Vastu Tips:ಅಪ್ಪಿತಪ್ಪಿಯೂ ಕೂಡ ಈ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಬೇಡಿ, ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ
Vastu Shastra - ಕಠಿಣ ಪರಿಶ್ರಮದ ಹೊರತಾಗಿಯೂ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಿರಾ? ಇದಕ್ಕೆ ಕಾರಣ ನಿಮ್ಮ ಮನೆ ಅಥವಾ ಅಂಗಡಿಯ ವಾಸ್ತು ದೋಷ ಇರುವ ಸಾಧ್ಯತೆ ಇದೆ.
ನವದೆಹಲಿ: Vastu Tips - ಕಠಿಣ ಪರಿಶ್ರಮದ ಹೊರತಾಗಿಯೂ ನೀವು ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವಿರಾ? ಅನೇಕ ಪ್ರಯತ್ನಗಳ ಹೊರತಾಗಿಯೂ, ಸಾಲದ ಹೊರೆ ನಿಮ್ಮ ತಲೆಯಿಂದ ಕಡಿಮೆಯಾಗುತ್ತಿಲ್ಲವೆ? ಈ ರೀತಿ ನಿಮ್ಮೊಂದಿಗೂ ನಡೆಯುತ್ತಿದ್ದರೆ, ನೀವು ಮನೆಯ ವಾಸ್ತು ಸರಿಪಡಿಸಬೇಕು.
ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಹಣಕಾಸಿನ ಸ್ಥಿತಿ ನಿಮ್ಮ ಮನೆಯಲ್ಲಿ ಹರಿಯುವ ನೀರು (Water)ಸರಬರಾಜು ವ್ಯವಸ್ಥೆ ಮತ್ತು ಮೆಟ್ಟಿಲುಗಳ (Staris) ದಿಕ್ಕಿಗೆ ಸಂಬಂಧಿಸಿದೆ. ಈ ಎರಡೂ ವಿಷಯಗಳು ಸರಿಯಾಗಿದ್ದರೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನಿಮ್ಮ ಸಾಲ ಕೂಡ ಬೇಗನೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ ಮತ್ತು ನೀವು ಉದ್ಯೋಗ-ವ್ಯವಹಾರದಲ್ಲಿ ತ್ವರಿತ ಪ್ರಗತಿಯನ್ನು ಸಾಧಿಸಲು ಆರಂಭಿಸುವಿರಿ. ನೀವು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ಹೊಂದಿರಬೇಕು ತಿಳಿಯೋಣ ಬನ್ನಿ.
ಪೂರ್ವ ದಿಕ್ಕಿನಿಂದ ಆರಂಭಗೊಳ್ಳಬೇಕು ಮೆಟ್ಟಿಲುಗಳು
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆ ಅಥವಾ ಅಂಗಡಿಗೆ ಹೋಗುವ ಮೆಟ್ಟಿಲುಗಳು ಪಶ್ಚಿಮ ದಿಕ್ಕಿನಿಂದ ಆರಂಭವಾದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಮಾಡುವುದರಿಂದ ಇಡೀ ಕುಟುಂಬವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಮತ್ತು ಅವರ ಮೇಲೆ ಸಾಲದ ಹೊರೆಯೂ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ವಾಸ್ತು (Vastu Tips) ಪ್ರಕಾರ, ಇದರ ಬದಲು ಮನೆ ಅಥವಾ ಅಂಗಡಿಯ ಮೆಟ್ಟಿಲುಗಳು ಪೂರ್ವ ದಿಕ್ಕಿನಿಂದ ಆರಂಭವಾಗಬೇಕು. ಇದು ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕಾರಣವಾಗುತ್ತದೆ.
ನೀರು ಸರಬರಾಜು ವ್ಯವಸ್ಥೆ ಉತ್ತರ ದಿಕ್ಕಿನಲ್ಲಿರಬೇಕು
ಇದಲ್ಲದೆ, ಮನೆಯಲ್ಲಿ ನೀರಿನ ಸರಬರಾಜು ವ್ಯವಸ್ಥೆ ಇರುವ ಸ್ಥಳವೂ ಬಹಳ ಮುಖ್ಯವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆ ಅಥವಾ ಅಂಗಡಿಯಲ್ಲಿ ನೀರಿನ ವ್ಯವಸ್ಥೆ ಉತ್ತರ ದಿಕ್ಕಿನಲ್ಲಿರಬೇಕು. ಇದನ್ನು ಮಾಡುವುದರಿಂದ ಕುಟುಂಬದಲ್ಲಿ ಸಂತೋಷ ಹರಿದು ಬರುತ್ತದೆ. ಇದರೊಂದಿಗೆ ಹಣಕಾಸಿನ ಸ್ಥಿತಿಯೂ ಸುಧಾರಿಸುತ್ತಲೇ ಇರುತ್ತದೆ. ಈ ವಾಸ್ತು ಸಲಹೆಗಳಿಂದ ಕುಟುಂಬದಲ್ಲಿ ಒಗ್ಗಟ್ಟು ಹೆಚ್ಚಾಗುತ್ತದೆ.
ಇದನ್ನೂ ಓದಿ-Shani Dev: April 2022ರವರೆಗೆ ಈ ರಾಶಿಯ ಜನರಿಗೆ ಶನಿಕಾಟ ಇರಲ್ಲ, ನಿಮ್ಮ ರಾಶಿ ಯಾವುದು?
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಸಲಹೆಗಳನ್ನು ಅನುಸರಿಸುವ ಮೊದಲು, ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರನ್ನು ಸಂಪರ್ಕಿಸಿ)
ಇದನ್ನೂ ಓದಿ-Pitru Paksha 2021: ಯಾವ ತರ್ಪಣದ ವೇಳೆ ಯಾವ ಮಂತ್ರ ಪಠಿಸಬೇಕು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.