ಬೆಂಗಳೂರು : ನಮ್ಮ ಆರೋಗ್ಯ ಹೇಗಿತ್ತದೆ ಎನ್ನುವುದು ನಾವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಜಂಕ್ ಫುಡ್ ನತ್ತ ವಾಲುತ್ತಿದ್ದಾರೆ. ರುಚಿ ಎನ್ನುವ ಕಾರಣಕ್ಕೆ ಬಾಯಿ ಚಪ್ಪರಿಸಿಕೊಂಡು ಈ ಆಹಾರವನ್ನು ತಿನ್ನುತ್ತೇವೆ. ಆದರೆ ಇದು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇನ್ನು ನಾವು ಏನು ತಿನ್ನುತ್ತೇವೆ ಎನ್ನುವುದು ನಮ್ಮ ಕೂದಲಿನ ಮೇಲೆ ಬಹಳವಾಗಿ ಪರಿಣಾಮ ಬೀರುತ್ತದೆ. ಕೆಟ್ಟ ಆಹಾರ ಪದ್ದತಿಯಿಂದಾಗಿ ಕೂದಲು ಉದುರುವುದು, ಕಿರಿ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು, ಶುಷ್ಕ ಕೂದಲು, ತಲೆ ಹೊಟ್ಟು ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಯ ಪರಿಹಾರಕ್ಕೆಂದು ಹೇಳಿಕೊಂಡು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಪ್ರಾಡಕ್ಟ್ ಗಳು ಲಭ್ಯವಿದೆ. ಹೌದು ಕೂದಲಿನ ಆರೋಗ್ಯದ ದೃಷ್ಟಿಯಿಂದ ಶಾಂಪೂ, ಕಂಡಿಷನರ್, ಎಣ್ಣೆ, ಬಣ್ಣ ಇತ್ಯಾದಿಗಳನ್ನು ಬಳಸುತ್ತೇವೆ. ಆದರೆ ಇವುಗಳಲ್ಲಿ ಅಪಾಯಕಾರಿ ರಾಸಾಯನಿಕ ಸೇರಿರುತ್ತವೆ ಎನ್ನುವುದನ್ನು ನಾವು ಮರೆತು ಬಿಡುತ್ತೇವೆ. ಈ ಎಲ್ಲಾ ದುಬಾರಿ ಪ್ರಾಡಕ್ಟ್ ಗಳು ಕೂದಲಿನ ಸಮಸ್ಯೆಗೆ ತಾತಕಾಲಿಕ ಪರಿಹಾರ ನೀಡಬಹುದು. ಆದರೆ ಒಂದು ಸಮಸ್ಯೆ ಪರಿಹಾರವಾದರೆ ಇನ್ನೊಂದು ಸಮಸ್ಯೆ ಹುಟ್ಟಿಕೊಳ್ಳುವ ಭೀತಿ ಕೂಡಾ ಕಾಡಬಹುದು. ಆದರೆ ಈಗ  ನಾವು ಹೇಳುವ ಮನೆಮದ್ದನ್ನು ಬಳಸಿದರೆ ಕೂದಲಿನ ಸಮಸ್ಯೆಗೆ ನೈಸರ್ಗಿಕ ಪರಿಹಾರ ಸಿಗುತ್ತದೆ. 


COMMERCIAL BREAK
SCROLL TO CONTINUE READING

ಕೂದಲಿನ ಆರೋಗ್ಯಕ್ಕೆ ಕರಿ ಬೇವು : 
ಮೆಲನಿನ್ ಮತ್ತು ನ್ಯೂ ಮೆಲನಿನ್ ಎನ್ನುವ ಮಶಗಳು ನಮ್ಮ ಕೂದಲಿನ ಬಣ್ಣಕ್ಕೆ ಕಾರಣವಾಗಿರುತ್ತವೆ. ಈ ಪೈಕಿ ಮೆಲನಿನ್ ಕೂದಲಿಗೆ ಕಪ್ಪು ಬಣ್ಣವನ್ನು ನೀಡುತ್ತದೆ. ಮೆಲನಿನ್ ಕೊರತೆಯಿಂದಾಗಿ, ಕೂದಲು ಬಿಳಿಯಾಗುತ್ತವೆ. ಕರಿಬೇವಿನ ಎಲೆಗಳು ಕೂದಲಿನಲ್ಲಿರುವ ಮೆಲನಿನ್ ಕೊರತೆಯನ್ನು ಹೋಗಲಾಡಿಸುತ್ತದೆ. ಹೀಗಾಗಿ ಕರಿಬೇವು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಕೂದಲು ಹೊಳೆಯುತ್ತದೆ ಮತ್ತು ಮೃದುವಾಗುತ್ತದೆ. 


ಇದನ್ನೂ ಓದಿ : ಟೊಮಾಟೊ ಹೆಚ್ಚು ಸಮಯ ಫ್ರೇಶ್ ಆಗಿರಬೇಕೇ! ಇಲ್ಲಿವೆ 5 ಸುಲಭ ಮಾರ್ಗಗಳು


ಕರಿಬೇವಿನ ಎಲೆಗಳನ್ನು ಬಳಸುವುದು ಹೇಗೆ ? : 
ಕರಿಬೇವಿನ ಎಲೆಗಳನ್ನು ಬಳಸಿ ಹೇರ್ ಮಾಸ್ಕ್ ಮಾಡಬಹುದು. ಇದಕ್ಕಾಗಿ ಕರಿಬೇವಿನ ಎಲೆಗಳು, ತೆಂಗಿನ ಎಣ್ಣೆ, ಬೇವಿನ ಎಲೆಗಳು, ವಿಟಮಿನ್ ಇ ಕ್ಯಾಪ್ಸುಲ್ ಗಳು ಮತ್ತು ಮೊಸರು ಬೇಕಾಗುತ್ತದೆ. ಮೊದಲು ಕರಿಬೇವಿನ  ಎಲೆ ಮತ್ತು ಬೇವಿನ ಸೊಪ್ಪನ್ನು ಮಿಕ್ಸಿಯಲ್ಲಿ ರುಬ್ಬಿ ಬಟ್ಟಲಿನಲ್ಲಿ ತೆಗೆದುಕೊಂಡು ಇಟ್ಟುಕೊಳ್ಳಿ. ನಂತರ ಇನ್ನೊಂದು ಪಾತ್ರೆಯಲ್ಲಿ ತೆಂಗಿನೆಣ್ಣೆ, ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಮೊಸರು ಹಾಕಿ ಸರಿಯಾಗಿ ಬೀಟ್ ಮಾಡಿ. ನಂತರ ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿ. ಅದು ತಣ್ಣಗಾದ ನಂತರ ಕರಿಬೇವಿನ ಸೊಪ್ಪು ಮತ್ತು ಬೇವಿನ ಸೊಪ್ಪಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ. ನಿಮ್ಮ ಹೇರ್ ಮಾಸ್ಕ್ ರೆಡಿಯಾಗುತ್ತದೆ. 


ಈ ರೀತಿ ಕೂದಲಿಗೆ ಹಚ್ಚಿ : 
ಕೂದಲಿಗೆ ಹೇರ್ ಮಾಸ್ಕ್ ಅನ್ನು ಹಚ್ಚುವ ಮೊದಲು, ಕೂದಲನ್ನು ಸರಿಯಾಗಿ ತೊಳೆದು ಒಣಗಿಸಿ. ನಂತರ ಕೂದಲು ಮತ್ತು ನೆತ್ತಿಯ ಮೇಲೆ ಹೇರ್ ಮಾಸ್ಕ್ ಅನ್ನು  ಹಚ್ಚಿ. ಒಂದು ಗಂಟೆಯ ನಂತರ ಮತ್ತೆ ಕೂದಲನ್ನು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ಮನೆಮದ್ದನ್ನು  ಅನುಸರಿಸುತ್ತಾ ಬಂದರೆ ಪರಿಣಾಮ ಗೋಚರಿಸುತ್ತದೆ.


ಇದನ್ನೂ ಓದಿ : ಬಿಳಿಕೂದಲಿಗೆ ನೈಸರ್ಗಿಕವಾಗಿ ಮುಕ್ತಿ ನೀಡಲು ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.