ನವದೆಹಲಿ: ಇಂದಿನ ಕಾಲದಲ್ಲಿ ಉತ್ತಮವಾದ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ನಮ್ಮಲ್ಲಿ ಹೆಚ್ಚಿನವರು ಬಯಸುವುದು ಇದನ್ನೇ. ಮನೆ ಕಟ್ಟುವಾಗ ಅಲಂಕಾರಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಪ್ರತಿಯೊಬ್ಬರೂ ಮಹತ್ವ ನೀಡುತ್ತಾರೆ. ಆದರೆ ಇದಕ್ಕೆ ಸಂಬಂಧಿಸಿದ ಪ್ರಮುಖ ಸಂಗತಿಗಳನ್ನು ನಿರ್ಲಕ್ಷಿಸುತ್ತಾರೆ. ಅಡುಗೆ ಮನೆ, ಬಾತ್ ರೂಂ, ಮನೆಯ ಮುಖ್ಯ ಬಾಗಿಲಿನಿಂದ ಹಿಡಿದು ಮಲಗುವ ಕೋಣೆಯವರೆಗೆ ವಾಸ್ತು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಮನೆಯ ವಾಸ್ತು ಸರಿಯಿಲ್ಲದಿದ್ರೆ ಧನಾತ್ಮಕ ಫಲಿತಾಂಶಗಳ ಬದಲಿಗೆ ನಕಾರಾತ್ಮಕ ಅಂಶಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತವೆ. ಇದು ವಾಸ್ತು ದೋಷಗಳಿಂದ ಉಂಟಾಗುತ್ತದೆ.   


COMMERCIAL BREAK
SCROLL TO CONTINUE READING

ಮನೆಯ ಮಲಗುವ ಕೋಣೆಯಿಂದ ಪೂಜಾ ಕೋಣೆ ಮತ್ತು ವರಾಂಡದವರೆಗೆ, ನೀವು ವಾಸ್ತು ದೋಷಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಕೆಲವು ಕ್ರಮಗಳನ್ನು ಪಾಲಿಸುವ ಮೂಲಕ ನೀವು ವಾಸ್ತು ದೋಷಗಳನ್ನು ಸರಿಪಡಿಸಬಹುದು.


ಇದನ್ನೂ ಓದಿಊಟ ಮಾಡುವಾಗ ಈ ದಿಕ್ಕಿಗೆ ಮುಖ ಮಾಡಿ ಕುಳಿತರೆ ಸಾಲ ಹೆಚ್ಚುತ್ತದೆ..! ಈ ತಪ್ಪು ಮಾಡ್ಬೇಡಿ


ಮನೆಯ ವಾಸ್ತುವಿನ ಬಗ್ಗೆ ತಿಳಿಯಿರಿ


- ಪೂಜಾ ಕೊಠಡಿ, ಬಾಲ್ಕನಿ, ವರಾಂಡಾ, ಟ್ಯಾಂಕ್, ಕೊಳವೆಬಾವಿ, ಸ್ವಾಗತ ಕೊಠಡಿ ಮತ್ತು ಮಳೆ ನೀರಿನ ಒಳಚರಂಡಿ ಈಶಾನ್ಯ ದಿಕ್ಕಿನಲ್ಲಿ ತುಂಬಾ ಸೂಕ್ತವೆಂದು ಪರಿಗಣಿಸಲಾಗಿದೆ.


- ಈಶಾನ್ಯ ಮೂಲೆಯನ್ನು ಬಹಳ ಸುಂದರವಾಗಿ ಜೋಡಿಸಬೇಕು, ಏಕೆಂದರೆ ದೇವರು ಈ ದಿಕ್ಕಿನಲ್ಲಿ ನೆಲೆಸಿರುತ್ತಾನೆ.


- ತುಳಸಿ ಗಿಡವನ್ನು ಈಶಾನ್ಯದಲ್ಲಿ ನೆಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.


- ಮನೆಯ ಈಶಾನ್ಯ ಮೂಲೆಯಲ್ಲಿ ಕೊಳಲನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಕೊಳಲನ್ನು ಹಿಡಿದು ನುಡಿಸುವುದರಿಂದ ವಾಸ್ತುದೋಷ ನಿವಾರಣೆಯಾಗುತ್ತದೆ, ಬಡತನ ದೂರವಾಗುತ್ತದೆ ಮತ್ತು ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.


- ಶಂಖ ಇರುವ ಮನೆಯಲ್ಲಿ ಸುಖ-ಸಂಪತ್ತು ಹೆಚ್ಚಿರುತ್ತದೆ. ಲಕ್ಷ್ಮಿದೇವಿ ನೆಲೆಸಿರುವ ಶಂಖದ ಬಗ್ಗೆ ನೀವು ಕೇಳಿರಬಹುದು. ಇದು ಮನೆಯಲ್ಲಿದ್ದರೆ ಯಾವುದೇ ರೀತಿಯ ಹಣದ ಕೊರತೆ ಇರುವುದಿಲ್ಲ.


- ಮನೆಯಲ್ಲಿ ಬಳಸುವ ಪೊರಕೆ ಸರಿಯಾದ ಸ್ಥಳದಲ್ಲಿರುವುದು ಬಹಳ ಮುಖ್ಯ, ಪೊರಕೆಯಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸಿದ್ದಾಳೆ. ಆದ್ದರಿಂದ ಅದನ್ನು ಯಾವಾಗಲೂ ಮನೆಯ ವಾಯುವ್ಯ ದಿಕ್ಕಿನಲ್ಲಿಯೇ ಇಡಬೇಕು.


ಇದನ್ನೂ ಓದಿ: ಈ ಪಾತ್ರೆಯಲ್ಲಿ ಊಟ ತಿಂದರೆ ಆಯಸ್ಸು 10 ವರ್ಷ ಹೆಚ್ಚಾಗುತ್ತದೆ..! ನಂಬಿಕೆ ಇದ್ದರೆ ತಿಳಿದುಕೊಳ್ಳಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.