ನಿದ್ರಾಹೀನತೆ ಸಮಸ್ಯೆ ನಿಮಗೂ ಕಾಡುತ್ತಿದ್ದರೆ... ಈ ಉಪಾಯಗಳನ್ನೊಮ್ಮೆ ಟ್ರೈ ಮಾಡಿ
ಕೊರೊನಾ ವೈರಸ್ ನ ಪ್ರಕೋಪ ಹಾಗೂ ಆ ಬಳಿಕ ಘೋಷಿಸಲಾಗಿರುವ ಲಾಕ್ ಡೌನ್ ಹಿನ್ನೆಲೆ ಜನರಿಗೆ ನಿದ್ರೆಯ ಸಮಸ್ಯೆ ಎದುರಾಗಿದೆ ಎಂದು ಹಲವರು ದೂರಿದ್ದಾರೆ.
ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಎರಿಕೆಯಾಗುತ್ತಿದೆ. ಇನ್ನೊಂದೆಡೆ ಕೊರೊನಾ ವೈರಸ್ ಗೆ ಸಂಬಂಧಿಸಿದ ಸುದ್ದಿಗಳು ಸಂಖ್ಯೆಯಲ್ಲಿ ಯಾವ ರೀತಿ ಏರಿಕೆಯಾಗಿದೆ ಎಂದರೆ ಜನರು ನಿದ್ದೆಯಲ್ಲಿಯೂ ಕೂಡ ಬೆಚ್ಚಿಬೀಳುತ್ತಿದ್ದಾರೆ. ಈ ಕುರಿತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದೀಗ ದೂರು ನೀಡುತ್ತಿದ್ದು, ಕೊರೊನಾ ಪ್ರಕೋಪ ಹಾಗೂ ನಂತರದ ಲಾಕ್ ಡೌನ್ ಹಿನ್ನೆಲೆ ತಮ್ಮ ನಿದ್ದೆ ಹಾಳಾಗಿದೆ ಎನ್ನುತ್ತಿದ್ದಾರೆ.
ಈ ಸುದ್ದಿಗಳಿಂದ ಜನರ ಎಂಗ್ಸೈಟಿ ಹಾಗೂ ಚಿಂತೆ ಹೆಚ್ಚಾಗುತ್ತಿದೆ. ನಾಳೆಯ ಚಿಂತೆ ಇದೀಗ ಜನರನ್ನು ಸತಾಯಿಸಲಾರಂಭಿಸಿದೆ. ಸಾಮಾಜಿಕ ಅಂತರ ಕಾಯುವಿಕೆಯಿಂದ ಜನರು ಬೇಸತ್ತು ಹೋಗಿದ್ದಾರೆ. ದಿನವಿಡೀ ಆಲಸ್ಯ ಮನದಲ್ಲಿ ಮನೆ ಮಾಡಿರುತ್ತದೆ. ರಾತ್ರಿಯಿಡಿ ನಿದ್ರೆ ಬರುತ್ತಿಲ್ಲ ಹಾಗೂ ನಿದ್ರೆ ಬಂದರೂ ಕೂಡ ಸರಿಯಾದ ನಿದ್ರೆ ಬರುತ್ತಿಲ್ಲ. ಇಂತಹ ಅನುಭವ ನಿಮಗೂ ಆಗಿರಬಹುದು. ಒಂದು ವೇಳೆ ಇದಕ್ಕೆ ಉತ್ತರ ಹೌದು ಎಂದಾದಲ್ಲಿ ಕೆಲ ಸಂಗತಿಗಳನ್ನು ಅನುಸರಿಸಿ ನೀವು ಈ ಸಮಸ್ಯೆಗೆ ಮುಕ್ತಿ ಹಾಡಬಹುದಾಗಿದೆ.
ಇದನ್ನು ಓದಿ- Corona ಕಾಲದಲ್ಲಿ ಇಮ್ಯೂನಿಟಿ ಹೆಚ್ಚಿಸುವ ಕಷಾಯದಿಂದಲೂ ಕೂಡ ಅಪಾಯ, ನಿತ್ಯ ಎಷ್ಟು ಸೇವನೆ ಉತ್ತಮ?
ಈ ಕುರಿತು ಮಾತನಾಡುವ ಮುಂಬೈ ಥೆರಪಿಸ್ಟ್ ಸಾಮಂಥಾ ಕೋಸ್ಟ್ ಬಿರ್, "ನನ್ನ ಬಳಿ ಬರುವ ಶೇ.90 ರಷ್ಟು ಜನರು ಭಯ ಹಾಗೂ ಎಂಗ್ಸೈಟಿ ಕಾರಣ ನಿದ್ರೆ ಬರುತ್ತಿಲ್ಲ ಎಂದು ದೂರುತ್ತಿದ್ದಾರೆ. ಸ್ಲೀಪಿಂಗ್ ಡಿಸ್ ಆರ್ಡರ್ ಇಂದು ಒಂದು ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಇದರಿಂದ ಬೆಳಗ್ಗೆ ಏಳುವಾಗ ಕಿರಿಕಿರಿ, ಶರೀರ ನೋವು ಹಾಗೂ ವಿಪರೀತ ತಲೆನೋವುಗಳಂತಹ ಸಮಸ್ಯೆಗಳು ಎದುರಾಗುತ್ತವೆ" ಎಂದು ಹೇಳಿದ್ದಾರೆ.
ಇದಕ್ಕೆ ಡಾ. ಕೋಸ್ಟ್ ಬಿರ್ ಕೆಲ ಉಪಾಯಗಳನ್ನು ಸೂಚಿಸಿದ್ದಾರೆ. ಹಾಗಾದರೆ ಬನ್ನಿ ಅವರು ನೀಡಿರುವ ಕೆಲ ವಿಶೇಷ ಟಿಪ್ಸ್ ಗಳೇನು ಎಂಬುದನ್ನು ತಿಳಿಯೋಣ,
ಬೇಗನೆ ಮಲಗಿ
ರಾತ್ರಿ ಹೊತ್ತು ಸಮಯಕ್ಕೆ ನಿಮ್ಮ ರಾತ್ರಿ ಊಟ ಮುಗಿಸಿ 10 ಗಂಟೆಗೂ ಮುನ್ನವೇ ಮಲಗಿ. ಮೊಬೈಲ್ ಹಾಗೂ ಲ್ಯಾಪ್ ಟಾಪ್ ನಿಂದ ದೂರವಿರಿ. ನಿದ್ರೆ ಬರಲಿ ಅಥವಾ ನಿದ್ರೆ ಬಾರದೆ ಇರಲಿ ಕಣ್ಣು ಮುಚ್ಚಿ ಮಲಗಿಕೊಳ್ಳಿ. ಇದಕ್ಕೆ ಸ್ಲೀಪ್ ಹೊಮಿಯಾಸ್ಟಿಸ್ ಸ್ಥಿತಿ ಎಂದು ಕರೆಯುತ್ತಾರೆ. ಇದರಿಂದಲೂ ಕೂಡ ನಿಮ್ಮ ಶರೀರಕ್ಕೆ ಸಾಕಷ್ಟು ಆರಾಮ ಸಿಗುತ್ತದೆ. ಈ ಮಧ್ಯೆಯೂ ಕೂಡ ನಿಮಗೆ ನಿದ್ರೆ ಬಾರದೆ ಇದ್ದಲ್ಲಿ ಲೈಟ್ ಹಾಗೂ ಮೊಬೈಲ್ ಉರಿಸಬೇಡಿ. ಶಾಂತಿಯಿಂದ ಮಲಗಿಕೊಳ್ಳಿ.
ಸಮಯಕ್ಕೆ ತಕ್ಕಂತೆ ಎದ್ದೇಳಿ
ನಿದ್ರೆಗೆ ಜಾರುವ ಹಾಗೂ ನಿದ್ರೆಯಿಂದ ಏಳುವ ಟೈಮ್ ಟೇಬಲ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಿ. ಕಾರಣವಿಲ್ಲದೆ ಬೆಡ್ ಮೇಲೆ ಉರುಳಾಡಿದರೆ ನಿಮ್ಮ ದಿನದ ಎಜೆಂಡಾ ಕೂಡ ಸೆಟ್ ಆಗುವುದಿಲ್ಲ, ಆರಾಮ ಕೂಡ ಸಿಗುವುದಿಲ್ಲ. ಹೀಗಾಗಿ ದಿನವಿಡೀ ನಿಮ್ಮ ಶರೀರದಲ್ಲಿ ಆಲಸ್ಯ ಮನೆ ಮಾಡುತ್ತದೆ.
ನಿದ್ರೆಯ ಹೆದರಿಕೆ
ಕೆಲವರು ನಿದ್ರೆಗಾಗಿ ಹಾಸಿಗೆಗೆ ತೆರಳಿದರೆ ಭಯ ಕಾಡುತ್ತದೆ ಎಂದು ದೂರಿದ್ದಾರೆ. ಮಲಗುವುದೇ ಅವರ ಪಾಲಿಗೆ ಭೀತಿಯ ಕಾರಣವಾಗಿದೆ. ಮಾರನೆಯ ದಿನ ಬೆಳಗ್ಗೆ ಏಳುತ್ತಲೇ ಯಾವ ಕೆಟ್ಟ ಸುದ್ದಿ ತಮ್ಮ ಕಿವಿಗೆ ಬೀಳುತ್ತದೆ ಎಂಬ ಭಯ ಅವರನ್ನು ಕಾಡುತ್ತಿದೆ.
ಇದನ್ನು ಓದಿ- ಕರೋನಾದೊಂದಿಗಿನ ಯುದ್ಧದಲ್ಲಿ 'ಬೇವು' ಒಂದು ಪ್ರಮುಖ ಅಸ್ತ್ರ
ಈ ಕುರಿತು ಹೇಳಿಕೆ ನೀಡುವ ತಜ್ಞರು, ಈ ರೀತಿಯ ಭಯವನ್ನು ತಮ್ಮ ಮನದಿಂದ ಹೊಡೆದೋಡಿಸಲು ಸಕಾರಾತ್ಮಕ ಯೋಚನೆಯನ್ನು ಹೆಚ್ಚಿಸಿ, ನಕಾರಾತ್ಮಕ ಯೋಚನೆಯನ್ನು ತೊಲಗಿಸುವುದು ಆವಶ್ಯಕವಾಗಿದೆ. ನಿಮ್ಮನ್ನು ಭಯಕ್ಕೆ ಈಡು ಮಾಡುವ ಜನರಿಂದ ದೂರವಿರಿ. ಮಲಗಲು ಹೋಗುವುದಕ್ಕಿಂತ ಮೊದಲು ಬಿಸಿ ನೀರಿನಲ್ಲಿ ಅಥವಾ ಬಿಸಿ ಹಾಲಿನಲ್ಲಿ ಅರಿಶಿಣ ಬೆರೆಸಿ ಸೇವಿಸಿ. ಸ್ವಲ್ಪ ಸಮಯ ಪ್ರಾಣಾಯಾಮ ಮಾಡಿ. ಬೇಸಿಗೆ ಬರುತ್ತಿರುವುದರಿಂದ ಸ್ನಾನ ಮಾಡುವಾಗ ನೀರಿನಲ್ಲಿ ಯುಕೆಲಿಪ್ಟಿಸ್ ನ ಕೆಲ ಹನಿಗಳನ್ನು ಬೆರೆಸಿ ಸ್ನಾನ ಮಾಡಿ. ಇದರಿಂದ ಆತಂಕ ಕಡಿಮೆಯಾಗುತ್ತದೆ.
ಬೆಳಗ್ಗೆ ಏಳುತ್ತಲೇ ದಿನದ ಪ್ಲಾನಿಂಗ್ ಮಾಡಿಕೊಳ್ಳಿ
ಬೆಳಗ್ಗೆ ಏಳುತ್ತಲೇ ಇಡೀ ದಿನದ ಪ್ಲಾನಿಂಗ್ ಮಾಡಿಕೊಳ್ಳಿ. ಇದರಲ್ಲಿ ಅರ್ಧ ಗಂಟೆ ವ್ಯಾಯಾಮ, ಮನೆ ಕೆಲಸ ಹಾಗೂ ಆಫಿಸ್ ಕೆಲಸದ ಜೊತೆಗೆ ನಿಮ್ಮ ಆಸಕ್ತಿಗೂ ಸ್ವಲ್ಪ ಜಾಗ ನೀಡಿ. ದಿನವಿಡೀ ಮಲಗಬೇಡಿ. ಕೇವಲ ಎರಡರಿಂದ ಮೂರು ಬಾರಿ ಸುದ್ದಿಗಳನ್ನು ಆಲಿಸಿ. ದಿನವಿಡೀ ನೀವು ಬ್ಯೂಸಿ ಆಗಿದ್ದರೆ, ರಾತ್ರಿ ನಿಮ್ಮ ಶರೀರ ದಣಿದು, ಆರಾಮದ ನಿದ್ದೆ ನಿಮ್ಮದಾಗುತ್ತದೆ.