Hair Care Tips: ಉದ್ದ, ದಪ್ಪ, ಬಲವಾದ ಹೊಳೆಯುವ ಕೂದಲನ್ನು ಪಡೆಯುವ ಬಯಕೆ ನಿಮಗೂ ಇದೆಯೇ? ಇದಕ್ಕಾಗಿ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲೇ ಇರುವ ಮೊಸರನ್ನು ಬಳಸುವ ಮೂಲಕ ಸುಂದರವಾದ ಕೇಶರಾಶಿಯನ್ನು ನಿಮ್ಮದಾಗಿಸಬಹುದು. ಇದಕ್ಕಾಗಿ ಮೊಸರನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.


COMMERCIAL BREAK
SCROLL TO CONTINUE READING

ನೈಸರ್ಗಿಕವಾಗಿ ಸುಂದರ ಕೇಶರಾಶಿಯನ್ನು ಪಡೆಯಲು ಮೊಸರನ್ನು ಈ ರೀತಿ ಬಳಸಿ:
ಮೊಸರು ಮತ್ತು ಮೆಂತ್ಯ:

ಕೂದಲಿಗೆ ಮೆಂತ್ಯ ಹಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ. ಆದರೆ, ಮೆಂತ್ಯದೊಂದಿಗೆ ಮೊಸರನ್ನು ಬಳಸಿ ಹಚ್ಚುವುದರಿಂದ ಕೂದಲು ಸ್ಟ್ರಾಂಗ್ ಆಗುವುದರೊಂದಿಗೆ ಕಾಂತಿಯುತವೂ ಆಗಲಿದೆ. ಇದಕ್ಕಾಗಿ, ರಾತ್ರಿ ಮಲಗುವ ಮುನ್ನ ಮೆಂತ್ಯವನ್ನು ನೆನೆಸಿ. ಬೆಳಿಗ್ಗೆ ಅದನ್ನು ನುಣ್ಣಗೆ ರುಬ್ಬಿ, ಅದಕ್ಕೆ ಮೊಸರನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಡ್ರೈ ಆಗಲು ಬಿಡಿ. ಬಳಿಕ ಶಾಂಪೂ ಬಳಸಿ ಬೆಚ್ಚಗಿನ ನೀರಿನಿಂದ ಕೂದಲನ್ನು ವಾಶ್ ಮಾಡಿ.


ಅಲೋವೆರಾ ಮತ್ತು ಮೊಸರು:
ಅಲೋವೆರಾ ಅತ್ಯುತ್ತಮ ಸೌಂದರ್ಯವರ್ಧಕ ಎಂದು ನಿಮಗೆ ತಿಳಿದೇ ಇದೆ. ಅಲೋವೆರಾ ಜೆಲ್ ಜೊತೆಗೆ ಮೊಸರು ಮಿಶ್ರಣ ಮಾಡಿ ಹೇರ್ ಮಾಸ್ಕ್ ತಯಾರಿಸಿ. ಇದಕ್ಕೆ ಸ್ವಲ್ಪ ತೆಂಗಿನೆಣ್ಣೆ ಬೆರೆಸಿ ಕೂದಲಿಗೆ ಹಚ್ಚಿ. 20 ನಿಮಿಷಗಳ ಬಳಿಕ ಇದನ್ನು ಕೂದಲಲ್ಲಿ ಹಾಗೆ ಬಿಟ್ಟು ನಂತರ ಹೇರ್ ವಾಶ್ ಮಾಡಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಉದ್ದವಾಗ, ಬಲಿಷ್ಠವಾದ, ಶೈನಿ ಕೂದಲನ್ನು ಪಡೆಯಬಹುದು.


ಇದನ್ನೂ ಓದಿ- ಕೂದಲಿನ ಈ ಸಮಸ್ಯೆಗಳಿಗೆ ನಿಂಬೆಯೊಂದೇ ಪರಿಹಾರ


ಮೊಸರು ಮತ್ತು ಜೇನುತುಪ್ಪ:
ಮೊಸರಿನೊಂದಿಗೆ ಜೇನುತುಪ್ಪವನ್ನು ಬೆರೆಸಿ ಹಚ್ಚುವುದು ಕೂಡ ಕೂದಲ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ ಆಗಿದೆ. ಇದಕ್ಕಾಗಿ, ಮೊಸರು, ಜೇನುತುಪ್ಪ, ಆಪಲ್ ಸೈಡರ್ ವಿನೆಗರ್ ಅನ್ನು ಮಿಶ್ರಣ ಮಾಡಿ ಹೇರ್ ಮಾಸ್ಕ್ ತಯಾರಿಸಿ. ಇದನ್ನು ಕೂದಲಿಗೆ ಹಚ್ಚಿ 15 ರಿಂದ 20 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. 


ಇದನ್ನೂ ಓದಿ- ಈ ಒಂದು ಮಸಾಲೆ ಎಲೆಯಿಂದ ಉದ್ದನೆಯ ಕೂದಲು ನಿಮ್ಮದಾಗುತ್ತೆ


ಮೊಸರು, ಕರಿಬೇವಿನ ಸೊಪ್ಪು ಮತ್ತು ಕೊಬ್ಬರಿ ಎಣ್ಣೆ:
ಮೊಸರಿನಲ್ಲಿ ರುಬ್ಬಿದ ಕರಿಬೇವಿನ ಸೊಪ್ಪು, ಕೊಬ್ಬರಿ ಎಣ್ಣೆಯನ್ನು ಬೆರೆಸಿ ಹಚ್ಚಿ. ಕೂದಲಿಗೆ ಮಸಾಜ್ ಮಾಡಿ. 30 ನಿಮಿಷಗಳ ಬಳಿಕ ಶಾಂಪೂವಿನಲ್ಲಿ ನೀರು ಬೆರೆಸಿ ಉಗುರು ಬೆಚ್ಚಗಿನ ನೀರಿನಲ್ಲಿ ಹೇರ್ ವಾಶ್ ಮಾಡಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಸ್ಟ್ರಾಂಗ್ ಆದ ಉದ್ದನೆಯ ಕಾಂತಿಯುತ ಕೂದಲನ್ನು ಪಡೆಯಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.