ನವದೆಹಲಿ: ನೀವು ನಿಮ್ಮ ಕಂಪನಿಯಲ್ಲಿ ಉನ್ನತ ಸ್ಥಾನದಲ್ಲಿದ್ದೀರಾ? ವ್ಯವಹಾರದಲ್ಲಿ ನಿರೀಕ್ಷಿತ ಲಾಭದ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದೀರಾ? ಹಾಗಾದ್ರೆ ಕಚೇರಿಯಲ್ಲಿ ನೀವು ಕುಳಿತುಕೊಳ್ಳುವ ಕೋಣೆಯ ದಿಕ್ಕನ್ನು ಬದಲಾಯಿಸಬೇಕು. ನಿಮ್ಮ ಕೋಣೆಯ ದಿಕ್ಕಿಗೆ ವಾಸ್ತು ದೋಷ ಇರುವ ಸಾಧ್ಯತೆ ಇದೆಯೇ? ಎಂಬುದನ್ನು ಪರಿಶೀಲಿಸಿ. ಒಂದು ವೇಳೆ ವಾಸ್ತು ದೋಷ ಇದ್ದರೆ ನೀವು ಕಷ್ಟಪಟ್ಟು ಕೆಲಸ ಮಾಡಿದ್ರೂ ಸರಿಯಾದ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ.


COMMERCIAL BREAK
SCROLL TO CONTINUE READING

ಕಂಪನಿಯ ವ್ಯವಸ್ಥಾಪಕ ನಿರ್ದೇಶಕ(Managing Director)ರ ಕೊಠಡಿಯನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿರುವುದು ತುಂಬಾ ಮಂಗಳಕರ. ನಿಮ್ಮ ಕೋಣೆ ಈ ರೀತಿ ಇಲ್ಲದಿದ್ದರೆ ಕೂಡಲೇ ಸರಿಪಡಿಸಿರಿ. ಕೋಣೆಯ ಒಳಗಡೆ ನಿಮ್ಮ ಆಸನ ವ್ಯವಸ್ಥೆಯು ನಿಮ್ಮ ಮುಖವು ಪೂರ್ವ ಅಥವಾ ಉತ್ತರದ ಕಡೆಗೆ ಇರಬೇಕು. ನೀವು ಕುಳಿತುಕೊಳ್ಳುವ ಕೋಣೆ ಮತ್ತು ಟೇಬಲ್ ಕುರ್ಚಿಯ ದಿಕ್ಕನ್ನು ಈ ರೀತಿ ಇಡಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ನಿಮ್ಮ ವಹಿವಾಟು ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದನ್ನು ನೋಡಿ ನೀವೇ ಆಶ್ಚರ್ಯ ಪಡುತ್ತೀರಿ.


ಇದನ್ನೂ ಓದಿ: Shukra Mangal Gochar 2023: ಈ 5 ರಾಶಿಗಳಿಗೆ 1 ತಿಂಗಳ ಕಾಲ ಅದೃಷ್ಟವೋ ಅದೃಷ್ಟ..!


ಕಚೇರಿಯಲ್ಲಿ waiting room ಮಾಡಲು ಸಾಧ್ಯವಾಗದಿದ್ದರೆ, ಮಾಲೀಕರು ಮತ್ತು ಅಧಿಕಾರಿಗಳ ಕ್ಯಾಬಿನ್‌ನಿಂದ ಹೊರಗೆ ಬರುವ ಸಂದರ್ಶಕರಿಗೆ ಪೂರ್ವ ಅಥವಾ ಉತ್ತರ ಗೋಡೆಯ ಬೆಂಬಲದೊಂದಿಗೆ ಕುರ್ಚಿ ಅಥವಾ ಸೋಫಾಗಳನ್ನು ಇಡಬೇಕು. ಈ ರೀತಿಯಾಗಿ ಒಳಬರುವ ಪ್ರತಿಯೊಬ್ಬ ಸಂದರ್ಶಕರ ಮುಖವು ಪಶ್ಚಿಮ ಅಥವಾ ದಕ್ಷಿಣದ ಕಡೆಗೆ ಇರುತ್ತದೆ. ವಾಸ್ತುವಿನ ಈ ತತ್ವವನ್ನು ಸಂದರ್ಶಕರು ಕುಳಿತುಕೊಳ್ಳುವ ದಿಕ್ಕಿನಲ್ಲಿ ನೋಡಿಕೊಳ್ಳಬೇಕು. ಕಚೇರಿಯಲ್ಲಿ ನೌಕರರು ತಮ್ಮ ಸ್ಥಾನಗಳಿಗೆ ಅನುಗುಣವಾಗಿ ಪಶ್ಚಿಮ ಮತ್ತು ದಕ್ಷಿಣದಲ್ಲಿ ಅಧಿಕಾರಿಗಳ ಕ್ಯಾಬಿನ್ ಬಳಿ ಕುಳಿತುಕೊಳ್ಳಬೇಕು.


ಒಂದು ವೇಳೆ ನೀವು ಅಂಗಡಿಯನ್ನು ನಡೆಸುತ್ತಿದ್ದರೆ, ಮಾರಾಟದ ಸರಕುಗಳನ್ನು ದಕ್ಷಿಣ, ಪಶ್ಚಿಮ ಮತ್ತು ವಾಯುವ್ಯದಲ್ಲಿ ಅಂದರೆ ಪಶ್ಚಿಮ ಮತ್ತು ಉತ್ತರದ ನಡುವೆ ಇಡುವುದು ಶುಭ ಫಲಿತಾಂಶ ನೀಡುತ್ತದೆ. ಪೂರ್ವ ಮತ್ತು ಉತ್ತರದ ನಡುವಿನ ಜಾಗವನ್ನು ಅಂದರೆ, ಈಶಾನ್ಯ ಮತ್ತು ಪೂರ್ವ ಮತ್ತು ದಕ್ಷಿಣದ ನಡುವಿನ ಜಾಗವನ್ನು ಮತ್ತು ಮಧ್ಯದಲ್ಲಿ ಖಾಲಿ ಜಾಗವನ್ನು ಇಡುವುದು ಉತ್ತಮ.


ಇದನ್ನೂ ಓದಿ: Surya Gochar 2023: ಮಾರ್ಚ್ 15ರಿಂದ ಈ ಜನರಿಗೆ ಪ್ರಗತಿ ಜೊತೆಗೆ ಅದೃಷ್ಟ ಸಿಗಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.