ಸಹೋದರನ ಕೈಗೆ ರಕ್ಷೆ ಕಟ್ಟಲು ಈ ಬಾರಿ ಎರಡು ದಿನದ ಮುಹೂರ್ತ! ರಕ್ಷಾ ಬಂಧನಕ್ಕೆ ಯಾವ ಘಳಿಗೆ ಶುಭ !
ಜ್ಯೋತಿಷ್ಯ ಪಂಚಾಗದ ಪ್ರಕಾರ 2023ರಲ್ಲಿ ಎರಡು ದಿನ ರಕ್ಷಾಬಂಧನವನ್ನು ಆಚರಿಸಬಹುದಾಗಿದೆ. ಹಾಗಿದ್ದರೆ ರಕ್ಷಾಬಂಧನವನ್ನು ಆಚರಿಸಲು ಸರಿಯಾದ ದಿನಾಂಕ ಯಾವುದು ? ಮತ್ತು ರಾಖಿ ಕಟ್ಟುವ ಶುಭ ಮುಹೂರ್ತ ಯಾವುದು ಎನ್ನುವ ಗೊಂದಲ ಸಾಮಾನ್ಯವಾಗಿ ಮೂಡುತ್ತದೆ.
ಬೆಂಗಳೂರು : ಹಿಂದೂ ಧರ್ಮದ ಅನೇಕ ಪ್ರಮುಖ ಹಬ್ಬಗಳು ಚಾತುರ್ಮಾಸದಲ್ಲಿ ಬರುತ್ತವೆ. ಈ ಪೈಕಿ ರಕ್ಷಾ ಬಂಧನದ ಹಬ್ಬವು ಪ್ರಮುಖವಾಗಿದೆ. ಶ್ರಾವಣ ಮಾಸದ ಹುಣ್ಣಿಮೆಯ ದಿನವನ್ನು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಅಣ್ಣ-ತಂಗಿಯರ ಬಾಂಧವ್ಯದ ಮಹಾ ಹಬ್ಬವಾದ ರಕ್ಷಾಬಂಧನವನ್ನು ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು, ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿನ ಮೇಲೆ ರಕ್ಷಾಸೂತ್ರವನ್ನು ಕಟ್ಟುವ ಮೂಲಕ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.
ಜ್ಯೋತಿಷ್ಯ ಪಂಚಾಗದ ಪ್ರಕಾರ 2023ರಲ್ಲಿ ಎರಡು ದಿನ ರಕ್ಷಾಬಂಧನವನ್ನು ಆಚರಿಸಬಹುದಾಗಿದೆ. ಹಾಗಿದ್ದರೆ ರಕ್ಷಾಬಂಧನವನ್ನು ಆಚರಿಸಲು ಸರಿಯಾದ ದಿನಾಂಕ ಯಾವುದು ? ಮತ್ತು ರಾಖಿ ಕಟ್ಟುವ ಶುಭ ಮುಹೂರ್ತ ಯಾವುದು ಎನ್ನುವ ಗೊಂದಲ ಸಾಮಾನ್ಯವಾಗಿ ಮೂಡುತ್ತದೆ.
ಇದನ್ನೂ ಓದಿ : Health Tips: ತರಕಾರಿಗಳನ್ನು ಹಸಿಯಾಗಿ ಸೇವಿಸುವುದರಿಂದಲೂ ಹಾನಿ ಉಂಟಾಗುತ್ತದೆ!
ಭದ್ರಕಾಲದಲ್ಲಿ ರಕ್ಷೆ ಕಟ್ಟುವುದು ಶ್ರೇಯಸ್ಸಲ್ಲ :
ಧಾರ್ಮಿಕ ಗ್ರಂಥಗಳ ಪ್ರಕಾರ ರಕ್ಷಾಬಂಧನ ಹಬ್ಬವನ್ನು ಭದ್ರಕಾಲದಲ್ಲಿ ಎಂದಿಗೂ ಆಚರಿಸಬಾರದು. ಭದ್ರಕಾಲದಲ್ಲಿ ರಾಖಿ ಕಟ್ಟುವುದು ಎಂದರೆ ಅಶುಭ. ಭದ್ರಕಾಲದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುವುಡಿಲ್ಲ. ಯಾಕೆಂದರೆ ಈ ಸಮಯದಲ್ಲಿ ಮಾಡುವ ಕೆಲಸ ಅಶುಭ ಫಲವನ್ನೇ ನೀಡುತ್ತದೆ. ಲಂಕಾಪತಿ ರಾವಣನಿಗೆ ಭದ್ರಕಾಲದಲ್ಲಿ ಅವನ ಸಹೋದರಿ ರಾಖಿ ಕಟ್ಟಿದ್ದಳು ಮತ್ತು ಅದೇ ವರ್ಷದಲ್ಲಿ ರಾವಣನು ಭಗವಾನ್ ರಾಮನ ಕೈಯಲ್ಲಿ ಕೊಲ್ಲಲ್ಪಟ್ಟನು ಎಂದು ಹೇಳುತ್ತದೆ ಶಾಸ್ತ್ರ. ಹಾಗಾಗಿ ಭದ್ರಕಾಲದಲ್ಲಿ ಸಹೋದರನಿಗೆ ರಕ್ಷೆ ಕಟ್ಟುವುದು ಶ್ರೇಯಸ್ಸಲ್ಲ ಎಂದು ಹೇಳಲಾಗುತ್ತದೆ.
2023 ರಲ್ಲಿ ರಕ್ಷಾ ಬಂಧನವನ್ನು ಯಾವಾಗ ಆಚರಿಸಲಾಗುತ್ತದೆ? :
2023 ರಲ್ಲಿ, ರಕ್ಷಾಬಂಧನ ಹಬ್ಬವನ್ನು ಆಗಸ್ಟ್ 30, ಬುಧವಾರ ಮತ್ತು 31 ಆಗಸ್ಟ್, ಗುರುವಾರದಂದು ಆಚರಿಸಲಾಗುತ್ತದೆ. ಅಂದರೆ, ಈ ವರ್ಷ ರಕ್ಷಾಬಂಧನದ ಹಬ್ಬವನ್ನು 2 ದಿನಗಳ ಕಾಲ ಆಚರಿಸಲಾಗುತ್ತದೆ. ಹಿಂದೂ ಪಂಚಾಗದ ಪ್ರಕಾರ, ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನಾಂಕ ಆಗಸ್ಟ್ 30 ರ ಬುಧವಾರದಂದು ಬೆಳಿಗ್ಗೆ 10.58 ರಿಂದ ಪ್ರಾರಂಭವಾಗಿ ಆಗಸ್ಟ್ 31 ರ ಗುರುವಾರ ಬೆಳಿಗ್ಗೆ 07.05 ಕ್ಕೆ ಕೊನೆಗೊಳ್ಳುತ್ತದೆ. ಧರ್ಮಗ್ರಂಥಗಳ ಪ್ರಕಾರ, ರಕ್ಷಾ ಬಂಧನವನ್ನು ಆಚರಿಸಲು ಮಧ್ಯಾಹ್ನದ ಸಮಯವನ್ನು ಹೆಚ್ಚು ಸೂಕ್ತವೆಂದು ಪರಿಗಣಿಸಲಾಗಿದೆ. ಆದರೆ ಮಧ್ಯಾಹ್ನ ಭದ್ರವಾದರೆ ಪ್ರದೋಷ ಕಾಲದಲ್ಲಿ ರಾಖಿ ಕಟ್ಟುವುದು ಶ್ರೇಯಸ್ಕರ. 2023 ರ ರಕ್ಷಾಬಂಧನದ ದಿನದಂದು ಅಂದರೆ ಆಗಸ್ಟ್ 30 ರಂದು ಸಂಜೆಯಿಂದ ರಾತ್ರಿಯವರೆಗೆ ಭದ್ರ ಕಾಲ ಇರುತ್ತದೆ.
ಇದನ್ನೂ ಓದಿ : Lifestyle Care Tips: ಹನಿಬುಷ್ ಟೀ ಬಗ್ಗೆ ನಿಮಗೆಷ್ಟು ತಿಳಿದಿದೆ? ಅದ್ಭುತ ಲಾಭ ತಿಳಿದುಕೊಳ್ಳಲು ಇಂದಿನಿಂದಲೇ ಸೇವನೆ ಆರಂಭಿಸಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.