Split Hair Remedies: ಸುಂದರ, ಆಕರ್ಷಕ ಕೂದಲನ್ನು ಪಡೆಯುವುದು ಪ್ರತಿಯೊಬ್ಬರ ಸಾಮಾನ್ಯ ಬಯಕೆ ಆಗಿರುತ್ತದೆ. ಅದರಲ್ಲೂ ಮಹಿಳೆಯರಿಗೆ ದಪ್ಪ, ಬಲವಾದ ಸುಂದರವಾದ, ಹೊಳೆಯುವ ಕೂದಲನ್ನು ಪಡೆಯುವ ಆಸೆ ಇದ್ದೇ ಇರುತ್ತದೆ. ಆದರೆ, ಕಳಪೆ ಜೀವನ ಶೈಲಿ ಹಾಗೂ ಸರಿಯಾದ ಆರೈಕೆಯಿಲ್ಲದೆ ಕೂದಲು ಒಡೆಯುವುದು ಸಾಮಾನ್ಯ ಸಂಗತಿ. ಆದಾಗ್ಯೂ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ತೈಲಗಳ ಸಹಾಯದಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು. 


COMMERCIAL BREAK
SCROLL TO CONTINUE READING

ಸ್ಪ್ಲಿಟ್ ಹೇರ್ ಸಮಸ್ಯೆಯಿಂದ (Split Hair Problem) ಮುಕ್ತಿ ಪಡೆಯಲು ಕೆಲವು ಎಣ್ಣೆಗಳು ಪ್ರಯೋಜನಕಾರಿ ಆಗಿವೆ. ನೀವು ಕೂದಲು ಒಡೆಯುವಿಕೆಯಿಂದ ಕಂಗಾಲಾಗಿದ್ದರೆ ಈ ಎಣ್ಣೆಗಳನ್ನು ಒಮ್ಮೆ ಟ್ರೈ ಮಾಡುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 


ಕೊಬ್ಬರಿಎಣ್ಣೆ: 
ಕೊಬ್ಬರಿ ಎಣ್ಣೆಯು ನಿಮ್ಮ ಕೂದಲನ್ನು ದೀರ್ಘಕಾಲದವರೆಗೆ ಹೈಡ್ರೀಕರಿಸುತ್ತದೆ. ಇದು ಕೂದಲನ್ನು ಧೂಳು ಮತ್ತು ಮಾಲಿನ್ಯದಿಂದ ರಕ್ಷಿಸುತ್ತದೆ. ವಾರಕ್ಕೆರಡು ಬಾರಿ ಕೂದಲಿಗೆ ಕೊಬ್ಬರಿ ಎಣ್ಣೆಯನ್ನು ಅಪ್ಪ್ಲೈ ಮಾಡುವುದರಿಂದ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 


ಇದನ್ನೂ ಓದಿ- ಅಲೋವೆರಾ ಫೇಸ್ ಪ್ಯಾಕ್ಸ್ ಬಳಸಿ ಚರ್ಮದ ಈ ಸಮಸ್ಯೆಗಳಿಗೆ ಹೇಳಿ ಗುಡ್ ಬೈ


ಬಾದಾಮಿ ಎಣ್ಣೆ: 
ಬಾದಾಮಿ ಎಣ್ಣೆಯಲ್ಲಿ (Badami Oil) ವಿಟಮಿನ್ ಇ ಮತ್ತು ವಿಟಮಿನ್ ಕೆ ಯಲ್ಲಿ ಸಮೃದ್ಧವಾಗಿದೆ, ಇದು ನಿಮ್ಮ ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ. ಬಾದಾಮಿ ಎಣ್ಣೆಯು  ಸ್ಪ್ಲಿಟ್ ಹೇರ್ ಸಮಸ್ಯೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಆಗಿದೆ. 


ಆವಕಾಡೊ ಎಣ್ಣೆ: 
ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಆವಕಾಡೊ ಎಣ್ಣೆ ಕೂದಲನ್ನು ಬಳಪಡಿಸುತ್ತದೆ. ಇದಲ್ಲದೆ, ಇದರಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಹೇರಳವಾಗಿದೆ. ಹಾಗಾಗಿ, ಆವಕಾಡೊ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ, ಹಾನಿಗೊಳಗಾದ ಕೂದಲನ್ನು ಸರಿಪಡಿಸಬಹುದು. 


ಆಲಿವ್ ಎಣ್ಣೆ: 
ರಕ್ಷಣಾತ್ಮಕ ಮತ್ತು ಆರ್ಧ್ರಕ ಗುಣಗಳನ್ನು ಹೊಂದಿರುವ ಆಲಿವ್ ಎಣ್ಣೆ ಕೂದಲನ್ನು ಮೃದುಗೊಳಿಸುತ್ತದೆ ಮತ್ತು ಕ್ಯಾರೋಟಿನ್ ಅನ್ನು ಒದಗಿಸುತ್ತದೆ. ಆಲಿವ್ ಎಣ್ಣೆಯೊಂದಿಗೆ ನಿಂಬೆರಸ ಬೆರೆಸಿ ಹಚ್ಚುವುದರಿಂದ ಒಡೆದ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 


ಇದನ್ನೂ ಓದಿ- Weight Loss Tips: ತೂಕ ಇಳಿಕೆಗೆ ವರದಾನ ಈ ಹಣ್ಣು.. ಆದರೆ ಹೀಗೆ ತಿನ್ನಿ!!


ಮೀನಿನ ಎಣ್ಣೆ: 
ಮೀನಿನ ಎಣ್ಣೆಯು ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ, ಇದು ನಿಮ್ಮ ಕೂದಲನ್ನು ಆಳವಾಗಿ ಪೋಷಿಸುತ್ತದೆ. ಕೂದಲಿಗೆ ನಿಯಮಿತವಾಗಿ ಈ ಎಣ್ಣೆಯನ್ನು ಹಚ್ಚುವುದರಿಂದ 
ಸ್ಪ್ಲಿಟ್ ಹೇರ್ ಸಮಸ್ಯೆಯಿಂದ ರಕ್ಷಣೆ ಪಡೆಯಬಹುದು. 


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.