ನೀವು ಕೂಡಾ ಕಡಲೆಪುರಿಯನ್ನು ಇಷ್ಟಪಟ್ಟು ತಿನ್ನುತ್ತೀರಾ ? ಹಾಗಿದ್ದರೆ ಈ ವಿಚಾರ ನಿಮಗೆ ತಿಳಿದಿರಲೇಬೇಕು
ಮಂಡಕ್ಕಿ ಬಳಸಿ ನಾನಾ ರೀತಿಯ ತಿಂಡಿಯನ್ನು ತಯಾರಿಸಲಾಗುತ್ತದೆ.
ಬೆಂಗಳೂರು : ಗರಿಗರಿಯಾದ ಕಡಲೆಪುರಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಇದನ್ನು ಕಡಲೆಪುರಿ, ಮಂಡಕ್ಕಿ, ಪಫ್ಡ್ ರೈಸ್ ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಾರೆ. ಇನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವ ಚುರ್ ಮುರಿ, ಬೆಲ್ ಪುರಿಯಲ್ಲಿಯೂ ಇದನ್ನೇ ಬಳಸುವುದು.ಮಂಡಕ್ಕಿ ಚಿತ್ರಾನ್ನ, ಮಂಡಕ್ಕಿ ಒಗ್ಗರಣೆ, ಮಂಡಕ್ಕಿ ದೋಸೆ, ಮಂಡಕ್ಕಿ ಪಡ್ದು, ಮಂಡಕ್ಕಿ ಉಂಡೆ ಹೀಗೆ ಅನೇಕ ರುಚಿಕರ ತಿಂಡಿಗಳನ್ನು ಕೂಡಾ ಇದರಿಂದ ತಯಾರಿಸಲಾಗುತ್ತದೆ.
ಈ ಮಂಡಕ್ಕಿ ನಾಲಗೆರುಚಿ ಮಾತ್ರ ಅಲ್ಲ ಇದು ಆರೋಗ್ಯಕ್ಕೆ ಕೂಡಾ ನಾನಾ ರೀತಿಯಲ್ಲಿ ಪ್ರಯೋಜನಕಾರಿ.ತನ್ನ ರುಚಿ ಮೂಲಕ ಬಾಯಿ ಚಪ್ಪರಿಸಿಕೊಂಡು ತಿನ್ನುವಂತೆ ಮಾಡುವ ಈ ಕಡಲೆ ಪುರಿ ನಿಮ್ಮ ಆರೋಗ್ಯವನ್ನುಕೂಡಾ ವೃದ್ದಿಸುತ್ತದೆ. ಅದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ : ನಿಮ್ಮ ಮನೆಯಲ್ಲಿಯೇ ವಾಸಿಸುವ ಈ ಪುಟ್ಟ ಜೀವಿ ಹಾವಿಗಿಂತ ಅಪಾಯಕಾರಿ! ಇದು ಪ್ರತಿ ವರ್ಷ 10 ಲಕ್ಷ ಜನರನ್ನ ಬಲಿಪಡೆಯುತ್ತೆ!!
1.ಕಡಿಮೆ ಕ್ಯಾಲೋರಿ, ಹೆಚ್ಚು ಫೈಬರ್ :
ಮಂಡಕ್ಕಿ ಅಥವಾ ಕಡಲೆಪುರಿಯ ದೊಡ್ಡ ಪ್ರಯೋಜನವೆಂದರೆ ಅದು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ.ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.ಇದು ಉತ್ತಮ ಪ್ರಮಾಣದ ಫೈಬರ್ ಅನ್ನು ಸಹ ಹೊಂದಿದೆ.ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯುತ್ತದೆ.
2.ಶಕ್ತಿಯ ಮೂಲ
ಕಡಲೆಪುರಿ ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿರುತ್ತದೆ.ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ.ಬೆಳಗಿನ ಉಪಾಹಾರದಲ್ಲಿ ಅಥವಾ ಮಧ್ಯದಲ್ಲಿ ಇದನ್ನು ತಿನ್ನುವುದರಿಂದ ಎನರ್ಜಿ ಲೆವೆಲ್ ಅನ್ನು ಕಾಪಾಡಿಕೊಳ್ಳಬಹುದು.
3.ಸುಲಭವಾಗಿ ಜೀರ್ಣವಾಗುತ್ತದೆ
ಕಡಲೆಪುರಿಯ ಮತ್ತೊಂದು ದೊಡ್ಡ ಪ್ರಯೋಜನವೆಂದರೆ ಅದು ತುಂಬಾ ಹಗುರವಾಗಿದ್ದು, ಸುಲಭವಾಗಿ ಜೀರ್ಣವಾಗುತ್ತದೆ.ಇದನ್ನು ತಿಂದ ಬಳಿಕ ಹೊಟ್ಟೆ ಭಾರ ಎಂದು ಅನ್ನಿಸುವುದಿಲ್ಲ.ಇದು ಮಕ್ಕಳು ಮತ್ತು ವೃದ್ಧರಿಗೂ ಉತ್ತಮ ಆಹಾರದ ಆಯ್ಕೆಯಾಗಿದೆ.
ಇದನ್ನೂ ಓದಿ : ಈ ಒಂದು ಕಾಳು ಸೇವನೆ ಸಾಕು ನಿಮ್ಮ ತೂಕ ಹಾಗೂ ಶುಗರ್ ಎರಡನ್ನು ಕಡಿಮೆ ಮಾಡಲು..ಟ್ರೈ ಮಾಡಿ ಶಾಕಿಂಗ್ ರಿಸಲ್ಟ್ಸ್ ಕಾಣ್ತೀರ
4.ಗ್ಲುಟನ್ ಮುಕ್ತ
ಕಡಲೆಪುರಿ ಗ್ಲುಟನ್ ಫ್ರೀ ಆಹಾರವಾಗಿದೆ.ಗ್ಲುಟನ್ ನಿಂದ ಅಲರ್ಜಿ ಇರುವವರಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ.ಇದನ್ನು ವಿವಿಧ ರೀತಿಯ ಆಹಾರಗಳಲ್ಲಿ ಬಳಸಬಹುದು.
5.ಅಗ್ಗದ ಬೆಲೆಯಲ್ಲಿ ಲಭ್ಯ
ಕಡಲೆಪುರಿ ಅಗ್ಗದ ಬೆಲೆಯಲ್ಲಿ ಸುಲಭವಾಗಿ ಲಭ್ಯವಿರುವ ಆಹಾರ ಪದಾರ್ಥವಾಗಿದೆ. ಇದು ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿದೆ.
ಕಡಲೆಪುರಿ ಆರೋಗ್ಯಕ್ಕೆ ಒಳ್ಳೆಯದು.ವಿಶೇಷವಾಗಿ ಸರಿಯಾಗಿ ಮತ್ತು ಸಮತೋಲಿತ ಪ್ರಮಾಣದಲ್ಲಿ ಇದನ್ನು ಸೇವಿಸಿದಾಗ ಇದು ಆರೋಗ್ಯಕ್ಕೆ ದೊಡ್ಡ ಮಟ್ಟದ ಪ್ರಯೋಜನ ನೀಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.