ನೈಸರ್ಗಿಕ ಕಾಂತಿಯುತ ತ್ವಚೆ ನಿಮ್ಮದಾಗಬೇಕೆ? ಆಲೂಗಡ್ಡೆಯನ್ನು ಈ ರೀತಿ ಬಳಸಿ
Potato For Glowing Skin: ನೈಸರ್ಗಿಕವಾಗಿ ಹೊಳೆಯುವ ಚರ್ಮವನ್ನು ಪಡೆಯಲು ನಿಮ್ಮ ಅಡುಗೆಮನೆಯಲ್ಲಿಯೇ ಇರುವ ಆಲೂಗಡ್ಡೆ ತುಂಬಾ ಪ್ರಯೋಜನಕಾರಿ ಆಗಿದೆ.
Potato For Instant Glowing Skin: ಹೊಳೆಯುವ, ಕಾಂತಿಯುತವಾದ ಸುಂದರ ತ್ವಚೆಯನ್ನು ಹೊಂದಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಆಲೂಗಡ್ಡೆ ನಿಮಗೆ ತುಂಬಾ ಪ್ರಯೋಜನಕಾಗಿ ಆಗಿದೆ.
ಆಲೂಗಡ್ಡೆಯಲ್ಲಿ ತ್ವಚೆಯ ಕಾಂತಿಯನ್ನು (Glowing Skin) ಹೆಚ್ಚಿಸಲು ಅಗತ್ಯವಾದ ವಿಟಮಿನ್ ಸಿ, ಪೊಟ್ಯಾಸಿಯಮ್ ಸೇರಿದಂತೆ ಹಲವು ಜೀವಸತ್ವಗಳು ಕಂಡು ಬರುವುದರಿಂದ ಇದು ನೈಸರ್ಗಿಕವಾಗಿ ಕಾಂತಿಯುತ ತ್ವಚೆ (Natural Glowing Skin) ಪಡೆಯಲು ಸಹಕರಿಸುತ್ತದೆ. ಇದಕ್ಕಾಗಿ ಆಲೂಗಡ್ಡೆಯನ್ನು ಬಳಸುವ ಸರಿಯಾದ ವಿಧಾನವನ್ನು ತಿಳಿಯೋಣ...
ನಿಂಬೆ ಹಣ್ಣಿನೊಂದಿಗೆ ಆಲೂಗಡ್ಡೆ:
ಸಮ ಪ್ರಮಾಣದಲ್ಲಿ ಆಲೂಗಡ್ಡೆ-ನಿಂಬೆ ರಸವನ್ನು ಬೆರೆಸಿ ಈ ಮಿಶ್ರಣವನ್ನು ಫೇಸ್ ಪ್ಯಾಕ್ (Face Pack) ರೀತಿ ಕುತ್ತಿಗೆಯವರೆಗೂ ಹಚ್ಚಿ 15 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಈ ರೀತಿ ಮಾಡುವುದರಿಂದ ಎಣ್ಣೆಯುಕ್ತ ಚರ್ಮದ ಸಮಸ್ಯೆ ನಿವಾರಣೆಯಾಗಿ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.
ಇದನ್ನೂ ಓದಿ- ಹಣ ಖರ್ಚು ಮಾಡದೆಯೇ ನಿಮ್ಮ ಬಿಳಿ ಕೂದಲನ್ನು ಕಡು ಕಪ್ಪಾಗಿಸಬಹುದು! ಇದನ್ನೊಮ್ಮೆ ಟ್ರೈ ಮಾಡಿ!
ಡ್ರೈ ಸ್ಕಿನ್‌ಗಾಗಿ ಆಲೂಗಡ್ಡೆ:
ನಿಮ್ಮ ಸ್ಕಿನ್ ಡ್ರೈ ಆಗಿದ್ದರೆ ಆಲೂಗಡ್ಡೆಯನ್ನು ಬೇಯಿಸಿ ಅದರಲ್ಲಿ ಹಾಲಿನ ಪುಡಿ, ಬಾದಾಮಿ ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ ಫೇಶಿಯಲ್ ರೀತಿ ಬಳಸಿ.
ಆಲೂಗಡ್ಡೆ ಮತ್ತು ಸೌತೆಕಾಯಿ:
ಸಿಪ್ಪೆ ಸುಲಿದ ಸೌತೆಕಾಯಿ ಹಾಗೂ ಆಲೂಗಡ್ಡೆಯನ್ನು ತುರಿದು ಎರಡನ್ನೂ ಬೆರೆಸಿ ಕ್ಲೆನ್ಸರ್ ತಯಾರಿಸಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ.
ಇದನ್ನೂ ಓದಿ- ಅನಗತ್ಯ ಮುಖದ ಕೂದಲನ್ನು ತೆಗೆದುಹಾಕಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ..!
ಆಲೂಗಡ್ಡೆ ಮಸಾಜ್:
ತಾಜಾ ಆಲೂಗಡ್ಡೆಯನ್ನು ಕತ್ತರಿಸಿ ಎರಡು ಒಳುಗಳಾಗಿ ಮಾಡಿ, ಇದನ್ನು ವೃತ್ತಾಕಾರದಲ್ಲಿ ಮುಖದ ಮೇಲೆ ಉಜ್ಜುತ್ತಾ ನಯವಾಗಿ ಮಸಾಜ್ ಮಾಡಿ. ಇದರಿಂದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಸುಕ್ಕುಗಳ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಜೊತೆಗೆ ನೈಸರ್ಗಿಕವಾದ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.