ಬೆಂಗಳೂರು : ಇನ್ನೇನು ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ.  ದೀಪಾವಳಿ ಹಬ್ಬದ ಸಿದ್ಧತೆಗಳು ಪ್ರಾರಂಭವಾಗುತ್ತವೆ. ದೀಪಾವಳಿಯ ದಿನ ಸಮೀಪಿಸುತ್ತಿದ್ದಂತೆ ಮನೆಗಳನ್ನು ಸ್ವಚ್ಛಗೊಳಿಸುವ ಮತ್ತು ಅಲಂಕರಿಸುವ ಕೆಲಸ ಕೂಡಾ ಭರದಿಂದ ನಡೆಯುತ್ತದೆ. ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ, ದೀಪಾವಳಿಯ ಶುಚಿತ್ವದ ಬಗ್ಗೆ ಕೆಲವು ಪ್ರಮುಖ ವಿಷಯಗಳನ್ನು ಹೇಳಲಾಗಿದೆ, ಇದರ ಪ್ರಕಾರ, ದೀಪಾವಳಿಯ ಶುಚಿತ್ವದ ವೇಳೆ ಕೆಲವು ವಿಶೇಷ ವಸ್ತುಗಳು ಸಿಕ್ಕಿದರೆ ಶುಭ ಫಲ ಸಿಗುತ್ತದೆಯಂತೆ.  ಈ ವಸ್ತುಗಳು ಸಿಕ್ಕಿದರೆ ಲಕ್ಷ್ಮೀಯ ಆಶೀರ್ವಾದವೇ ಸಿಕ್ಕಿದಂತೆ ಎಂದು ಹೇಳಲಾಗುತ್ತದೆ.  


COMMERCIAL BREAK
SCROLL TO CONTINUE READING

 ಲಕ್ಷ್ಮೀ ಕೃಪೆಯ ಸಂಕೇತ :  
ಜೇಬಿನಲ್ಲಿ ಅಥವಾ ಪರ್ಸ್‌ನಲ್ಲಿ ಹಣ: ದೀಪಾವಳಿಯ ಶುಚಿಗೊಳಿಸುವ ಸಮಯದಲ್ಲಿ, ಹಳೇ ಬಟ್ಟೆಯ ಜೇಬಿನಲ್ಲಿ, ಹಳೆಯ ಪರ್ಸ್ ಅಥವಾ ಬೀರುಗಳಲ್ಲಿ ಹಣ ಸಿಕ್ಕಿದರೆ ಅತ್ಯಂತ ಶುಭ ಸಂಕೇತ ಎಂದು ಹೇಳಲಾಗುತ್ತದೆ.  ಇದು ಲಕ್ಷ್ಮೀಯ ಆಶೀರ್ವಾದ ನಿಮ್ಮ ಮೇಲೆ ಇದೆ ಎನ್ನುವುದನ್ನು ತೋರಿಸುತ್ತದೆ.  


ಇದನ್ನೂ ಓದಿ : Chanakya Niti: ಈ 5 ಗುಣಗಳಿರುವ ಪತ್ನಿ ಸಿಕ್ಕರೆ ಅದೃಷ್ಟವೇ ಮನೆಗೆ ಬಂದಂತೆ.!


ನವಿಲು ಗರಿ ಅಥವಾ ಕೊಳಲು :
ನವಿಲು ಗರಿ ಮತ್ತು ಕೊಳಲು ಕೃಷ್ಣ ಪರಮಾತ್ಮನಿಗೆ ಅತ್ಯಂತ ಪ್ರಿಯವಾದುದು.  ಕೃಷ್ಣ ಭಗವಾನ್ ವಿಷ್ಣುವಿನ ಅವತಾರ. ದೀಪಾವಳಿ ಹಿನ್ನೆಲೆಯಲ್ಲಿ ಮನೆಯನ್ನು ಶುಚಿಗೊಳಿಸುವಾಗ ನವಿಲು ಗರಿಗಳು ಅಥವಾ ಕೊಳಲು ಸಿಕ್ಕಿದರೆ, ಭಗವಾನ್ ವಿಷ್ಣು ಮತ್ತು  ಲಕ್ಷ್ಮೀ ದೇವಿಯ ಆಶೀರ್ವಾದ ಸಿಕ್ಕಿದಂತೆ.


ಶಂಖ ಅಥವಾ ಕವಡೆ : ದೀಪಾವಳಿ ಶುಚಿತ್ವದ ಸಮಯದಲ್ಲಿ ಶಂಖ ಅಥವಾ  ಕವಡೆ ದೊರೆತರೆ ನಿಮ್ಮ ಮೇಲೆ ಲಕ್ಷ್ಮೀ ದೇವಿಯ ಅಪಾರ ಕೃಪೆ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ವಸ್ತುಗಳನ್ನು ಹಣ ಇರಿಸುವ ಸ್ಥಳದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ. 


ಇದನ್ನೂ ಓದಿ : ಜನವರಿ 2023ರಿಂದ ಈ ರಾಶಿಯವರಿಗೆ ಆರಂಭವಾಗಲಿದೆ ಏಳೂವರೆ ವರ್ಷದ ಶನಿ ದೆಸೆ .!


ಕೆಂಪು ಬಣ್ಣದ ಬಟ್ಟೆ: ಲಕ್ಷ್ಮೀ ಗೆ ಕೆಂಪು ಬಣ್ಣ ತುಂಬಾ ಇಷ್ಟ. ದೀಪಾವಳಿಗಾಗಿ ಮನೆಯನ್ನು ಸ್ವಚ್ಚಗೊಳಿಸುವಾಗ ಕೆಂಪು ಬಣ್ಣದ ಬಟ್ಟೆ ಕಂಡುಬಂದರೆ, ಅದನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಆ ಬಟ್ಟೆಯನ್ನು ಎತ್ತಿಟ್ಟು ಕೊಳ್ಳಬೇಕು. ನಿಮ್ಮ ಜೀವನದಲ್ಲಿ ಬರುವ ಒಳ್ಳೆಯ ದಿನಗಳ ಸಂಕೇತವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.