Badam Oil For Dark Circles: ಡಾರ್ಕ್ ಸರ್ಕಲ್ ನಿವಾರಣೆಗಾಗಿ ಬಾದಾಮಿ ಎಣ್ಣೆಯನ್ನು ಈ ರೀತಿ ಬಳಸಿ
Badam Oil For Dark Circles: ಕಣ್ಣುಗಳ ಸುತ್ತ ಕಾಣುವ ಗಾಢವಾದ ಕಪ್ಪು ಕಲೆಗಳು ಸೌಂದರ್ಯವನ್ನು ಮರೆ ಮಾಡುತ್ತವೆ. ಆದರೆ, ಡಾರ್ಕ್ ಸರ್ಕಲ್ ನಿವಾರಣೆಗಾಗಿ ಬಾದಾಮಿ ಎಣ್ಣೆಯನ್ನು ಬಳಸುವುದು ಬಹಳ ಪ್ರಯೋಜನಕಾರಿಯಾಗಿದೆ.
Badam Oil For Dark Circles: ಇತ್ತೀಚಿನ ಜೀವನಶೈಲಿ, ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದು, ಅತಿಯಾಗಿ ಫೋನ್ ಬಳಸುವುದು ಹೀಗೆ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಮೂಡಲು ಹಲವು ಕಾರಣಗಳಿವೆ. ಕೆಲವೊಮ್ಮೆ ನಿದ್ರೆಯ ಕೊರತೆಯಿಂದ ಅಥವಾ ಒತ್ತಡವನ್ನು ತೆಗೆದುಕೊಳ್ಳುವುದರಿಂದಲೂ ಕೂಡ ಡಾರ್ಕ್ ಸರ್ಕಲ್ ಸಮಸ್ಯೆ ಉಂಟಾಗುತ್ತದೆ. ಆದರೆ ಸುಲಭವಾಗಿ ಲಭ್ಯವಿರುವ ಬಾದಾಮಿ ಎಣ್ಣೆ ಡಾರ್ಕ್ ಸರ್ಕಲ್ ಸಮಸ್ಯೆಯನ್ನು ನಿವಾರಿಸಲು ಸಾಕಷ್ಟು ಉಪಯುಕ್ತ ಎಂದು ಸಾಬೀತುಪಡಿಸಬಹುದು.
ಡಾರ್ಕ್ ಸರ್ಕಲ್ ನಿವಾರಣೆಗಾಗಿ ಬಾದಾಮಿ ಎಣ್ಣೆಯನ್ನು ಈ ರೀತಿ ಬಳಸಿ:
ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್ - ರೋಸ್ ವಾಟರ್ (Rose Water) ನಲ್ಲಿ ಹತ್ತಿಯನ್ನು ನೆನೆಸಿ ಮತ್ತು ಅದನ್ನು ಕಣ್ಣುಗಳ ಕೆಳಗೆ ಹಚ್ಚಿ. ಅದನ್ನು ಒಣಗಲು ಬಿಡಿ. ನಂತರ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಬಾಧಿತ ಚರ್ಮದ ಮೇಲೆ ಹಚ್ಚಿ ಮತ್ತು ಕೆಲವು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ಬಳಿಕ ರಾತ್ರಿಯಿಡೀ ಅದನ್ನು ಹಾಗೆ ಬಿಡಿ.
ಇದನ್ನೂ ಓದಿ- Diabetes: ನಿಮ್ಮ ಅಡುಗೆಮನೆಯಲ್ಲಿರುವ ಈ ಮಸಾಲೆಗಳು ಮಧುಮೇಹಕ್ಕೆ ರಾಮಬಾಣ
ಬಾದಾಮಿ ಎಣ್ಣೆ ಮತ್ತು ಆವಕಾಡೊ- ಮಾಗಿದ ಆವಕಾಡೊದ 2-3 ಹೋಳುಗಳನ್ನು ಮ್ಯಾಶ್ ಮಾಡಿ ಮತ್ತು ಅದಕ್ಕೆ 6-8 ಹನಿ ಬಾದಾಮಿ ಎಣ್ಣೆಯನ್ನು (Almond Oil) ಸೇರಿಸಿ. ಇವೆರಡನ್ನೂ ಒಟ್ಟಿಗೆ ಮಿಶ್ರಣ ಮಾಡಿ ಮತ್ತು ನಯವಾದ ಪೇಸ್ಟ್ ತಯಾರಿಸಿ. ಕಣ್ಣುಗಳ ಸುತ್ತಲೂ ಎಚ್ಚರಿಕೆಯಿಂದ ಅನ್ವಯಿಸಿ ಮತ್ತು ನಿಧಾನವಾಗಿ ಮಸಾಜ್ ಮಾಡಿ. 15-20 ನಿಮಿಷಗಳ ಕಾಲ ಹಾಗೆ ಬಿಡಿ ಮತ್ತು ನಂತರ ತಾಜಾ ನೀರಿನಿಂದ ತೊಳೆಯಿರಿ.
ಜೇನು ಮತ್ತು ಬಾದಾಮಿ ಎಣ್ಣೆ - ಅರ್ಧ ಚಮಚ ಜೇನು ಮತ್ತು ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಣ್ಣುಗಳ ಸುತ್ತ ಹಚ್ಚಿ ಮತ್ತು 2-3 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ರಾತ್ರಿಯಿಡಿ ಹಾಗೆ ಬಿಡಿ ಮತ್ತು ಮರುದಿನ ಬೆಳಿಗ್ಗೆ ಸಾಧಾರಣ ನೀದಿರಿಂದ ಮುಖ ತೊಳೆಯಿರಿ.
ಇದನ್ನೂ ಓದಿ- Coffee Face Pack: ಕಾಫಿ ಪುಡಿಯ ಸಹಾಯದಿಂದ ಚರ್ಮದ ಹಲವು ಸಮಸ್ಯೆಗಳಿಗೆ ಹೇಳಿ ಬೈ, ಬೈ
ಬಾದಾಮಿ ಎಣ್ಣೆ ಮತ್ತು ನಿಂಬೆ ರಸ - ಒಂದು ಚಮಚ ಬಾದಾಮಿ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಕೆಲವು ಹನಿ ತಾಜಾ ನಿಂಬೆ ರಸವನ್ನು ಸೇರಿಸಿ. ಇವೆರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಕಣ್ಣುಗಳ ಕೆಳಗೆ ಅನ್ವಯಿಸಿ. ಎರಡು ನಿಮಿಷಗಳ ಕಾಲ ಮಸಾಜ್ ಮಾಡಿ ಮತ್ತು ರಾತ್ರಿಯಿಡಿ ಬಿಡಿ. ಮರುದಿನ ಬೆಳಿಗ್ಗೆ ತಾಜಾ ನೀರಿನಿಂದ ತೊಳೆಯಿರಿ.
ಈ ರೀತಿ ಮಾದುವುದರಿಂದ ಕಣ್ಣುಗಳ ಸುತ್ತಲಿನ ಗಾಢ ಕಪ್ಪು ಬಣ್ಣವನ್ನು ನಿವಾರಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.