE READING

ದೇವಭೂಮಿ ಉತ್ತರಾಖಂಡ


ದೇವಭೂಮಿ ಉತ್ತರಾಖಂಡವು ತನ್ನ ಪವಿತ್ರ ನದಿಗಳು ಮತ್ತು ಸುಂದರವಾದ ಜಲಪಾತಗಳಿಗೆ ಬಹಳ ಹೆಸರುವಾಸಿಯಾಗಿದೆ. ಪರ್ವತಗಳಿಂದ ಬೀಳುವ ಜರಿಗಳ ತಂಪಾದ ನೀರನ್ನು ನೀವು ಆನಂದಿಸಲು ಬಯಸಿದರೆ, ರಾಜಧಾನಿ ಡೆಹ್ರಾಡೂನ್‌ಗೆ ನೀವು ಹೋಗಬೇಕಾಗುತ್ತದೆ. ಇಲ್ಲಿ ನೀವು ಡೆಹ್ರಾಡೂನ್ ಮುಖ್ಯ ನಗರದಿಂದ ಸುಮಾರು 16 ಕಿಮೀ ದೂರದಲ್ಲಿ ಸಹಸ್ತ್ರಧಾರವನ್ನು ಕಾಣಬಹುದು. ಇಲ್ಲಿ ನೀವು ನಿಮ್ಮ ಸ್ನೇಹಿತರು, ಕುಟುಂಬ ಅಥವಾ ಒಂಟಿಯಾಗಿ ಪ್ರಕೃತಿಯ ಸೌಂದರ್ಯವನ್ನು ಅನುಭವಿಸಬಹುದು.


ಇದನ್ನೂ ಓದಿ: ನಿಮ್ಮ ದುಬಾರಿ ಪೀಠೋಪಕರಣಗಳನ್ನು ಗೆದ್ದಲು ನಾಶ ಮಾಡುತ್ತಿದೆಯೇ? ಈ ರೀತಿಯಲ್ಲಿ ಗೆದ್ದಲು ನಿಯಂತ್ರಿಸಿ 


ದೋಯಿವಾಲಾದ ಲಾಚಿವಾಲಾ


ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ದೋಯಿವಾಲಾದಲ್ಲಿರುವ ಲಾಚಿವಾಲಾವನ್ನು ಈಗ ಲಾಚಿವಾಲಾ ನೇಚರ್ ಪಾರ್ಕ್ ಎಂದು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಸುಂದರ ನೋಟಗಳ ನಡುವೆ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಪ್ರಯತ್ನ ಮಾಡಲಾಗಿದೆ. ಇಲ್ಲಿ ಬ್ರಿಟಿಷರ ಆಳ್ವಿಕೆಯ ಕಾಲದ ಎಲ್ಲಾ ಮಾಹಿತಿಗಳು ಮ್ಯೂಸಿಯಂನಲ್ಲಿ ಲಭ್ಯವಿವೆ.


ಮಾಲ್ದೇವ್ತಾ


ಮಾಲ್ದೇವ್ತಾವನ್ನು ಡೆಹ್ರಾಡೂನ್‌ನ ಏಕಾಂತ ಮತ್ತು ಸುಂದರ ಸ್ಥಳಗಳಲ್ಲಿ ಪರಿಗಣಿಸಲಾಗಿದೆ. ಘಂಟಾ ಘರ್‌ನಿಂದ ಸುಮಾರು 18 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಮಾಲ್ದೇವತಾದಲ್ಲಿದೆ, ಪರ್ವತಗಳು, ನದಿ ಮತ್ತು ಕಲ್ಲುಗಳ ಮೂಲಕ ಹಾದುಹೋಗುವ ನೀರು ವೇಗದ ಜೀವನದಿಂದ ದೂರವಾದ ವಿಶ್ರಾಂತಿಯ ಅನುಭವವನ್ನು ನೀಡುತ್ತದೆ.


ಇದನ್ನೂ ಓದಿ: IRCTC: ಹೈದರಾಬಾದ್ ಟು ಕೇರಳ ಪ್ರವಾಸ.. ಕಡಿಮೆ ಬಜೆಟ್ ನಲ್ಲಿ ಸೂಪರ್ ಪ್ಯಾಕೇಜ್..


ರಾಬರ್ಸ್ ಕೇವ್


ಡೆಹ್ರಾಡೂನ್‌ನ ಗರ್ಹಿ ಕ್ಯಾಂಟ್‌ನಲ್ಲಿರುವ 'ರಾಬರ್ಸ್ ಕೇವ್' ಅನ್ನು ಮಿನಿ ಥೈಲ್ಯಾಂಡ್ ಎಂದು ಕರೆಯಲಾಗುತ್ತದೆ. ನೀವು ಗುಹೆಗಲೊಳಗೆ ಹರಿಯುವ ನೀರಿನ ಮೂಲಕ ಹಾದುಹೋದಾಗ, ಅದು ತುಂಬಾ ವಿಭಿನ್ನವಾದ ಅನುಭವವನ್ನು ಪಡೆಯುವಿರಿ. ಕೇವಲ 100 ರೂಪಾಯಿಯಲ್ಲಿ ಡಕಾಯಿತರ ಜೊತೆ ಈ ಗುಹೆಗೆ ಭೇಟಿ ನೀಡಬಹುದು.


ಬುದ್ಧನ ಮಂದಿರ


ಒತ್ತಡದ ಬದುಕಿನಲ್ಲಿ ಮನಃಶಾಂತಿಗಾಗಿ ಎಲ್ಲಿಗಾದರೂ ಹೋಗಬೇಕೆಂದರೆ ಬುದ್ಧನ ಮಂದಿರವು ಒಂದು ಉತ್ತಮ ಸ್ಥಳವಾಗಿದೆ. ರಾಜಧಾನಿ ಡೆಹ್ರಾಡೂನ್‌ನ ಕ್ಲೆಮೆಂಟ್ ಟೌನ್ ಪ್ರದೇಶದಲ್ಲಿ ನೆಲೆಗೊಂಡಿರುವ ಬುದ್ಧ ದೇವಾಲಯವು ಐತಿಹಾಸಿಕ ದೇವಾಲಯವಾಗಿದ್ದು, ವಿದೇಶಿ ಪ್ರವಾಸಿಗರ ನಿರಂತರ ಹರಿವು ಇಲ್ಲಿ ಇದ್ದೆ ಇರುತ್ತದೆ. 1965 ರಲ್ಲಿ ನಿರ್ಮಿಸಲಾದ ಈ ದೇವಾಲಯವು ಸುಮಾರು 103 ಅಡಿ ಎತ್ತರದ ಬುದ್ಧನ ಪ್ರತಿಮೆಯನ್ನು ಹೊಂದಿದೆ.


(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು  ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.  Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.