Vastu Plant: ಮನೆಯ ಈ ದಿಕ್ಕಿನಲ್ಲಿ ನೆಡಿ ಈ ಅದ್ಭುತ ಸಸ್ಯ, ಹಣಕಾಸಿನ ಮುಗ್ಗಟ್ಟೆ ಇರಲ್ಲ, ಜೀವನ ಸುಖಮಯವಾಗುತ್ತದೆ
Plant For Money Problem: ವಾಸ್ತು ಶಾಸ್ತ್ರದಲ್ಲಿ ಗಿಡ-ಸಸ್ಯಗಳನ್ನು ಸುಖ-ಸಮೃದ್ಧಿಯ ಕಾರಕ ಎಂದು ಪರಿಗಣಿಸಲಾಗಿದೆ. ಹೀಗಿರುವಾಗ ಮನೆಯ ಒಳಗೆ ಅಥವಾ ಹೊರಗೆ ಗಿಡ-ಸಸ್ಯಗಳನ್ನು ನೆಡುವಾಗ ವಾಸ್ತು ನಿಯಮಗಳ ವಿಶೇಷ ಕಾಳಜಿ ವಹಿಸುವುದು ತುಂಬಾ ಮುಖ್ಯ. ಕೆಲ ಸಸ್ಯಗಳು ವ್ಯಕ್ತಿಗಳ ಆರ್ಥಿಕ ಮುಗ್ಗಟ್ಟನ್ನು ನಿವಾರಿಸುವುದರ ಜೊತೆಗೆ ದಾಂಪತ್ಯ ಜೀವನವನ್ನು ಕೂಡ ಖುಷಿಯಿಂದ ತುಂಬುತ್ತವೆ.
Rajanigandha Plant: ಮನೆಯಲ್ಲಿ ನೆಟ್ಟ ಮರಗಳು ಮತ್ತು ಸಸ್ಯಗಳು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತವೆ. ಇದೇ ವೇಳೆ, ವ್ಯಕ್ತಿಯ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರವೂ ಅವುಗಳಲ್ಲಿ ಅಡಗಿದೆ. ವಾಸ್ತುದಲ್ಲಿ ಅನೇಕ ಸಸ್ಯಗಳಿವೆ, ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ನೆಡುವ ಮೂಲಕ ಆರ್ಥಿಕ ಮುಗ್ಗಟ್ಟನ್ನು ತೊಡೆದುಹಾಕಬಹುದು. ಅಷ್ಟೇ ಅಲ್ಲ ಕೆಲವು ಗಿಡಗಳು ಪತಿ-ಪತ್ನಿಯರ ನಡುವೆ ಪ್ರೀತಿಯನ್ನು ಸಹ ಹೆಚ್ಚಿಸುತ್ತವೆ. ಇಂದು ನಾವು ಅಂತಹ ಒಂದು ಸಸ್ಯದ ಬಗ್ಗೆ ತಿಳಿದುಕೊಳ್ಳೋಣ, ಈ ಸಷ್ಯ ಮನೆಯಲ್ಲಿನ ಅಪಶ್ರುತಿಯನ್ನು ನಿವಾರಿಸುತ್ತದೆ. ಇದರೊಂದಿಗೆ, ಅದು ಹಣದ ಕೊರತೆಯನ್ನು ತೊಡೆದುಹಾಕಲು ಕೂಡ ಸಹಾಯ ಮಾಡುತ್ತದೆ,
ವಾಸ್ತು ತಜ್ಞರ ಪ್ರಕಾರ, ಸುಗಂಧ ರಾಜ ಅಥವಾ ರಜನಿಗಂಧ ಸಸ್ಯವು ಅವುಗಳಲ್ಲಿ ಒಂದು. ವಾಸ್ತುವಿನ ದೃಷ್ಟಿಯಿಂದ ಇದನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ಹೀಗಿರುವಾಗ ಸುಗಂಧ ರಾಜ ಗಿಡವನ್ನು ಅಥವಾ ರಜನಿಗಂಧ ಗಿಡವನ್ನು ಮನೆಯಲ್ಲಿ ನೆಡಬಹುದು. ಅದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಸುಗಂಧರಾಜ ಗಿಡವನ್ನು ಈ ದಿಕ್ಕಿನಲ್ಲಿ ನೆಡಬೇಕು
ವಾಸ್ತು ತಜ್ಞರ ಪ್ರಕಾರ ಸುಗಂಧ ರಾಜ ಗಿಡವನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡುವುದು ಯಾವಾಗಲು ಶುಭ. ಮನೆಯ ಈ ದಿಕ್ಕಿಗೆ ಸುಗಂಧ ರಾಜ ಗಿಡವನ್ನು ನೆಟ್ಟರೆ, ಆ ಮನೆಯ ಎಲಿಗೆಯಾಗುವುದರ ಜೊತೆಗೆ, ಅದು ಶುಭ ಫಲಿತಾಂಶಗಳನ್ನು ನೀಡುತ್ತದೆ.
ವಾಸ್ತು ಪ್ರಕಾರ ಸುಗಂಧ ರಾಜ ಗಿಡವನ್ನು ಮನೆಯ ಅಂಗಳದಲ್ಲಿ ನೆಡುವುದು ಕೂಡ ಶುಭ. ಇದನ್ನು ಮನೆಯ ಅಂಗಳದಲ್ಲಿ ಮಡಿಕೆಯಲ್ಲಿ ನೆಟ್ಟರೆ ಮನೆಯ ತೊಂದರೆಗಳು ನಿವಾರಣೆಯಾಗುತ್ತವೆ. ಅಲ್ಲದೆ, ಪತಿ ಮತ್ತು ಹೆಂಡತಿಯ ನಡುವೆ ಪರಸ್ಪರ ಪ್ರೀತಿಯನ್ನು ಹೆಚ್ಚಾಗುತ್ತದೆ.
ಇದನ್ನೂ ಓದಿ-ಯಾವ ಕಣ್ಣಿನ ರೆಪ್ಪೆ ಬಡಿದುಕೊಂಡರೆ ಒಳ್ಳೆಯದು? ಇದರ ಹಿಂದಿದೆ ಗೂಢಾರ್ಥ!
ಸುಗಂಧರಾಜ ಅಥವಾ ರಜನಿಗಂಧಾ ಹೂವುಗಳನ್ನು ಪೂಜೆಯಲ್ಲಿ ಬಳಸಿದರೆ, ಅದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ಅದರ ಸುಗಂಧ ದ್ರವ್ಯದ ಬಳಕೆ ಕೂಡ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಕುಟುಂಬದ ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಲು, ಸುಗಂಧರಾಜ ಗಿಡವನ್ನು ನೆಡಲು ಸಹ ಸಲಹೆ ನೀಡಲಾಗುತ್ತದೆ.
ಇದನ್ನೂ ಓದಿ-Swapna Shastra: ಕನಸಿನಲ್ಲಿ ಕಾಗೆ ಕಾಣಿಸುವುದು ಶುಭವೋ! ಅಶುಭವೋ?
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ