ನವದೆಹಲಿ : ಮನೆಯಲ್ಲಿ ಹೂವಿನ ಗಿಡಗಳನ್ನು ನೆಟ್ಟರೆ ಇಡೀ ವಾತಾವರಣದಲ್ಲಿ ಸುಗಂಧ ಪಸರಿಸಿರುತ್ತದೆ. ಅಲ್ಲದೆ ಹೂವುಗಳ ಬಣ್ಣ ಕೂಡಾ ನೋಡುಗರ ಮನಸ್ಸನ್ನು ಮುದಗೊಳಿಸುತ್ತದೆ. ಇವುಗಳಲ್ಲಿ ಕೆಲವು ಸಸ್ಯಗಳು ಬಹಳ ವಿಶೇಷವಾದವುಗಳಾಗಿವೆ (Vastu tips for Money). ಮನೆಯಲ್ಲಿ ಈ ಸಸ್ಯಗಳಿದ್ದರೆ ಸಕಾರಾತ್ಮಕತೆ, ಸಂತೋಷ-ಸಮೃದ್ಧಿ ಮತ್ತು ಯಶಸ್ಸನ್ನು ಉಂಟುಮಾಡುತ್ತದೆ. ಮನೆಯವರೂ ವ್ರತ್ತಿಯಲ್ಲಿ ಉನ್ನತಿ ಪಡೆಯುವಂತೆ ಮಾಡುತ್ತದೆ. ಅಲ್ಲದೆ ಗಳಿಕೆಯನ್ನು ಹೆಚ್ಚಿಸುತ್ತದೆ (Vastu for success). ಮಾತ್ರವಲ್ ಮನೆ ಮಂದಿಯಲ್ಲಿ ಸಂತೋಷವನ್ನು ತುಂಬುತ್ತದೆ. ವಾಸ್ತು ಶಾಸ್ತ್ರದಲ್ಲಿ, ಟ್ಯೂಬೆರೋಸ್ ಸಸ್ಯ ಅಥವಾ ರಜನಿಗಂಧ ಸಸ್ಯದ ವಿಶೇಷ ಪರಿಣಾಮಗಳ ಬಗ್ಗೆ ತಿಳಿಸಲಾಗಿದೆ. 


COMMERCIAL BREAK
SCROLL TO CONTINUE READING

 ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ ಈ ಸಸ್ಯ : 
ಟ್ಯೂಬೆರೋಸ್ ಸಸ್ಯವು  (Tuberose vastu) ಸಾಮಾನ್ಯವಾಗಿ ದೇಶದಾದ್ಯಂತ ಕಂಡುಬರುತ್ತದೆ. ಇದನ್ನು  ರಜನೀಗಂಧ ಎಂದೂ ಕೂಡಾ ಕರೆಯುತ್ತಾರೆ. ಟ್ಯೂಬೆರೋಸ್‌ನ ಹೂವುಗಳು ಬಯಲು ಪ್ರದೇಶಗಳಲ್ಲಿ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಕಾಣಸಿಗುತ್ತದೆ.  ಹೂಮಾಲೆಗಳನ್ನು ಟ್ಯೂಬೆರೋಸ್ ಹೂವುಗಳಿಂದ ತಯಾರಿಸಲಾಗುತ್ತದೆ. ಈ ಹೂವುಗಳನ್ನು ಪೂಜೆಯಲ್ಲಿ ದೇವತೆಗಳಿಗೆ ಅರ್ಪಿಸಲಾಗುತ್ತದೆ (Tuberose vastu for success). ಟ್ಯೂಬೆರೋಸ್‌ನಿಂದ ತೈಲ ಮತ್ತು ಸುಗಂಧ ದ್ರವ್ಯಗಳನ್ನು ಸಹ ತಯಾರಿಸಲಾಗುತ್ತದೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ವಾಸ್ತು ಶಾಸ್ತ್ರದ ಪ್ರಕಾರ ಇದು ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. 


ಇದನ್ನೂ ಓದಿ : ಬಹಳ ಸಂದೇಹ ಸ್ವಭಾವದವರಾಗಿರುತ್ತಾರೆ ಈ ಮೂರು ರಾಶಿಯವರು, ಸಂಗಾತಿಯ ಪ್ರತಿ ನಡೆಯ ಮೇಲೆ ಇಟ್ಟಿರುತ್ತಾರೆ ಕಣ್ಣು


ಟ್ಯೂಬೆರೋಸ್ ಅನ್ನು ಮನೆಯಲ್ಲಿ ಇಡುವುದರಿಂದ ಹಲವಾರು ಪ್ರಯೋಜನಗಳಿವೆ  :


-ಟ್ಯೂಬೆರೋಸ್ ಗಿಡವನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಶುಭವಾಗುತ್ತದೆ. ಹಣದ ಹರಿವು ಹೆಚ್ಚಾಗುತ್ತದೆ (Tuberose vastu for money). 
- ಟ್ಯೂಬೆರೋಸ್ ಗಿಡವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಟ್ಟರೆ ಮನೆಯವರಿಗೆ ಸಾಕಷ್ಟು ಪ್ರಗತಿಯನ್ನು ನೀಡುತ್ತದೆ. 
 -ಈ  ಗಿಡವನ್ನು ಮನೆಯ ಅಂಗಳದಲ್ಲಿ ಇಡುವುದರಿಂದ ಪತಿ-ಪತ್ನಿಯರ ನಡುವಿನ ಬಾಂಧವ್ಯ ಗಟ್ಟಿಯಾಗುತ್ತದೆ ಹಾಗೂ ಅವರ ನಡುವೆ ಪ್ರೀತಿ ಹೆಚ್ಚುತ್ತದೆ. -
 -ಈ  ಸಸ್ಯವು ಅನೇಕ ವಾಸ್ತು ದೋಷಗಳನ್ನು (Vastu Dosha) ನಿವಾರಿಸುವ ಮೂಲಕ ಮನೆಯಲ್ಲಿ ಧನಾತ್ಮಕತೆಯನ್ನು ತರುತ್ತದೆ.


ಇದನ್ನೂ ಓದಿ : ಈ ಮೂರು ವಿಷಯಗಳಲ್ಲಿ ಮುಜುಗರಪಟ್ಟುಕೊಂಡು ಮಾಡಿಕೊಳ್ಳುವ ನಷ್ಟವನ್ನು ಜೀವನ ಪರ್ಯಂತ ಭರಿಸುವುದು ಸಾಧ್ಯವೇ ಇಲ್ಲ


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ .


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.