Lucky Signs in Hand : ಪ್ರತಿಯೊಬ್ಬರಿಗೂ ತಮ್ಮ ಭವಿಷ್ಯ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ತವಕ ಇದ್ದೇ ಇರುತ್ತದೆ.  ಯಾವ ರೀತಿಯ ಉದ್ಯೋಗ ಸಿಗುತ್ತದೆ?  ಸಿರಿವಂತನಾಗುವುದು ಯಾವಾಗ? ಯಾವ ವಯಸ್ಸಿನಲ್ಲಿ ಮದುವೆಯಾಗುತ್ತದೆ ಎನ್ನುವ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಸಾಮಾನ್ಯವಾಗಿ ಎಲ್ಲರಲ್ಲಿಯೂ ಇರುತ್ತದೆ.  ಜಾತಕ ಜ್ಯೋತಿಷ್ಯದಂತೆಯೇ ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಕೂಡಾ ವ್ಯಕ್ತಿತ್ಯ ಭವಿಷ್ಯವನ್ನು ತಿಳಿದುಕೊಳ್ಳಬಹುದು. 


COMMERCIAL BREAK
SCROLL TO CONTINUE READING

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ಎರಡು ರೀತಿಯ ಪರ್ವತಗಳಿದ್ದರೆ ಮಂಗಳಕರ. ಯಾರ ಅಂಗೈಯಲ್ಲಿ ಗುರು ಮತ್ತು ಶುಕ್ರ ಪರ್ವತ ಇರುತ್ತದೆಯೋ ಅವರು ಅದೃಷ್ಟವಂತರು ಎಂದು  ಹೇಳಲಾಗುತ್ತದೆ. ಅವರ ಮೇಲೆ ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯ ವಿಶೇಷ ಆಶೀರ್ವಾದವಿರುತ್ತದೆ. ಕೈಯಲ್ಲಿ ಗುರುಪರ್ವತ ಮತ್ತು ಶುಕ್ರ ಪರ್ವತ ಇರುವ ಮಧ್ಯದ ಸ್ಥಳವನ್ನು ದೇವಸ್ಥಾನ ಎಂದು ಕರೆಯಲಾಗುತ್ತದೆ. ನಂಬಿಕೆಗಳ ಪ್ರಕಾರ ಯಾರ ಕೈಯ್ಯಲ್ಲಿ ಈ ಎರಡು ಪರ್ವತಗಳಿರುತ್ತವೆಯೋ ಅವರನ್ನು  ಹೆಚ್ಚು ಅದೃಷ್ಟವಂತರು ಎಂದು ಕರೆಯಲಾಗುತ್ತದೆ. ಇವರು  ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ಅನುಭವಿಸುತ್ತಾರೆ. 


ಇದನ್ನೂ ಓದಿ : Horoscope 2023: 2023ರ ಅದೃಷ್ಟದ ರಾಶಿಗಳಿವು .! ವೃತ್ತಿಯಲ್ಲಿ ಸಿಗುವುದು ಪದೋನ್ನತಿ, ಕೈ ಸೇರುವುದು ಸಾಕಷ್ಟು ಹಣ!


ಗುರು ಪರ್ವತ : 
ಕೈಯಲ್ಲಿರುವ ಗುರು  ಪರ್ವತವು ತೋರು ಬೆರಳಿನ ಕೆಳ ಭಾಗದಲ್ಲಿರುತ್ತದೆ. ಅಂದರೆ ತೋರು ಬೆರಳಿನ ಕೆಳಗಿನ  ಉಬ್ಬಿದ ಸ್ಥಳವನ್ನು ಗುರು ಪರ್ವತ ಎಂದು ಕರೆಯಲಾಗುತ್ತದೆ. ಈ ಪರ್ವತ ಯಾರ ಕೈಯ್ಯಲ್ಲಿರುತ್ತದೆಯೋ  ಅವರು ದೇವತೆಗಳಂತಹ ಗುಣಗಳನ್ನು ಹೊಂದಿರುತ್ತಾರೆಯಂತೆ. ಈ ಜನರು ತಮ್ಮ ಗುರಿ ಸಾಧಿಸಲು ಹೆಚ್ಚು ಕಷ್ಟ ಪಡಬೇಕಾಗಿಲ್ಲ. ಯಾರ ಕೈಯ್ಯಲ್ಲಿ ಗುರು ಪರ್ವತವಿರುತ್ತದೆಯೋ ಅವರು ಬರವಣಿಗೆ, ನಿರ್ವಹಣೆ ಮತ್ತು ಸರ್ಕಾರಿ ಉದ್ಯೋಗಗಳನ್ನು ತಮ್ಮ ವೃತ್ತಿಯನ್ನಾಗಿ ಆರಿಸಿಕೊಳ್ಳುತ್ತಾರೆ. 


ಶುಕ್ರ ಪರ್ವತ :
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಮಣಿಕಟ್ಟಿನ ಮೇಲೆ ಮತ್ತು ಹೆಬ್ಬೆರಳಿನ ಕೆಳಗೆ ಉಬ್ಬಿದಂತಿದ್ದರೆ ಅದನ್ನು ಶುಕ್ರ ಪರ್ವತ ಎಂದು ಕರೆಯಲಾಗುತ್ತದೆ. ಯಾರ ಕೈಯ್ಯಲ್ಲಿ ಶುಕ್ರ ಪರ್ವತ ಇರುತ್ತದೆಯೋ ಅವರು ನೋಡಲು ತುಂಬಾ ಆಕರ್ಷಕವಾಗಿದ್ದು, ಭೌತಿಕ ಸಂತೋಷಗಳನ್ನು  ಪಡೆಯುತ್ತಾರೆ.  ಯಾರ ಅಂಗೈಯಲ್ಲಿ ಶುಕ್ರ ಪರ್ವತವು ಸಂಪೂರ್ಣವಾಗಿ ಅಭಿವೃದ್ಧಿಗೊಂಡಿರುತ್ತದೆಯೋ ಆ ಜನರು ಪ್ರೀತಿ ಮತ್ತು ಪ್ರಣಯದ ಕಡೆಗೆ ಒಲವನ್ನು ಹೊಂದಿರುತ್ತಾರೆ. ಅವರು ತಮ್ಮ ಸಂಗಾತಿಯಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಾರೆ. ಯಾವುದೇ ತೊಂದರೆಗಳಿಲ್ಲದೆ ತಮ್ಮ ಜೀವನವನ್ನು ನಡೆಸುತ್ತಾರೆ. 


ಇದನ್ನೂ ಓದಿ : Baby Girl's Name : ಸಂಸ್ಕೃತದಲ್ಲಿವೆ ಹೆಣ್ಣು ಮಗುವಿನ Unique ಈ ಹೆಸರುಗಳು : ಇಲ್ಲಿದೆ ಲಿಸ್ಟ್


ಗುರು ಪರ್ವತದ ಮೇಲೆ ಶುಭ ಚಿಹ್ನೆ : 
ಇಷ್ಟೇ ಅಲ್ಲ, ಗುರುಪರ್ವತದ ಮೇಲೆ ಶಿಲುಬೆ ಚಿಹ್ನೆ ಇದ್ದರೆ ಅವರು  ಉತ್ತಮ ಜೀವನ ಸಂಗಾತಿಯನ್ನು ಪಡೆಯುತ್ತಾರೆ ಎನ್ನಲಾಗಿದೆ. ನಕ್ಷತ್ರದ ಚಿಹ್ನೆ ಇದ್ದರೆ, ಅಂತಹವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. 


ಶುಕ್ರ ಪರ್ವತದ ಮೇಲೆ ಶುಭ ಚಿಹ್ನೆ :
ಶುಕ್ರನ ಪರ್ವತದ ಮೇಲೆ ತ್ರಿಕೋನ ಮತ್ತು ತ್ರಿಶೂಲದ ಗುರುತು ಹೊಂದಿರುವ ಜನರು, ದೈವಿಕ ಅನುಗ್ರಹ ಪಡೆದಿರುತ್ತಾರೆ. ಜೀವನದಲ್ಲಿ ನಿಜವಾದ ಪ್ರೀತಿಯನ್ನು ಪಡೆಯುತ್ತಾರೆ. ಇನ್ನು ಶುಕ್ರ ಪರ್ವತದಲ್ಲಿ ಒಂದು ಚೌಕ ಅಥವಾ  ಕ್ರಾಸ್ ಚಿಹ್ನೆ ಇದ್ದರೆ, ಅದನ್ನು ಸಂಪತ್ತಿನ ಸೂಚಕವೆಂದು ಪರಿಗಣಿಸಲಾಗುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.