ಈ 4 ಹಸಿರು ಜ್ಯೂಸ್ ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ ಇಂದೇ ಕೂದಲುದುರುವಿಕೆಗೆ ಗುಡ್ ಬೈ ಹೇಳಿ!
Green Juices For Hair Fall: ನಿಮ್ಮ ಕೂದಲಿನ ಬೆಳವಣಿಗೆಯೂ ನಿಂತುಹೋಗಿದ್ದು ಮತ್ತು ಕೂದಲು ಉದುರುವಿಕೆಯ ಬಗ್ಗೆ ಚಿಂತಿಸುತ್ತಿದ್ದರೆ, ಕೆಲವು ತರಕಾರಿ ಜ್ಯೂಸ್ ಗಳನ್ನು ನೀವು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಬಹುದು ಮತ್ತು ಅವು ನಿಮಗೆ ಪ್ರಯೋಜನಕಾರಿಯಾಗಬಹುದು. Lifestyle News In Kannada
ಬೆಂಗಳೂರು: ನಮ್ಮ ಸುತ್ತಲೂ ಅನೇಕ ಹಸಿರು ತರಕಾರಿಗಳಿವೆ, ಅವುಗಳ ರಸವನ್ನು ಕುಡಿಯುವುದರಿಂದ ಕೂದಲಿನ ಬೆಳವಣಿಗೆಗೆ ಅವು ಸಹಾಯ ಮಾಡುತ್ತವೆ. ಕೂದಲು ದಟ್ಟವಾಗಲು, ನೀವು ನಿಯಮಿತವಾಗಿ ಈ ಹಸಿರು ತರಕಾರಿಗಳ ರಸವನ್ನು ಕುಡಿಯಬಹುದು ಮತ್ತು ಅವುಗಳನ್ನು ನೀವು ನಿಮ್ಮ ನೆತ್ತಿಯ ಮೇಲೂ ಅನ್ವಯಿಸಬಹುದು. ಇದು ನಿಮ್ಮ ಕೂದಲು ದಟ್ಟವಾಗಿಸುವುದರ ಜೊತೆಗೆ, ಕೂದಲು ಉದುರುವಿಕೆಯನ್ನು ಕೂಡ ನಿಲ್ಲಿಸುತ್ತವೆ ಮತ್ತು ಕೂದಲಿನ ಇತರ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತವೆ. ಇಲ್ಲಿ ನಾವು ನಿಮಗೆ 5 ಹಸಿರು ತರಕಾರಿ ರಸಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಅವು ಪೌಷ್ಟಿಕಾಂಶದಿಂದ ಸಮೃದ್ಧವಾಗಿದೆ, ಕೂದಲನ್ನು ಆರೋಗ್ಯಕರವಾಗಿಡುತ್ತವೆ ಮತ್ತು ಇದೇ ವೇಳೆ ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ಕೂಡ ನೀಗಿಸುತ್ತವೆ.
ಪಾಲಕ ರಸ
ಪಾಲಕ್ ರಸವು ವಿಶೇಷವಾಗಿ ಚಳಿಗಾಲದಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ, ಇದರಲ್ಲಿ ಅನೇಕ ರೀತಿಯ ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ. ಇದು ಕೂದಲು ಹಾಗೂ ತ್ವಚೆಗೂ ಪ್ರಯೋಜನಕಾರಿಯಾಗಿದೆ. ನಿಮ್ಮ ನೆತ್ತಿಯು ತುಂಬಾ ತುರಿಕೆ ಹೊಂದಿದ್ದು ಮತ್ತು ನಿಮ್ಮ ಕೂದಲು ತುಂಬಾ ತೆಳುವಾಗಿದ್ದರೆ, ನೀವು ಖಂಡಿತವಾಗಿಯೂ ಪಾಲಕ ರಸವನ್ನು ಟ್ರೈ ಮಾಡಬಹುದು. ಇದನ್ನು ಸೇವಿಸುವುದರಿಂದ ಕೂದಲು ದಟ್ಟವಾಗುತ್ತವೆ. ಇದರಲ್ಲಿ ಬಿ ಜೀವಸತ್ವಗಳು ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತವೆ.
ಸೌತೆಕಾಯಿ ರಸ
ಪ್ರತಿದಿನ ಒಂದು ಲೋಟ ಸೌತೆಕಾಯಿ ರಸವನ್ನು ಕುಡಿಯುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ. ಇದು ಕೂದಲಿನ ಬೆಳವಣಿಗೆಗೆ ಮಾತ್ರವಲ್ಲದೆ ಕೂದಲಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವ ಮತ್ತು ಜೀವಕೋಶಗಳು ಹಾಗೂ ಕಿರುಚೀಲಗಳಲ್ಲಿ ಹಿಮೋಗ್ಲೋಬಿನ್ನ ಪರಿಚಲನೆಯನ್ನು ಹೆಚ್ಚಿಸುವ ಕಿಣ್ವವು ಇದರಲ್ಲಿ ಕಂಡುಬರುತ್ತದೆ.
ಕೊತ್ತಂಬರಿ ಸೊಪ್ಪಿನ ರಸ
ಹಸಿರು ಕೊತ್ತಂಬರಿಯು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ, ನೀವು ಕೊತ್ತಂಬರಿ ರಸವನ್ನು ಕುಡಿಯಲು ಇಷ್ಟಪಡದಿದ್ದರೆ ನೀವು ಅದರಲ್ಲಿ ಯಾವುದೇ ಇತರ ತರಕಾರಿಗಳನ್ನು ಸೇರಿಸಿಕೊಳ್ಳಬಹುದು. ಕೊತ್ತಂಬರಿ ಸೊಪ್ಪು ನಿಮ್ಮ ಹೊಟ್ಟೆಯನ್ನು ಉತ್ತಮಗೊಳಿಸುತ್ತದೆ ಮತ್ತು ಮಲಬದ್ಧತೆ ಮತ್ತು ಇತರ ಸಮಸ್ಯೆಗಳನ್ನು ತಡೆಯುತ್ತದೆ.
ಇದನ್ನೂ ಓದಿ-ಒಂದು ಚಮಚೆ ಅರಿಶಿನದಲ್ಲಿ ಈ ಒಂದು ಪದಾರ್ಥ ಬೆರೆಸಿ ತಲೆಗೆ ಹಚ್ಚಿದರೆ, ಬಿಳಿಕೂದಲು ಬುಡದಿಂದ ಕಪ್ಪಾಗುತ್ತವೆ!
ಅಲೋವೆರಾ ರಸ
ಅಲೋವೆರಾ ಅತ್ಯುತ್ತಮವಾದ ಹಸಿರು ಜ್ಯೂಸ್ ಆಗಿದ್ದು ಅದು ಕೂದಲಿನ ಬೆಳವಣಿಗೆಗೆ ಮತ್ತು ಅದನ್ನು ಬಲವಾಗಿಡಲು ಸಹಾಯ ಮಾಡುತ್ತದೆ.ಇದು ತಲೆಹೊಟ್ಟು ಮತ್ತು ತುರಿಕೆಯನ್ನು ಸಹ ತೆಗೆದುಹಾಕುತ್ತದೆ.ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದು ಕೂದಲಿಗೆ ಪ್ರಯೋಜನಕಾರಿಯಾಗಿದೆ.-
ಇದನ್ನೂ ಓದಿ-ಈರುಳ್ಳಿ-ಬೆಳ್ಳುಳ್ಳಿ ಸಿಪ್ಪೆಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ನಿಮ್ಮ ಬಿಳಿಕೂದಲುಗಳನ್ನು ಈ ರೀತಿ ಕಪ್ಪಾಗಿಸಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ