ನವದೆಹಲಿ : ಶಿವ ಪಾರ್ವತಿ  ಕಲ್ಯಾಣ ನಡೆದಿದ್ದು ಎಲ್ಲಿ..?   ಧರ್ಮ ಗ್ರಂಥಗಳಲ್ಲಿ ಪ್ರತಿಯೊಂದಕ್ಕೂ ಸಾಕ್ಷ್ಯಗಳು ಸಿಗುತ್ತವೆ. ನಾವು ನಂಬುವ ಪ್ರತಿಯೊಂದಕ್ಕೂ ಧರ್ಮಗ್ರಂಥಗಳು ಸಾಕ್ಷಗಳನ್ನೂ ತೋರಿಸುತ್ತೇವೆ.  ಆಸ್ತಿಕರಿಗೆ ಅದು ಪರಮ ಶ್ರದ್ದೆಯ ವಿಚಾರ.  ಹಾಗಾದರೆ, ಶಿವ-ಪಾರ್ವತಿ ಕಲ್ಯಾಣವಾಗಿದ್ದು (Shiv Parvati Marriage) ಎಲ್ಲಿ..? ಮಾತೆ ಪಾರ್ವತಿಯು  ಪರಮೇಶ್ವರನನ್ನು ಒಲಿಸಿಕೊಳ್ಳಲು ತಪಸ್ಸುಮಾಡಿದ ಆ ಸ್ಥಳ ಯಾವುದು..? ನಾವು ಹೇಳ್ತೇವೆ. 


COMMERCIAL BREAK
SCROLL TO CONTINUE READING

ಇದು ಪಾರ್ವತಿ ಪರಮೇಶ್ವರರ ಕಲ್ಯಾಣ ನಡೆದ ಪವಿತ್ರ ನೆಲ:
ಪರಮೇಶ್ವರನ (Lord Shiv) ಒಲುಮೆಗೆ ಪಾರ್ವತಿ ತಪಸ್ಸು ಮಾಡಿದ ಸ್ಥಳ ಈಗ ಗೌರಿಕುಂಡ (Gauri Kund) ಎಂದು ಪ್ರಸಿದ್ದಿ ಪಡೆದಿದೆ.  ಯಾವ ಸ್ಥಳದಲ್ಲಿ ಪಾರ್ವತಿ-ಪರಮೇಶ್ವರರ ವಿವಾಹವಾಗಿತ್ತೋ, ಆ ಸ್ಥಳದಲ್ಲೀಗ ತ್ರಿಯುಗ ನಾರಾಯಣ (Triyuginarayan Temple) ಮಂದಿರವಿದೆ. 


ಇದನ್ನೂ ಓದಿ Vastu Tips : ಶಾಂತಂ ಪಾಪಂ..! ತಪ್ಪಿಯೂ ದೇವರ ಮನೆಯಲ್ಲಿ ಹೀಗೆಲ್ಲಾ ಮಾಡಬೇಡಿ.!


ಈಗಲೂ ಉರಿಯುತ್ತಿದೆ ಕಲ್ಯಾಣಕ್ಕೆ ಸಾಕ್ಷಿಯಾಗಿದ್ದ  ಅಗ್ನಿಕುಂಡ.!:
 ತ್ರಿಯುಗ ನಾರಾಯಣದಲ್ಲಿ ಶಂಕರ-ಪಾರ್ವತಿ ಸತಿಪತಿಯಾರದರು ಎಂದು ಹೇಳಲಾಗುತ್ತದೆ.  ಇಲ್ಲೊಂದು ಅಗ್ನಿ ಜ್ಯೋತಿ ನಿರಂತರ ಉರಿಯುತ್ತಿರುತ್ತದೆ.  ಈ ಅಗ್ನಿ ತ್ರೇತಾಯುಗದಿಂದ (Treta Yug) ಆರಂಭವಾಗಿ ಇಲ್ಲಿಯವರೆಗೂ ಉರಿಯುತ್ತಲೇ ಇದೆ ಎಂದು ಹೇಳುತ್ತಾರೆ.  ಇದು ಶಿವಪಾರ್ವತಿ ಕಲ್ಯಾಣ ನಡೆದ ಹವನ ಕುಂಡ ಎಂದು ಹೇಳಲಾಗುತ್ತದೆ.  ಇದೇ ಹವನಕುಂಡದಲ್ಲಿ (Havan Kund) ಅಗ್ನಿದೇವನನ್ನೇ ಸಾಕ್ಷಿಯಾಗಿಟ್ಟುಕೊಂಡು ಪಾರ್ವತಿ ಪರಮೇಶ್ವರರ ಕಲ್ಯಾಣವಾಗುತ್ತದೆ. ಅದಕ್ಕೆ ಸಾಕ್ಷಿಯಾದ  ಅಗ್ನಿ ಕುಂಡ ಈಗಲೂ ಉರಿಯುತ್ತಲೇ ಇದೆ. 


ಗೌರಿಯ ತಪಸ್ಸು ನಡೆದ ಸ್ಥಳ  ಈಗ ಗೌರಿಕುಂಡ :
ಪೌರಾಣಿಕ ಕಥೆಗಳನ್ನುನೋಡುವುದಾದರೆ, ಪರ್ವತರಾಜನ ಮಗಳಾಗಿ ಪಾರ್ವತಿ (Parvathi) ಜನ್ಮ ತಳೆಯುತ್ತಾಳೆ.  ಈ ಜನ್ಮದಲ್ಲಿ ಶಿವನನ್ನು ವರಿಸಲು ಪಾರ್ವತಿ ಕಠಿಣ ತಪಸ್ಸು ಮತ್ತು ಧ್ಯಾನ ದಲ್ಲಿ ತೊಡಗುತ್ತಾರೆ. ಯಾವ ಸ್ಥಳದಲ್ಲಿ ಪರಮೇಶ್ವರನನ್ನು ಒಲಿಸಲು ಪಾರ್ವತಿ ತಪಸ್ಸು ಮಾಡಿದರೋ, ಆ ಸ್ಥಳ ಇಂದು ಗೌರಿ ಕುಂಡವೆಂದು ಹೆಸರು ಪಡೆದಿದೆ. ತ್ರಿಯುಗನಾರಾಯಣಕ್ಕೆ ತೆರಳುವವರು ಗೌರಿಕುಂಡಕ್ಕೆ ಬಂದು ದರ್ಶನ ಪಡೆಯುತ್ತಾರೆ. 


ಇದನ್ನೂ ಓದಿ Sunday Remedies: ಭಾನುವಾರ ಅಪ್ಪಿ-ತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ


ತ್ರಿಯುಗನಾರಾಯಣ ಹಳ್ಳಿಯಲ್ಲಿದೆ ಮೂರು ಕುಂಡ :
ಮಂದಾಕಿನಿ, ಸೋನ ಮತ್ತು ಗಂಗಾ ಈ ತ್ರಿವೇಣಿ ಸಂಗಮದಲ್ಲಿದೆ (Triveni Sangama) ತ್ರಿಯುಗ ನಾರಾಯಣ ಹಳ್ಳಿ.  ಈ ಮದುವೆಗೆ ದೇವಾದಿದೇವತೆಗಳೆಲ್ಲಾ ಬಂದಿದ್ದರಂತೆ. ಅವರೆಲ್ಲಾ ಇದೇ  ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದರಂತೆ.  ಈಗಲೂ ಇಲ್ಲಿ ನೀರಿನ (Water) ಮೂರು  ಕುಂಡಗಳಿರುವುದು ನೋಡಬಹುದು.   ಒಂದನ್ನು ರುದ್ರಕುಂಡ, ಮತ್ತೊಂದು ವಿಷ್ಣು ಕುಂಡ ಮತ್ತು ಮೂರನೆಯದ್ದನ್ನು ಬ್ರಹ್ಮ ಕುಂಡ ಎಂದು ಕರೆಯಲಾಗುತ್ತದೆ.  ಈ ಮೂರೂ ಕುಂಡಗಳಿಗೆ ಸರಸ್ವತಿ ಕುಂಡದಿಂದ  ಜಲಧಾರೆ ಬಂದು ಸೇರುತ್ತದೆ.
ಈ ಕುಂಡದಿಂದ  ಸ್ನಾನಮಾಡಿದರೆ, ಸಂತಾನವಿಲ್ಲದವರಿಗೆ ಸಂತಾನ ಭಾಗ್ಯವಾಗುತ್ತದೆ ಎಂದು ಹೇಳುತ್ತಾರೆ.  ಇದೇ ಸ್ಥಳದಲ್ಲಿ ಮಹಾವಿಷ್ಣು (Mahavishnu) ವಾಮನ ಅವತಾರ ತಳೆದು ಬಲೀಂದ್ರನನ್ನು ಮೆಟ್ಟಿದ ಎಂದೂ ಹೇಳಲಾಗುತ್ತದೆ. ಕಥೆ, ಪ್ರತೀತಿಗಳು ಯಾವುದೇ ಇರಲಿ, ಈ ಸ್ಥಳಗಳು ಈಗಲೂ ಹೆಸರುವಾಸಿ. ಸಾಕಷ್ಟು ಭಕ್ತರು ಇಲ್ಲಿಗೆ ಬರ್ತಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.