Castor oil to control hair fall : ಕ್ಯಾಸ್ಟರ್ ಆಯಿಲ್ ಅಂದರೆ ಹರಳೆಣ್ಣೆ.ಇದು ಕ್ಯಾಸ್ಟರ್ ಬೀಜಗಳಿಂದ ಹೊರತೆಗೆಯಲಾದ ಸಸ್ಯ ಆಧಾರಿತ ಎಣ್ಣೆಯಾಗಿದೆ.ಈ ಎಣ್ಣೆಯು ಹಳದಿ ದ್ರವವಾಗಿದ್ದು, ವಿಶಿಷ್ಟವಾದ ವಾಸನೆಯನ್ನು ಹೊಂದಿರುತ್ತದೆ.ಹರಳೆಣ್ಣೆಯನ್ನು ವಿವಿಧ ಔಷಧೀಯ ಮತ್ತು ಸೌಂದರ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇದನ್ನು ಕೂದಲು ಉದುರುವಿಕೆಯನ್ನು ತಡೆಯಲು ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಾಗಿ ಬಳಸಲಾಗುತ್ತದೆ.ಇದು ವಿವಿಧ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. 


COMMERCIAL BREAK
SCROLL TO CONTINUE READING

ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ : 
ಹರಳೆಣ್ಣೆ ರಿಸಿನೋಲಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ನಿಮ್ಮ ನೆತ್ತಿಯಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ.ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ.ಇದನ್ನು ನಿಯಮಿತವಾಗಿ ಬಳಸುವುದರಿಂದ,ಕೂದಲು ವೇಗವಾಗಿ ಬೆಳೆಯಲು ಸಹಾಯವಾಗುತ್ತದೆ. 


ಇದನ್ನೂ ಓದಿ :ಮನೆಯ ಮುಂದೆ ಇದೊಂದು ಗಿಡ ಬೆಳೆಸಿ… ಇಲಿ, ಹಲ್ಲಿ, ನೊಣ, ಸೊಳ್ಳೆ ಯಾವುದೂ ಬರಲ್ಲ!


ಆರ್ಧ್ರಕ ಗುಣಲಕ್ಷಣಗಳು : 
ಈ ಎಣ್ಣೆಯು ಕೂದಲನ್ನು ಆಳವಾಗಿ ತೇವಗೊಳಿಸುತ್ತದೆ ಮತ್ತು ಒಣಗದಂತೆ ರಕ್ಷಿಸುತ್ತದೆ. ಇದನ್ನು ಹಚ್ಚುವುದರಿಂದ ದಲು ಕವಲೊ ಡೆಯುವುದು ದೂರವಾಗುತ್ತದೆ ಮತ್ತು ಅದು ಬಲಗೊಳ್ಳುತ್ತದೆ.ಅದರ ಪೋಷಕಾಂಶಗಳು ಮತ್ತು ಆರ್ಧ್ರಕ ಗುಣಲಕ್ಷಣಗಳು ಕೂದಲಿನ ಬೇರುಗಳನ್ನು ಬಲಪಡಿಸಿ ಕೂದಲು ಉದುರುವುದನ್ನು ತಪ್ಪಿಸುತ್ತದೆ. 


ತಲೆಹೊಟ್ಟು ಕಡಿಮೆಯಾಗುವುದು : 
ಇದರ ಆಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳು ನೆತ್ತಿಯಲ್ಲಿ ಫಂಗಲ್ ಸೋಂಕು ಆಗುವುದನ್ನು ತಡೆಯುತ್ತದೆ.ಇದು ತಲೆಹೊಟ್ಟು ಕಡಿಮೆಯಾಗಲು ಸಹಾಯ ಮಾಡುತ್ತದೆ.ಡ್ಯಾಂಡ್ರಫ್ ನಿವಾರಣೆಯಾದಾಗ,ಕೂದಲು ಉದುರುವ ಸಮಸ್ಯೆಗಳು ಸಹ ಕಡಿಮೆಯಾಗುತ್ತದೆ. 


ಇದನ್ನೂ ಓದಿ :ಸೊಳ್ಳೆಗಳ ಸಮಸ್ಯೆ ಹೆಚ್ಚುತ್ತಿದೆಯೇ? ಮನೆಯಲ್ಲಿ ಈ ನೀರನ್ನು ಚಿಮುಕಿಸಿ!


ಕೂದಲು ದಪ್ಪಾವಗುವುದು : 
ಅತಿಯಾದ ಕೂದಲು ಉದುರುವಿಕೆಯಿಂದಾಗಿ,ತಲೆ ಖಾಲಿಯಾಗಿ ಕಾಣಲು ಪ್ರಾರಂಭಿಸುತ್ತದೆ.ಹರಳೆಣ್ಣೆಯನ್ನು ನಿಯಮಿತವಾಗಿ ಬಳಸುತ್ತಿದ್ದರೆ ಕೂದಲಿನ ದಪ್ಪ ಹೆಚ್ಚುತ್ತದೆ.ಇದರಿಂದ ನಿಮ್ಮ ಕೂದಲಿನ ಸೌಂದರ್ಯ ಕೂಡಾ ಹೆಚ್ಚುವುದು. 


ಹರಳೆಣ್ಣೆಯನ್ನು ಬಳಸುವುದು ಹೇಗೆ ? :
- ಸ್ವಲ್ಪ ಪ್ರಮಾಣದ ಹರಳೆಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ನೆತ್ತಿಯ ಮೇಲೆ ನಿಧಾನವಾಗಿ ಮಸಾಜ್ ಮಾಡಿ.
- ಎಣ್ಣೆಯು ತಲೆಯ ಮೇಲೆ ಸಮವಾಗಿ ಹರಡಿದೆ ಎಂದು ಖಚಿತಪಡಿಸಿಕೊಳ್ಳಿ.
- ಕನಿಷ್ಠ 30 ನಿಮಿಷಗಳ ಕಾಲ ಅಥವಾ ರಾತ್ರಿಯಿಡೀ ಬಿಡಿ.
- ಮರುದಿನ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.


ಈ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಕೂಡಾ ಹಚ್ಚಬಹುದು. :
- ನೀವು ಹರಳೆಣ್ಣೆಯನ್ನು ಇತರ ಎಣ್ಣೆಗಳೊಂದಿಗೆ ಬೆರೆಸಿ ಅನ್ವಯಿಸಬಹುದು.ತೆಂಗಿನ ಎಣ್ಣೆ,ಆಲಿವ್ ಎಣ್ಣೆ ಅಥವಾ ಬಾದಾಮಿ ಎಣ್ಣೆಯೊಂದಿಗೆ ಬೆರೆಸಿ ಹರಳೆಣ್ಣೆಯನ್ನು ಹಚ್ಚಬಹುದು. 


ಇದನ್ನೂ ಓದಿ :ಸೊಳ್ಳೆಗಳ ಸಮಸ್ಯೆ ಹೆಚ್ಚುತ್ತಿದೆಯೇ? ಮನೆಯಲ್ಲಿ ಈ ನೀರನ್ನು ಚಿಮುಕಿಸಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.