ಮನೆಯಲ್ಲಿ ತುಳಸಿ ಇದ್ದರೆ ಸಾಲದು, ತುಳಸಿ ಗಿಡಕ್ಕೆ ಸಂಬಂಧಿಸಿದಂತೆ ಈ ತಪ್ಪುಗಳಾಗದಂತೆ ನೋಡಿಕೊಳ್ಳಿ
ನಿಮ್ಮ ಮನೆಯಲ್ಲೂ ತುಳಸಿ ಗಿಡವಿದ್ದರೆ, ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ. ಏಕೆಂದರೆ ಮನೆಯಲ್ಲಿ ತುಳಸಿ ಗೀಡ ಇರುವುದು ಮಾತ್ರ ಮುಖ್ಯವಲ್ಲ. ಅದನ್ನು ಯಾವ ರೀತಿ ನೋಡಿಕೊಳ್ಳಲಾಗುತ್ತದೆ ಎನ್ನುವುದು ಮುಖ್ಯ.
ನವದೆಹಲಿ : ವಿಷ್ಣುವಿಗೆ ಪ್ರಿಯವಾದ ತುಳಸಿ ಗಿಡಕ್ಕೆ (tulsi plant) ಸನಾತನ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯಿದೆ. ಈ ಪವಿತ್ರ ಸಸ್ಯ ಮನೆಯಲ್ಲಿ ಇರುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಸ್ಯ ಧಾರ್ಮಿಕ ನಂಬಿಕೆಯನ್ನು ಹೊಂದಿರುವುದಲ್ಲದೆ, ಇದರಲ್ಲಿ ಅನೇಕ ಔಷಧೀಯ ಪ್ರಯೋಜನಗಳೂ ಅಡಗಿದೆ (importance of tulsi plant). ಈ ಸಸ್ಯವು ಸಾಕಷ್ಟು ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಬಹುತೇಕ ಪ್ರತೀ ಮನೆಯಲ್ಲಿಯೂ ತುಳಸಿ ಗಿಡ ಇದ್ದೇ ಇರುತ್ತದೆ. ತುಳಸಿಗೆ ಪ್ರತಿ ನಿತ್ಯ ಪೂಜೆ (tulsi pooja)ಸಲ್ಲಿಸಲಾಗುತ್ತದೆ. ವಾಸ್ತುವಿನ ಪ್ರಕಾರವೂ ತುಳಸಿಗೆ ಬಹಳ ಮಹತ್ವವಿದೆ. ತುಳಸಿ ಎಲೆಗಳನ್ನು ಮುರಿದು ಔಷಧಿಯಾಗಿ ಬಳಸುತ್ತಾರೆ. ನಿಮ್ಮ ಮನೆಯಲ್ಲೂ ತುಳಸಿ ಗಿಡವಿದ್ದರೆ, ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ. ಏಕೆಂದರೆ ಮನೆಯಲ್ಲಿ ತುಳಸಿ ಗೀಡ ಇರುವುದು ಮಾತ್ರ ಮುಖ್ಯವಲ್ಲ. ಅದನ್ನು ಯಾವ ರೀತಿ ನೋಡಿಕೊಳ್ಳಲಾಗುತ್ತದೆ ಎನ್ನುವುದು ಮುಖ್ಯ. ತುಳಸಿಗೆ ತೋರುವ ಅಗೌರವ ಜೀವನದ ಮೇಲೆ ಬಹಳ ಪರಿಣಾಮ ಬೀರಬಹುದು.
ಈ ವಿಷಯಗಳು ತಿಳಿದುಕೊಂಡಿರಲೇ ಬೇಕು.
ಮನೆಯಲ್ಲಿ ತುಳಸಿ ಗಿಡವಿದ್ದರೆ (tulsi plant), ಅದಕ್ಕೆ ಪ್ರತಿ ದಿನ ಬೆಳಗ್ಗೆ ಈ ಗಿಡಕ್ಕೆ ನೀರನ್ನು ಅರ್ಪಿಸಬೇಕು. ಸಂಜೆ ವೇಳೆ ತುಳಸಿ ಗಿಡದ ಮುಂದೆ ದೀಪವನ್ನು ಹಚ್ಚಬೇಕು.
ಇದನ್ನೂ ಓದಿ : Astrology: ಈ 4 ರಾಶಿಚಕ್ರದ ಜನರು ಜನ್ಮತಃ ಅದೃಷ್ಟವಂತರು, ಇವರು ಇತರರಿಗೆ ಸಹಾಯ ಮಾಡುವಲ್ಲಿಯೂ ಹಿಂದೆ ಸರಿಯುವುದಿಲ್ಲ
ತುಳಸಿ ಎಲೆಗಳನ್ನು (tulsi leaves) ಮುರಿಯಬಾರದು. ಭಾನುವಾರ, ಅಮವಾಸ್ಯೆ, ಏಕಾದಶಿಯಂದು ತುಳಸಿಗೆ ನೀರು ಹಾಕಬಾರದು. ಈ ದಿನಗಳಲ್ಲಿ, ತುಳಸಿ ಜೀ ವಿಷ್ಣುವಿಗಾಗಿ ಉಪವಾಸವನ್ನು ಮಾಡುತ್ತಾಳೆಯಂತೆ. ಹಾಗಾಗಿ ಈ ದಿನಗಳಲ್ಲಿ ತುಳಸಿಗೆ ನೀರು ಹಾಕಿದರೆ, ತುಳಸಿ ದೇವಿಯ ಉಪವಾಸಕ್ಕೆ ಭಂಗವಾಗುತ್ತದೆ. ಸಂಜೆಯ ಹೊತ್ತು ತುಳಸಿ ಎಲೆಗಳನ್ನು ಕೀಳಲೇ ಬಾರದು. ಹೀಗೆ ಮಾಡುವುದು ಅತ್ಯಂತ ಅಶುಭಕರ ಎನ್ನಲಾಗಿದೆ.
ತುಳಸಿ ಗಿಡದ ಜೀವಿತಾವಧಿ ಸಾಮಾನ್ಯವಾಗಿ 2 ರಿಂದ 4 ವರ್ಷಗಳು. ಸಸ್ಯವು ಒಣಗಿದಾಗ, ಅದನ್ನು ನದಿಯ್ಲಿ ಹರಿಯಬಿಡಬೇಕು. ಒಣಗಿದ ತುಳಸಿ ಗಿಡವನ್ನು ಮನೆಯಲ್ಲಿ ಇರಿಸಬಾರದು. ಮನೆಯಲ್ಲಿ ಒಣಗಿದ ತುಳಸಿಯನ್ನು ಇಡುವುದು ಒಳ್ಳೆಯದಲ್ಲ. ಇದು ನಕಾರಾತ್ಮಕತೆಯನ್ನು (Negetive energy) ತರುತ್ತದೆ ಎಂದು ಹೇಳಲಾಗುತ್ತದೆ.
ವಿಷ್ಣು (lord Vishnu), ಕೃಷ್ಣ ಮತ್ತು ಹನುಮಾನ್ ಪೂಜೆಯಲ್ಲಿ ತುಳಸಿ ಎಲೆಗಳನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ, ದೇವರು ಪ್ರಸನ್ನರಾಗುತ್ತಾರೆಯಂತೆ. ಮತ್ತು ಶೀಘ್ರದಲ್ಲೇ ಪೂಜಾ ಫಲಗಳು ಸಿಗುತ್ತವೆಯಂತೆ.
ಇದನ್ನೂ ಓದಿ : Vakri Budh: ಇಂದಿನಿಂದ ಈ ರಾಶಿಯವರಿಗೆ ಆರಂಭವಾಗಲಿದೆ ಅಚ್ಚೇ ದಿನ್, ಸಿಗಲಿದೆ ಬುಧನ ಆಶೀರ್ವಾದ
ತುಳಸಿ ಎಲೆಗಳನ್ನು ಮುರಿಯುವಾಗ ಯಾವತ್ತೂ ಅದಕ್ಕೆ ಉಗುರು ತಾಗಿಸಬಾರದು. ತುಳಸಿ ಎಲೆಗಳನ್ನು ಮುರಿಯುವಾಗ, ತುಳಸಿಗೆ ಗಾಯವಾಗದಂತೆ ಅವುಗಳನ್ನು ಬೆರಳುಗಳ ತುದಿಯಿಂದ ಲಘುವಾಗಿ ಮುರಿಯಬೇಕು.
ಗ್ರಹಣದ ಸಮಯದಲ್ಲಿ ಆಹಾರ ಮತ್ತು ನೀರಿನಲ್ಲಿ (water) ತುಳಸಿ ಎಲೆಗಳನ್ನು ಹಾಕಿಡಬೇಕಾದರೆ ಗ್ರಹಣ ಆರಂಭಕ್ಕೂ ಮುನ್ನವೇ ಎಲೆಗಳನ್ನು ತೆಗೆದು ಇಟ್ಟುಕೊಂಡಿರಿ. ಯಾಕಂದರೆ, ಗ್ರಹಣದ ಸಮಯದಲ್ಲಿ ತುಳಸಿ ಎಲೆಗಳನ್ನು ಕೀಳಬೇಡಿ, ಅಥವಾ ತುಳಸಿ ಗಿಡವನ್ನು ಮುಟ್ಟಬಾರದು.
ಹಾಗಾಗಿ ಮನೆಯಲ್ಲಿ ತುಳಸಿ ಗಿಡವಿದ್ದರೆ ಈ ಎಲ್ಲಾ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಲಾಗಿದೆ. ಇನ್ನು ಮನೆಯಲ್ಲಿರುವ ತುಳಸಿ ಗಿಡ ಮನೆಯ ಅಭಿವೃದ್ಧಿಯ ಸಂಕೇತ ಎಂದು ಹೇಳುತ್ತಾರೆ. ಮನೆಯ ಅಂಗಳದ ತುಳಸಿ ಹೇಗೆ ಬೆಳೆದಿದೆ ಆ ಮನೆಯ ಸುಖ ಸಂತೋಷ, ಐಶ್ವರ್ಯ ಕೂಡಾ ಅಷ್ಟೇ ಮಟ್ಟದಲ್ಲಿ ಇರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ : Vastu Tips:ಅಪ್ಪಿತಪ್ಪಿಯೂ ಕೂಡ ಈ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಬೇಡಿ, ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.