ನವದೆಹಲಿ : Unlucky Moles In Palm: ಹಸ್ತಸಾಮುದ್ರಿಕೆಯಲ್ಲಿ, ಹಸ್ತದ ರೇಖೆಗಳನ್ನು ನೋಡುವ ಮೂಲಕ ಭವಿಷ್ಯವನ್ನು ಹೇಳಲಾಗುತ್ತದೆ. ಇದರಲ್ಲಿ, ಅಂಗೈಯ ಮಚ್ಚೆಗಳ (Moles In Palm) ಬಗ್ಗೆಯೂ ಹೇಳಲಾಗಿದೆ. ಹಸ್ತಸಾಮುದ್ರಿಕ ಶಾಸ್ತ್ರದ ಮೂಲಕ, ನಿಮ್ಮ ಅಂಗೈಯಲ್ಲಿರುವ ಮಚ್ಚೆ ಮಂಗಳಕರವೇ ಅಲ್ಲವೇ ಎನ್ನುವುದನ್ನು ಕೂಡಾ ಹೇಳಲಾಗಿದೆ. ಯಾವ ಅಂಗೈಯಲ್ಲಿ ಮಚ್ಚಇದ್ದರೆ, ಶುಭ, ಯಾವ ಅಂಗೈಯಲ್ಲಿದ್ದರೆ (Lucky mole) ಅಶುಭ ಎನ್ನುವುದನ್ನು ಕೂಡಾ ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ನಿಮ್ಮ ಅಂಗೈಯಲ್ಲಿ ಬುಧ ಪರ್ವತದ ಮೇಲೆ ಒಂದು ಮಚ್ಚೆ (Moles In Palm) ಇದ್ದರೆ, ನಿಮಗೆ ಯಾವುದೇ ಹಠಾತ್ ನಷ್ಟ ಉಂಟಾಗಬಹುದು. ಅಂದರೆ ಎಲ್ಲವು ಸರಿ ಇದೆ ಅಂದು ಕೊಳ್ಳುತ್ತಿರುವುವಾಗಲೇ ಇದ್ದಕ್ಕಿದ್ದಂತೆ ನಷ್ಟ ಸಂಭವಿಸಬಹುದು. 


ಇದನ್ನೂ ಓದಿ : Venus Remedies:ಪದೇ ಪದೇ ಧನ ಹಾನಿಯಾಗುತ್ತಿದ್ದರೆ ಈ ಉಪಾಯ ಅನುಸರಿಸಿ


ನಿಮ್ಮ ಅಂಗೈಯಲ್ಲಿ ಸೂರ್ಯ ಪರ್ವತದ  ಮೇಲೆ ಮಚ್ಚೆಯಿದ್ದರೆ, ಅದನ್ನು ತುಂಬಾ ಅಶುಭವೆಂದು (Lucky mole) ಪರಿಗಣಿಸಲಾಗುತ್ತದೆ. ಈರೀತಿ ಮಚ್ಚೆ ಇದ್ದರೆ, ನಿಮ್ಮ ಪ್ರತಿಷ್ಠೆಗೆ ಧಕ್ಕೆ ತರಬಹುದು. ಅಲ್ಲದೆ, ಇತರರ ತಪ್ಪುಗಳಿಗೆ ನೀವು ಶಿಕ್ಷೆಯನ್ನು ಅನುಭವಿಸಬೇಕಾಗಬಹುದು. ತಪ್ಪು ಯಾರೋ ಮಾಡಿದ ತಪ್ಪಿಗೂ ನೀವೇ ಹೊಣೆಯಾಗಬೇಕಾದೀತು.  


ಒಬ್ಬ ವ್ಯಕ್ತಿಯು ಹೃದಯ ರೇಖೆಯಮೇಲೆ ಮಚ್ಚೆಯಿದ್ದರೆ, ಅದು ಅವರ ಆರೋಗ್ಯದ (Health) ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನಲಾಗಿದೆ. ಇಂಥವರ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಅಲ್ಲದೆ, ಜೀವನದ ಪ್ರತಿ ಹಂತದಲ್ಲೂ ಹೋರಾಟ ಮಾಡುತ್ತಿರಬೇಕಾಗುತ್ತದೆ. 


ಇದನ್ನೂ ಓದಿ : Astrology: ಪ್ರೀತಿ ಎಂದರೆ ಹೆದರುವ ಈ ರಾಶಿಯವರು ಸಹಿಸಲ್ಲ ದಾಂಪತ್ಯ ದ್ರೋಹ


ವ್ಯಕ್ತಿಯ ಅಂಗೈಯಲ್ಲಿರುವ ಜೀವರೇಖೆಯಲ್ಲಿರುವ ಮಚ್ಚೆ ಇದ್ದರೆ ಅದನ್ನು ಅತ್ಯಂತ ಅಶುಭ ಎಂದು ಪರಿಗಣಿಸಲಾಗುತ್ತದೆ. ಇವರು  ಆರೋಗ್ಯ ಸಮಸ್ಯೆಯನ್ನು  (Health Problem)ಹೊಂದಿರುತ್ತಾರೆಯಂತೆ. ಈ ಸಾಲಿನಲ್ಲಿ ಒಂದು ಮಚ್ಚೆ ಇದ್ದರೆ, ಆ ವ್ಯಕ್ತಿಯು ಗಂಭೀರ ರೋಗವನ್ನು ಹೊಂದಿರುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ