Vitamin E Capsules Benefits: ಸುಂದರ ಕಾಂತಿಯುತ ತ್ವಚೆಯನ್ನು ಪಡೆಯಬೇಕು ಎಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ನೀವೂ ಕೂಡ ಹೊಳೆಯುವ ಸುಂದರ ತ್ವಚೆಯನ್ನು ಬಯಸಿದರೆ ಇದಕ್ಕಾಗಿ ಫೇಶಿಯಲ್, ದುಬಾರಿ ಉತ್ಪನ್ನಗಳನ್ನೇ ಬಳಸಬೇಕು ಎಂದೆನಿಲ್ಲ.  ವಿಟಮಿನ್ ಇ ಕ್ಯಾಪ್ಸುಲ್‌ಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅಷ್ಟೇ ಸಾಕು. 


COMMERCIAL BREAK
SCROLL TO CONTINUE READING

ವಿಟಮಿನ್ ಇ ಕ್ಯಾಪ್ಸುಲ್ ಚರ್ಮವನ್ನು ಹೊಳೆಯುವಂತೆ ಮಾಡಲು ಮತ್ತು ಹಾನಿಗೊಳಗಾದ ಚರ್ಮವನ್ನು ಸರಿಪಡಿಸಲು ಪ್ರಯೋಜನಕಾರಿಯಾಗಿದೆ. ವಿಟಮಿನ್ ಇ ಕ್ಯಾಪ್ಸುಲ್ ಬಳಕೆಯಿಂದ ಹೊಸ ಕೋಶಗಳು ತೆರೆದುಕೊಳ್ಳುತ್ತವೆ. ಇದರಿಂದ ಹೊಳೆಯುವ ಆರೋಗ್ಯಕರ ತ್ವಚೆಯನ್ನು ನಮ್ಮದಾಗಿಸಬಹುದು. 


ಚರ್ಮ ತಜ್ಞರ ಪ್ರಕಾರ, ವಿಟಮಿನ್ ಇ ಕ್ಯಾಪ್ಸುಲ್ ಜೊತೆಗೆ ಕೆಲವು ಪದಾರ್ಥಗಳನ್ನು ಬಳಸಿ ಮುಖಕ್ಕೆ ಅನ್ವಯಿಸುವುದರಿಂದ ಸುಂದರ, ಕೋಮಲವಾದ, ಕಾಂತಿಯುತ ತ್ವಚೆಯನ್ನು ನಮ್ಮದಾಗಿಸಬಹುದು ಎಂದು ಹೇಳಲಾಗುತ್ತದೆ. ಆದರೆ, ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಯಾವ ಸಮಸ್ಯೆಗೆ ಹೇಗೆ ಬಳಸಬೇಕು ಎಂದು ತಿಳಿದಿರುವುದು ಅಗತ್ಯ. 


ಇದನ್ನೂ ಓದಿ- ಬಾಳೆಹಣ್ಣಿ ಮಾಸ್ಕ್... ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ!


ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಯಾವ ಸಮಸ್ಯೆಗೆ ಹೇಗೆ ಬಳಸಬೇಕು:-
ತ್ವಚೆ ಬೆಳ್ಳಗಾಗಿಸಲು: 

ನೀವು ನಿಮ್ಮ ತ್ವಚೆಯನ್ನು ಬೆಳ್ಳಗಾಗುವಂತೆ ಮಾಡಲು ಇದಕ್ಕಾಗಿ  2-3 ವಿಟಮಿನ್ ಇ ಕ್ಯಾಪ್ಸುಲ್, 2 ಚಮಚ ಮೊಸರು, 1 ಚಮಚ ನಿಂಬೆ ರಸ, ರೋಸ್ ವಾಟರ್ ಅನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಹತ್ತಿ ಉಂಡೆಯ ಸಹಾಯದಿಂದ ಫೇಸ್ ಪ್ಯಾಕ್ ರೀತಿ ಅನ್ವಯಿಸಿ. ಅದನ್ನು 15-20 ನಿಮಿಷಗಳ ಕಾಲ ಒಣಗಳು ಬಿಡಿ. ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. 


ಡಾರ್ಕ್ ಸರ್ಕಲ್: 
ಡಾರ್ಕ್ ಸರ್ಕಲ್ ಸಮಸ್ಯೆಯಿಂದ ಪರಿಹಾರ ಪಡೆಯಲು ಒಂದೆರಡು ವಿಟಮಿನ್ ಇ ಕ್ಯಾಪ್ಸುಲ್ ತೆಗೆದುಕೊಂಡು ಅದರ ಎಣ್ಣೆಯನು ನಯವಾಗಿ ಕಣ್ಣುಗಳ ಸುತ್ತ ಅನ್ವಯಿಸಿ. ಲಘುವಾಗಿ ಮಸಾಜ್ ಮಾಡಿ. ರಾತ್ರಿಯಿಡೀ ಹೀಗೆ ಬಿಟ್ಟು ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆಯಿರಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ಡಾರ್ಕ್ ಸರ್ಕಲ್ ಸಮಸ್ಯೆ ನಿವಾರಣೆಯಾಗುತ್ತದೆ. 


ಇದನ್ನೂ ಓದಿ- Mouthwash: ಪ್ರತಿದಿನ ಮೌತ್ ವಾಶ್ ಬಳಸುತ್ತಿದ್ದೀರಾ? ಆದರೆ ಇದನ್ನು ತಿಳಿದರೆ ಶಾಕ್ ಆಗುತ್ತೀರಿ


ಕಾಂತಿಯುತ ತ್ವಚೆಗಾಗಿ: 
ನೀವು ಹೊಳೆಯುವ ಕಾಂತಿಯುತ ಚರ್ಮವನ್ನು ಬಯಸಿದರೆ ಇದಕ್ಕಾಗಿ 3-4 ವಿಟಮಿನ್ ಇ ಕ್ಯಾಪ್ಸುಲ್ ತೆಗೆದುಕೊಂಡು ಇದರಲ್ಲಿ 1 ಕಪ್ ಪಪ್ಪಾಯಿ ಸಿಪ್ಪೆ (ಪೇಸ್ಟ್ ಮಾಡಿ), 1 ಟೀಚಮಚ ಜೇನುತುಪ್ಪವನ್ನು ಮಿಕ್ಸ್ ಮಾಡಿ. ಬಳಿಕ ಈ ಮಿಶ್ರಣವನ್ನು ಕುತ್ತಿಗೆವರೆಗೂ ಚೆನ್ನಾಗಿ ಅನ್ವಯಿಸಿ 10-15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ವಾರದಲ್ಲಿ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ನಿರೀಕ್ಷಿತ ಫಲಿತಾಂಶ ಪಡೆಯಬಹುದು. 


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.