Tulsi Vastu Tips: ತುಳಸಿ ಗಿಡ ಪ್ರತಿ ಮನೆಯಲ್ಲೂ ಇರುತ್ತದೆ. ಕೆಲವರು ಮನೆಯ ಅಂಗಳದಲ್ಲಿ ತುಳಸಿ ಗಿಡಗಳನ್ನು ಇಟ್ಟರೆ ಇನ್ನು ಕೆಲವರು ತಾರಸಿಯ ಮೇಲೆ ತುಳಸಿ ಗಿಡ ಇಡುವುದು ಶ್ರೇಷ್ಠ ಎಂದು ನಂಬುತ್ತಾರೆ. ಆದರೆ ತುಳಸಿ ಭವಿಷ್ಯದ ಘಟನೆಗಳನ್ನು ಸೂಚಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ನಿಮ್ಮ ಮನೆಯಲ್ಲಿ ತುಳಸಿ ಗಿಡ ಪದೇ ಪದೇ ಒಣಗುತ್ತಿದ್ದರೆ, ಅದು ನಿಮ್ಮ ಮನೆಯಲ್ಲಿ ಮುಂದೆ ನಡೆಯಲಿರುವ ಘಟನೆಯ ಮುನ್ಸೂಚನೆ ಆಗಿರಬಹುದು. 


COMMERCIAL BREAK
SCROLL TO CONTINUE READING

ತುಳಸಿ ಗಿಡ ಮತ್ತೆ ಮತ್ತೆ ಒಣಗುತ್ತಿದ್ದರೆ ಅದರ ಹಿಂದಿನ ಕಾರಣಗಳೇನು ಎಂಬುದನ್ನು ಇಂದು ಈ ಲೇಖನದ ಮೂಲಕ ತಿಳಿಸುತ್ತೇವೆ. ಅಲ್ಲದೆ, ಮುಂಬರುವ ಘಟನೆಗಳ ಬಗ್ಗೆ ತುಳಸಿ ಗಿಡ ಹೇಗೆ ಸುಳಿವನ್ನು ನೀಡಬಹುದು ಎಂಬ ಬಗ್ಗೆಯೂ ಇದರಲ್ಲಿ ಮಾಹಿತಿ ನೀಡಲಿದ್ದೇವೆ. 


ಇದನ್ನೂ ಓದಿ- Tulsi ಎಲೆಗಳನ್ನು ಈ ರೀತಿ ಎಂದಿಗೂ ಸೇವಿಸಬೇಡಿ, ಆರೋಗ್ಯಕ್ಕೆ ತುಂಬಾ ಹಾನಿಕರ


ತುಅಲ್ಸಿ ಗಿಡಕ್ಕೆ ಸಂಬಂಧಿಸಿದ ವಾಸ್ತು ಸಲಹೆಗಳು:
>> ತಾರಸಿಯ ಮೇಲೆ ತುಳಸಿ ಗಿಡ ನೆಟ್ಟರೆ ಬುಧ ಬಲಹೀನನಾಗಬಹುದು ಎಂಬ ನಂಬಿಕೆಯೂ ಇದೆ. ಮತ್ತೊಂದೆಡೆ, ಬುಧ ಗ್ರಹವು (Budha Graha) ಹಣ ಮತ್ತು ವ್ಯವಹಾರ ಎರಡಕ್ಕೂ ಅಧಿಪತಿ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿ ಬುಧ ಪ್ರಭಾವಿತವಾಗಿದ್ದರೆ, ಅವನ ಆರ್ಥಿಕ ಸ್ಥಿತಿಯು ಹದಗೆಡಬಹುದು.


>> ಕೆಲವರ ಮನೆಯಲ್ಲಿ ತುಳಸಿ ಗಿಡ ಇದ್ದಕ್ಕಿದ್ದಂತೆ ಒಣಗುತ್ತದೆ. ಇದು ಬುಧ ಗ್ರಹಕ್ಕೂ ಸಂಬಂಧಿಸಿದೆ. ಇದರರ್ಥ ಭವಿಷ್ಯದಲ್ಲಿ ಬುಧಕ್ಕೆ ಸಂಬಂಧಿಸಿರುವ ಕೆಲವು ಸಮಸ್ಯೆಗಳು ಬರಲಿವೆ ಎಂದೂ ಇರಬಹುದು.


ಇದನ್ನೂ ಓದಿ- Vastu Tips - ನಿಮ್ಮ ಮನೆಯಲ್ಲಿಯೂ ಇರಲಿ ಈ ನಾಲ್ಕು ಸಸಿಗಳು, ಹಣಕಾಸಿನ ಮುಗ್ಗಟ್ಟು ದೂರಾಗುತ್ತದೆ


>> ಯಾರದ್ದಾದರೂ ಮನೆಯಲ್ಲಿ ತುಳಸಿ ಗಿಡ (Tulasi Plant) ಪದೇ ಪದೇ ಒಣಗುತ್ತಿದ್ದರೆ ಅಂತಹ  ಮನೆಯಲ್ಲಿ ಪಿತೃ ದೋಷವಿದೆ ಎಂದರ್ಥ. ಪಿತೃ ದೋಷ ಶುರುವಾಗಿದೆ ಎಂದರೆ ಮನೆಯ ಹಿರಿಯರಿಗೆ ನೆಮ್ಮದಿ ಇಲ್ಲ ಅಥವಾ ಯಾವುದೋ ವಿಷಯಕ್ಕೆ ಮನಸ್ತಾಪವಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.


>> ನಿಮ್ಮ ಮನೆಯಲ್ಲಿ ಇರುವ ತುಳಸಿ ಗಿಡದ ಬಳಿ ಹಕ್ಕಿ ಅಥವಾ ಪಾರಿವಾಳ ಗೂಡು ಕಟ್ಟಿದ್ದರೆ ನಿಮ್ಮ ಜಾತಕದಲ್ಲಿ ಕೇತುವಿನ ಸ್ಥಾನ ಕೆಟ್ಟಿರಬಹುದು ಎಂದು ಹೇಳಲಾಗುತ್ತದೆ.


ಸೂಚನೆ:  ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.