ನವದೆಹಲಿ : ಜೀವನವು ಕೆಲವೊಮ್ಮೆ ಬಹಳಷ್ಟು ತೊಂದರೆಗಳಿಂದ ಸುತ್ತುವರೆದಿರುತ್ತದೆ. ಅವನ ಪ್ರತಿಯೊಂದು ಕೆಲಸದಲ್ಲೂ ಅನಗತ್ಯ ಅಡೆತಡೆಗಳು ಬರಲಾರಂಭಿಸುತ್ತವೆ. ಹಣಕಾಸಿನ ತೊಂದರೆ ಎದುರಾಗುತ್ತದೆ. ಮದುವೆಗೆ ಕಂಟಕ ಬರುತ್ತದೆ. ಕೈ ಹಾಕಿದ ಕೆಲಸ ಕೈಗೂಡುವುದೇ ಇಲ್ಲ. ಏನೇ ಮಾಡಲು ಹೋದರೂ ಏನಾದರೊಂದು ಬಾಧೆ ಇದ್ದೇ ಇರುತ್ತದೆ. ಜೀವನವನ್ನು ವಿಫಲವಾಗಿಸಿ ಬಿಡುತ್ತವೆ. , ಪ್ರತಿ ದಿನವೂ ಕೆಟ್ಟ ದಿನವಾಗಿಯೇ ಕಾಣುತ್ತದೆ. ಇದಕ್ಕೆ ಜಾತಕದಲ್ಲಿರುವ ಪಿತೃ ದೋಷ ಕಾರಣವಾಗಿರಬಹುದು (Effects of pitra dosha). ಇದರರ್ಥ ನಿಮ್ಮ ಪೂರ್ವಜರು  ನಿಮ್ಮ ಮೇಲೆ ಕೋಪಗೊಂಡಿದ್ದಾರೆ ಎಂದು. ಪಿತೃ ದೋಷಕ್ಕೆ ಪರಿಹಾರ (Pitra dosha remedies) ಮಾಡದಿದ್ದರೆ ಜೀವನದಲ್ಲಿ ಏನು ಮಾಡಿದರೂ ಯಶಸ್ಸು ಸಿಗುವುದಿಲ್ಲ. 


COMMERCIAL BREAK
SCROLL TO CONTINUE READING

ಪಿತೃ ದೋಷ ನಿವಾರಣೆಗೆ ಅಮವಾಸ್ಯೆಯಂದು ಈ ಕೆಲಸ ಮಾಡಿ :   
ಪಿತೃ ಪಕ್ಷದ ( Pitra paksha) ಸಮಯವು ಪಿತೃ ದೋಷ ನಿವಾರಣೆಗೆ ಉತ್ತಮ ಸಮಯ. ಆದರೆ ಪ್ರತಿ ತಿಂಗಳು ಬರುವ ಅಮಾವಾಸ್ಯೆಯು ಪೂರ್ವಜರಿಗೆ ಸಮರ್ಪಿತವಾಗಿರುತ್ತದೆ.  ಆದ್ದರಿಂದ ಪಿತೃ ದೋಷ (Pitra dosha) ನಿವಾರಣೆಗೆ ಅಮವಾಸ್ಯೆಯ ತಿಥಿ ತುಂಬಾ ಒಳ್ಳೆಯದು. ಹಿಂದೂ ಕ್ಯಾಲೆಂಡರ್ ಪ್ರಕಾರ,  ಮಾರ್ಚ್ 2, 2022 ರಂದು ಫಾಲ್ಗುಣ  ಮಾಸದ ಅಮಾವಾಸ್ಯೆ ಬರುತ್ತದೆ. ನಿಮ್ಮ ಜಾತಕದಲ್ಲಿ ಪಿತೃ ದೋಷವಿದ್ದರೆ ಈ ದಿನ ಕೆಲವು ಸುಲಭ ಉಪಾಯಗಳನ್ನು ಮಾಡಿ ಪರಿಹಾರ ಕಂಡುಕೊಳ್ಳಬಹುದು.  


ಇದನ್ನೂ ಓದಿ :  ಈ ರುದ್ರಾಕ್ಷಿ ಧರಿಸಿದರೆ ಸಿಗಲಿದೆ ಲಕ್ಷ್ಮೀ ದೇವಿಯ ಕೃಪೆ, ಧನ ಸಂಪತ್ತಿನಲ್ಲಿ ಎಂದಿಗೂ ಇರುವುದಿಲ್ಲ ಕೊರತೆ


ಪಿತೃ ದೋಷ ನಿವಾರಣೆಗೆ ಪರಿಹಾರಗಳು :
ಅಮಾವಾಸ್ಯೆಯಂದು ಪಿತೃ ದೋಷ ನಿವಾರಣೆಗೆ ತರ್ಪಣ, ಶ್ರಾದ್ಧ ಮತ್ತು ದಾನವನ್ನು ಮಾಡಬೇಕು. ಇದರಿಂದ ಪೂರ್ವಜರು ತೃಪ್ತರಾಗುತ್ತಾರೆ ಮತ್ತು ಅವರ ಆಶೀರ್ವಾದದಿಂದ ಜೀವನದ ಸಂಕಷ್ಟಗಳು ಕಡಿಮೆಯಾಗುತ್ತವೆ (Remedies of pitra dosha). 


ಅಮವಾಸ್ಯೆಯಂದು ಬಡವರಿಗೆ ಅನ್ನ ದಾನ ಮಾಡಬೇಕು.  ಊಟದಲ್ಲಿ ಸಿಹಿ ಬಡಿಸಬೇಕು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅನ್ನ ದಾನ ಮಾಡಬಹುದು. ಪೂರ್ವಜರು ಸಹ ಇದರಿಂದ ಸಂತೋಷಗೊಳ್ಳುತ್ತಾರೆ.  


ಇದನ್ನೂ ಓದಿ : Mangal Gochar: ಮುಂದಿನ 24 ಗಂಟೆಗಳು ಬಹಳ ವಿಶೇಷ, ಮಂಗಳನ ರಾಶಿ ಬದಲಾವಣೆ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಲಿದೆ?


ಪ್ರತಿ ಅಮಾವಾಸ್ಯೆಯಂದು ಅಶ್ವಥ ಮರಕ್ಕೆ (peepal tree) ನೀರನ್ನು ಅರ್ಪಿಸಿ. ಜೊತೆಗೆ ಎಳ್ಳೆಣ್ಣೆ ಎಣ್ಣೆಯ ದೀಪವನ್ನು ಹಚ್ಚಿ. ಇದರಿಂದ ಸಾಕಷ್ಟು ಪರಿಹಾರ ಸಿಗಲಿದೆ. 


ಪ್ರತಿದಿನ ಗಾಯತ್ರಿ ಮಂತ್ರವನ್ನು (Gayatri Mantra) ಪಠಿಸುವುದರಿಂದ ಪಿತೃ ದೋಷದ ಪರಿಣಾಮವನ್ನು ಕಡಿಮೆ ಮಾಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ