Upcoming Marriage Dates:  ಆಷಾಢ ಮಾಸದ ದೇವಶಯನಿ ಏಕಾದಶಿಯ ನಂತರ, ಶ್ರೀವಿಷ್ಣುವು 4 ತಿಂಗಳ ಕಾಲ ಯೋಗ ನಿದ್ರೆಗಾಗಿ ಕ್ಷೀರ ಸಾಗರಕ್ಕೆ ತೆರಳುತ್ತಾನೆ. ಈ ಅವಧಿಯಲ್ಲಿ ಯಾವುದೇ ಶುಭ ಸಮಾರಂಭಗಳು ಮತ್ತು ಶುಭ ಕಾರ್ಯಗಳು ನೆರವೇರುವುದಿಲ್ಲ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪ್ರಭೋದಿನಿ ಅಥವಾ ದೇವಉಠನಿ ಏಕಾದಶಿ ಎಂದೂ ಕರೆಯುತ್ತಾರೆ. ಈ ದಿನದಂದು ವಿಷ್ಣುವು 4 ತಿಂಗಳ ಯೋಗ ನಿದ್ರೆಯಿಂದ ಎಚ್ಚೆತ್ತುಕೊಳ್ಳುತ್ತಾನೆ ಮತ್ತು ಶ್ರೀವಿಷ್ಣುವಿನ ಎಚ್ಚೆತ್ತುಕೊಳ್ಳುವಿಕೆಯಿಂದ ಎಲ್ಲಾ ಮಂಗಳಕರ ಮುಹೂರ್ತಗಳು ಮತ್ತೆ ತೆರೆದುಕೊಳ್ಳುತ್ತವೆ. ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು, ಕೆಲಸದಲ್ಲಿ ಯಾವುದೇ ಅಡೆತಡೆಗಳು ಉಂಟಾಗದಂತೆ ಅದಕ್ಕೆ ಶುಭ ಮುಹೂರ್ತವನ್ನು ನೋಡುವುದು ಬಹಳ ಮುಖ್ಯವೆಂದು ಪರಿಗಣಿಸಲಾಗುತದೆ.


COMMERCIAL BREAK
SCROLL TO CONTINUE READING

ಈ ವರ್ಷ ದೇವಉಠನಿ ಏಕಾದಶಿ ನವೆಂಬರ್ 4 ರಂದು ಬೀಳುತ್ತಿದೆ. ಆದರೆ ಈ ದಿನ ಮದುವೆಗೆ ಶುಭ ಮುಹೂರ್ತವಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಶ್ಚಿಕ ರಾಶಿಯಲ್ಲಿ ಸೂರ್ಯನಿಲ್ಲದ ಕಾರಣ ಈ ದಿನ ಮದುವೆಗೆ ಶುಭ ಮುಹೂರ್ತವಿಲ್ಲ ಎನ್ನಲಾಗಿದೆ.


ಇದನ್ನೂ ಓದಿ-Yellow Mustard Remedies: ಹಳದಿ ಸಾಸಿವೆಯ ಈ ಉಪಾಯಗಳು ಭಾಗ್ಯ ಬದಲಾಯಿಸಿ, ಹಣದ ಹೊಳೆಯನ್ನೇ ಹರಿಸುತ್ತವೆ


 ದೇವಉಠನಿ ಏಕಾದಶಿಯ ಮಹತ್ವ 
ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ದೇವಉಠನಿ ಅಥವಾ ಪ್ರಬೋಧಿನಿ ಏಕಾದಶಿ ಎಂದೂ ಕರೆಯುತ್ತಾರೆ. ಆಷಾಢ ಶುಕ್ಲದ ಏಕಾದಶಿಯಂದು ಭಗವಾನ್ ವಿಷ್ಣುವು 4 ತಿಂಗಳ ಕಾಲ ಯೋಗ ನಿದ್ರೆಗೆ ತೆರಳುತ್ತಾನೆ. ಈ ನಾಲ್ಕು ತಿಂಗಳ ಅವಧಿಯಲ್ಲಿ ಯಾವುದೇ ಶುಭ ಸಮಾರಂಭಗಳು ಹಾಗೂ ಶುಭ ಕಾರ್ಯಗಳನ್ನು ನಡೆಸಲಾಗುವುದಿಲ್ಲ. ದೇವಉಠನಿ ಏಕಾದಶಿಯನ್ನು ತುಳಸಿ ವಿವಾಹ ಎಂದೂ ಕರೆಯುತ್ತಾರೆ. ಆದರೆ, ವೃಶ್ಚಿಕ ರಾಶಿಯಲ್ಲಿ ಸೂರ್ಯನಿಲ್ಲದ ಕಾರಣ ಈ ಬರಿ ತುಳಸಿ ವಿವಾಹವನ್ನು ನವೆಂಬರ್ 5ರಂದು ನೆರವೇರಿಸಲಾಗುತ್ತಿದೆ. ತುಳಸಿ ವಿವಾಹದ ಈ ದಿನ ತಾಯಿ ತುಳಸಿಯ ವಿವಾಹವನ್ನು ವಿಷ್ಣುರೂಪಿ ಶಾಲಿಗ್ರಾಮದ ಜೊತೆಗೆ ನೆರವೇರಿಸಲಾಗುತ್ತದೆ.


ಇದನ್ನೂ ಓದಿ-Diwali 2022: 27 ವರ್ಷಗಳ ಬಳಿಕ ದೀಪಾವಳಿಯಂದು ಸಂಭವಿಸುತ್ತಿದೆ ಸೂರ್ಯ ಗ್ರಹಣ, ಈ ರಾಶಿಗಳ ಜನರಿಗೆ ಎಚ್ಚರಿಕೆ!

ವಿವಾಹದ ಶುಭ ಮುಹೂರ್ತಗಳ ಪಟ್ಟಿ ಇಂತಿದೆ
21 ನವೆಂಬರ್ 2022


24 ನವೆಂಬರ್ 2022


25 ನವೆಂಬರ್ 2022


27 ನವೆಂಬರ್ 2022


02 ಡಿಸೆಂಬರ್ 2022


07 ಡಿಸೆಂಬರ್ 2022


08 ಡಿಸೆಂಬರ್ 2022


09 ಡಿಸೆಂಬರ್ 2022


14 ಡಿಸೆಂಬರ್ 2022


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.