ಅಧಿಕ ರಕ್ತದೊತ್ತಡ ನಿವಾರಣೆಗೆ ಮನೆಯಲ್ಲಿಯೇ ಮಾಡಬಹುದಾದ ಈ ಸಿಂಪಲ್ ಉಪಾಯಗಳನ್ನು ಅನುಸರಿಸಿ ನೋಡಿ!
Taming High BP: ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಜನರ ಆರೋಗ್ಯದ ಮೇಲೆ ಭಾರಿ ಪ್ರಭಾವ ಬೀರುತ್ತಿದೆ. ಹೀಗಿರುವಾಗ ರಕ್ತದೊತ್ತಡವನ್ನು ನಿಯಂತ್ರಿಸಿ ನಾವು ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ Lifestyle News In Kannada
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನರ ಮೇಲೆ ಕೆಲಸದ ಒತ್ತಡ, ಟೆನ್ಷನ್ ಯಾವ ಮಟ್ಟಿಗೆ ಹೆಚ್ಚಾಗಿದೆ ಎಂದರೆ, ಅದು ಅವರ ಆರೋಗ್ಯದ ಮೇಲೆ ಗಂಭೀರ ಪ್ರಭಾವ ಬೀರುತ್ತಿದೆ. ಹೀಗಿರುವಾಗ ರಕ್ತದೊತ್ತಡದಲ್ಲಿ ಏರಿಳಿತ ಒಂದು ಸಾಮಾನ್ಯ ಸಂಗತಿಯಾಗಿ ಮಾರ್ಪಟ್ಟಿದೆ. ಹೈಪರಟೆನ್ಷನ್ ಎಂದೇ ಕರೆಯಲಾಗುವ ಅಧಿಕ ರಕ್ತದೊತ್ತಡದ ಕಾಯಿಲೆ ಒಂದು ಮಾರಣಾಂತಿಕ ಕಾಯಿಲೆಯಾಗಿದೆ. ಅಧಿಕ ರಕ್ತದೊತ್ತಡ ಇರುವ ವ್ಯಕ್ತಿ ಎದೆಯಲ್ಲಿ ನೋವು, ಉಸಿರಾಟದಲ್ಲಿ ತೊಂದರೆಯಿಂದ ಬಳಲುತ್ತಾನೆ. ಹಾಗೆ ನೋಡಿದರೆ ಈ ಕಾಯಿಲೆ ಹಾಳಾದ ಜೀವನಶೈಲಿಯಿಂದಲೂ ಕೂಡ ಬರಬಹುದು. ಮಾರಣಾಂತಿಕ ಕಾಯಿಲೆಯಾಗಿರುವ ಕಾರಣ ಇದನ್ನು ನಿಯಂತ್ರಣದಲ್ಲಿರಿಸುವುದು ತುಂಬಾ ಮುಖ್ಯವಾಗಿದೆ. ಹಾಗೆ ನೋಡಿದರೆ ಈ ಕಾಯಿಲೆಗೆ ಚಿಕಿತ್ಸೆ ಪಡೆಯುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ. ಆದರೆ, ಇನ್ನೊಂದೆಡೆ ಕೆಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಕೂಡ ನಾವು ಅದನ್ನು ತಡೆಯಬಹುದು. ಹಾಗಾದರೆ ಹೈ ಬ್ಲಡ್ ಪ್ರೆಷರ್ ಅನ್ನು ನಿಯಂತ್ರಣದಲ್ಲಿರಿಸಿ ನಾವು ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ತಿಳಿದುಕೊಳ್ಳೋಣ ಬನ್ನಿ.
ಈ ಉಪಾಯಗಳನ್ನು ಅನುಸರಿಸಿ ರಕ್ತದೊತ್ತಡವನ್ನು ನಿಯಂತ್ರಿಸಬಹುದು
ಆಹಾರದಲ್ಲಿ ಉಪ್ಪಿನ ಸೇವನೆ ಜಾಸ್ತಿ ಬೇಡ - ಊಟದಲ್ಲಿ ಅಧಿಕ ಉಪ್ಪಿನ ಸೇವನೆ ರಕ್ತದೊತ್ತಡ ಹೆಚ್ಚಿಸುತ್ತದೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿದೆ. ವೈದ್ಯರೂ ಕೂಡ ಕಡಿಮೆ ಸೋಡಿಯಂ ಸೇವನೆಗೆ ಸಲಹೆ ನೀಡುತ್ತಾರೆ. ಹೀಗಿರುವಾಗ ಒಂದು ವೇಳೆ ನೀವೂ ಕೂಡ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ನಿಮ್ಮ ಆಹಾರದಲ್ಲಿಯ ಉಪ್ಪಿನ ಪ್ರಮಾಣವನ್ನು ನಿಯಂತ್ರಿಸಿ.
ಪೌಷ್ಠಿಕ ಆಹಾರ ಸೇವಿಸಿ
ರಕ್ತದೊತ್ತಡ ಕಾಯಿಲೆ ಇರುವವರು ಪೌಷ್ಠಿಕ ಆಹಾರ ಸೇವಿಸುವುದು ಆವಶ್ಯಕವಾಗಿದೆ. ಹೀಗಿರುವಾಗ ಆರೋಗ್ಯಕರ ಆಹಾರಗಳನ್ನು ನಿಮ್ಮ ಡಯಟ್ ನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಶಾಮೀಲುಗೊಳಿಸಿ.
ಟೆನ್ಷನ್ ತೆಗೆದುಕೊಳ್ಳಬೇಡಿ
ಅತಿಯಾದ ಟೆನ್ಷನ್ ಹಾಗೂ ಒತ್ತಡ ಕೂಡ ಬ್ಲಡ್ ಪ್ರೆಷರ್ ಹೆಚ್ಚಳಕ್ಕೆ ಕಾರಣ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೀಗಿರುವಾಗ ಅತಿಯಾದ ಒತ್ತಡ ಸರಿಯಲ್ಲ. ಯಾವಾಗಲೂ ಆನಂದದಿಂದ ಇರಲು ಪ್ರಯತ್ನಿಸಿ.
ಇದನ್ನೂ ಓದಿ-ಹೊಳಪಾದ ಮತ್ತು ಕಾಂತಿಯುತ ತ್ವಚೆಗಾಗಿ ಹಾಗಲಕಾಯಿ ಫೇಸ್ ಪ್ಯಾಕ್ ಎಂದಾದರೂ ಟ್ರೈ ಮಾಡಿದ್ದೀರಾ?
ನಿಯಮಿತವಾಗಿ ವ್ಯಾಯಾಮ ಮಾಡಿ
ವ್ಯಾಯಾಮ ಹಾಗೂ ಯೋಗ ಮಾಡುವುದು ಪ್ರತಿಯೊಬ್ಬರಿಗೂ ಲಾಭದಾಯಕವಾಗಿದೆ. ಹೀಗಿರುವಾಗ ಅಧಿಕ ರಕ್ತದೊತ್ತಡದ ಕಾಯಿಲೆ ಇರುವವರು ತಮ್ಮ ಜೀವನಶೈಲಿಯಲ್ಲಿ ಇವುಗಳನ್ನು ಅಳವಡಿಸಿಕೊಳ್ಳಬೇಕು. ನಿತ್ಯ ಅರ್ಧಗಂಟೆಯ ವ್ಯಾಯಾಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ.
ಇದನ್ನೂ ಓದಿ- ಈ ಎಣ್ಣೆ ನಿಮ್ಮ ಬಿಳಿಕೂದಲುಗಳಿಗೆ ಶಾಶ್ವತವಾಗಿ ಗುಡ್ ಬೈ ಹೇಳುತ್ತೇ, ಜೀವನವಿಡೀ ಬಲಿಷ್ಠ ಕಪ್ಪುಕೂದಲು ನಿಮ್ಮದಾಗುತ್ತವೆ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ