ನವದೆಹಲಿ: ಸಸ್ಯ ಮತ್ತು ಗಿಡಗಳನ್ನು ನೆಡುವುದರಿಂದ ಮನೆಯ ಸೌಂದರ್ಯ ಹೆಚ್ಚುವುದಲ್ಲದೆ, ನಕಾರಾತ್ಮಕ ಶಕ್ತಿಯನ್ನು ಧನಾತ್ಮಕ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಮನೆಯಲ್ಲಿ ಗಿಡಗಳನ್ನು ಇಡುವುದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. ವಾಸ್ತು ಪ್ರಕಾರ ಮನೆಯಲ್ಲಿ ನೆಡಲು ತುಂಬಾ ಮಂಗಳಕರವಾದ ಕೆಲವು ಮರ ಮತ್ತು ಸಸ್ಯಗಳ ಬಗ್ಗೆ ನಿಮಗೆ ನಾವು ತಿಳಿಸಿಕೊಡಲಿದ್ದೇವೆ. ವಾಸ್ತುಶಾಸ್ತ್ರದ ಪ್ರಕಾರ ಈ ಸಸ್ಯಗಳನ್ನು ಸರಿಯಾದ ಸ್ಥಳದಲ್ಲಿ ಇಡುವುದು ತುಂಬಾ ಮುಖ್ಯ. ವಾಸ್ತು ಪ್ರಕಾರ ಮನೆಯಲ್ಲಿ ಯಾವ ಸಸ್ಯಗಳನ್ನು ನೆಡಬೇಕು ಅನ್ನೋದ ಮಾಹಿತಿ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಮನೆಯಲ್ಲಿ ಈ ಸಸ್ಯಗಳನ್ನು ನಟ್ಟರೆ ಶುಭ  


ಬಿದಿರಿನ ಗಿಡ: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬಿದಿರಿನ ಗಿಡವನ್ನು ನೆಡುವುದರಿಂದ ಸುಖ, ಸೌಭಾಗ್ಯ ಮತ್ತು ಶಾಂತಿ ಸಿಗುತ್ತದೆ. ನಿಮ್ಮ ಸ್ನೇಹಿತರಿಗೆ ಉಡುಗೊರೆಯಾಗಿಯೂ ಇದನ್ನು ನೀಡಬಹುದು. ಇದನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇಡಬೇಕು.


ಮನಿ ಪ್ಲಾಂಟ್: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಮನೆಯಲ್ಲಿ ಹಣದ ಕೊರತೆ ಉಂಟಾಗುವುದಿಲ್ಲ. ಮನೆಯ ಮುಂಭಾಗದ ಕೋಣೆಯ ಆಗ್ನೇಯ ಮೂಲೆಯಲ್ಲಿ ಇಡುವುದರಿಂದ ಅದೃಷ್ಟು ಹುಡುಕಿ ಬರುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ: Surya Grahan 2023: ಸೂರ್ಯಗ್ರಹಣದ ವೇಳೆ ಗರ್ಭಿಣಿಯರು ಅಪ್ಪಿತಪ್ಪಿಯೂ ಈ ಕೆಲಸ ಮಾಡಬಾರದು!


ಪೀಸ್ ಲಿಲಿ: ಪೀಸ್ ಲಿಲಿ ಸಸ್ಯವು ಪ್ರೀತಿ ಮತ್ತು ಶಾಂತಿಯ ಸಂಕೇತವಾಗಿದೆ. ಒಳ್ಳೆಯ ನಿದ್ದೆ ಬರಲು ಮತ್ತು ಕೆಟ್ಟ ಕನಸುಗಳು ಬರದಂತೆ ಮಲಗುವ ಕೋಣೆಯಲ್ಲಿ ಇಡಬೇಕು. ಇದನ್ನು ದಂಪತಿಯ ಕೋಣೆಯಲ್ಲಿ ಇರಿಸಿದರೆ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತದೆ.


ಸ್ನೇಕ್ ಪ್ಲಾಂಟ್: ವಾಸ್ತು ಪ್ರಕಾರ ಸ್ನೇಕ್ ಪ್ಲಾಂಟ್ ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ಸ್ನೇಕ್ ಪ್ಲಾಂಟ್ ಮನೆಯಲ್ಲಿರುವ ಹಾನಿಕಾರಕ ವಿಷವನ್ನು ಸಹ ಹೊರಹಾಕುತ್ತದೆ. ಕಿಟಕಿಯ ಬಳಿ ಇಟ್ಟರೆ ಹೊರಗಿನಿಂದ ಆಮ್ಲಜನಕವನ್ನು ಸೆಳೆಯುತ್ತದೆ. ಇದು ರಾತ್ರಿಯಲ್ಲೂ ಆಮ್ಲಜನಕ ಬಿಡುಗಡೆ ಮಾಡುವ ಸಸ್ಯವಾಗಿದೆ, ಆದ್ದರಿಂದ ಇದನ್ನು ಮಲಗುವ ಕೋಣೆಯಲ್ಲಿ ಇಡಬೇಕು.


ಡ್ಯಾಫೋಡಿಲ್: ಮನೆಯಲ್ಲಿ ಡ್ಯಾಫೋಡಿಲ್ ನೆಡುವುದು ಆರ್ಥಿಕ ಸಮೃದ್ಧಿ, ಸಂಪತ್ತು ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ತರುತ್ತದೆ. ಈ ಗಿಡವನ್ನು ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು.


ರಬ್ಬರ್ ಸಸ್ಯ: ರಬ್ಬರ್ ಸಸ್ಯವು ಸಾಕುಪ್ರಾಣಿ ಸ್ನೇಹಿ ಸಸ್ಯವಾಗಿದೆ. ನಿಮ್ಮ ಮನೆಯಲ್ಲಿ ನಾಯಿ ಇದ್ದರೆ ಖಂಡಿತವಾಗಿಯೂ ಅದನ್ನು ಮನೆಯಲ್ಲಿರಿಸಿ. ಮನೆಯೊಳಗೆ ರಬ್ಬರ್ ಗಿಡವನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ರಬ್ಬರ್ ಗಿಡ ಮನೆಯ ಗಾಳಿಯನ್ನು ಸ್ವಚ್ಛವಾಗಿಡುತ್ತದೆ. ವಾಸ್ತು ಪ್ರಕಾರ ಈ ಸಸ್ಯವು ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ. ರಬ್ಬರ್ ಗಿಡವನ್ನು ಆಗ್ನೇಯ ದಿಕ್ಕಿನಲ್ಲಿಡಬೇಕು.


ಇದನ್ನೂ ಓದಿ: Kedar Yog: ಅದೃಷ್ಟವಂತರ ಜಾತಕದಲ್ಲಿರುತ್ತದೆ ಈ ಯೋಗ, ಅಪಾರ ಧನ-ಸಂಪತ್ತು, ಸ್ಥಾನಮಾನದ ಒಡೆಯರಾಗುತ್ತಾರೆ!


ಜೇಡ್ ಪ್ಲಾಂಟ್: ಜೇಡ್ ಪ್ಲಾಂಟ್ ಅದೃಷ್ಟ, ಸಮೃದ್ಧಿ ಮತ್ತು ಬೆಳವಣಿಗೆಯ ಸಂಕೇತವಾಗಿದೆ. ನಿಮ್ಮ ಸ್ನೇಹಿತರಿಗೆ ಪ್ಲಾಂಟ್ ಉಡುಗೊರೆಯಾಗಿ ನೀಡಬಹುದು. ಇದು ನಿಮ್ಮ ನಡುವಿನ ಸ್ನೇಹವನ್ನು ಹೆಚ್ಚಿಸುತ್ತದೆ. ವಾಸ್ತು ಪ್ರಕಾರ ಪ್ಲಾಂಟ್ ಅನ್ನು ಆಗ್ನೇಯ ದಿಕ್ಕಿನಲ್ಲಿಡಬೇಕು. ಅಪ್ಪಿತಪ್ಪಿಯೂ ಇದನ್ನು ಮಲಗುವ ಕೋಣೆ ಅಥವಾ ಸ್ನಾನಗೃಹದಲ್ಲಿ ಇಡಬೇಡಿ.


ಗೋಲ್ಡನ್ ಪೊಥೋಸ್: ಗೋಲ್ಡನ್ ಪೊಥೋಸ್ ಒಂದು ಸಸ್ಯವಾಗಿದ್ದು, ಇದು ವೇಗವಾಗಿ ಬೆಳೆಯುತ್ತದೆ. ಮನೆಯಲ್ಲಿ ನೆಟ್ಟ ಈ ಸಸ್ಯವು ಸಕಾರಾತ್ಮಕತೆಯನ್ನು ತರುತ್ತದೆ. ಇದರೊಂದಿಗೆ ಇದು ಹಣದ ಮ್ಯಾಗ್ನೆಟ್ ಆಗಿದೆ. ಗೋಲ್ಡನ್ ಪೊಥೋಸ್ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಮನೆಯ ಈಶಾನ್ಯ ಭಾಗದಲ್ಲಿಡಬಾರದು.  


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.