ಹಣಕ್ಕಾಗಿ ವಾಸ್ತು ಸಲಹೆಗಳು:  ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮತ್ತು ಆಕೆಯ ಕೃಪೆಗೆ ಪಾತ್ರರಾಗಲು ಜನರು ತುಂಬಾ ಶ್ರಮಿಸುತ್ತಾರೆ. ಲಕ್ಷ್ಮೀ ದೇವಿಯ ಆಶೀರ್ವಾದದಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯುತ್ತದೆ ಮತ್ತು ಮನೆಯು ಸಂಪತ್ತು ಮತ್ತು ಆಹಾರದಿಂದ ತುಂಬಿರುತ್ತದೆ ಎಂಬ ನಂಬಿಕೆ ಇದೆ. ಲಕ್ಷ್ಮಿ ದೇವಿ ನೆಲೆಸಿರುವ ಮನೆಯಲ್ಲಿ ಬಡತನ ಬರುವುದಿಲ್ಲ ಎಂಬ ನಂಬಿಕೆ ಇದೆ. ಅಂತೆಯೇ ಲಕ್ಷ್ಮಿಯ ಕೋಪದಿಂದ ಮನೆಯಲ್ಲಿ ನಾನಾ ರೀತಿಯ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಅನೇಕ ಬಾರಿ, ಎಷ್ಟೇ ಕಷ್ಟಪಟ್ಟು ದುಡಿದರೂ ಮನೆಯಲ್ಲಿ ಹಣದ ಒಳಹರಿವು ಹೆಚ್ಚಾಗುವುದಿಲ್ಲ ಅಥವಾ ಎಷ್ಟೇ ಹಣ ಗಳಿಸಿದರೂ ಅದು ಕೈಯಲ್ಲಿ ಉಳಿಯುವುದೇ ಇಲ್ಲ ಎಂದು ಹಲವರು ದೂರುತ್ತಾರೆ. ಇದಕ್ಕೆ ನಿತ್ಯ ನಾವು ಮಾಡುವ ಸಣ್ಣ-ಪುಟ್ಟ ತಪ್ಪುಗಳೇ ಕಾರಣ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ನಾವು ಯಾವುದೇ ಹಣದ ವ್ಯವಹಾರ ಮಾಡುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ ಲಕ್ಷ್ಮಿಯ ಕೃಪೆ ಸದಾ ಉಳಿಯುತ್ತದೆ. ಅಂತಹ ಮನೆಯಲ್ಲಿ ಪ್ರಗತಿ ಸಾಧ್ಯವಿದೆ ಎನ್ನಲಾಗುತ್ತದೆ. ವಾಸ್ತುವಿನ ಈ ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ. 


ಇದನ್ನೂ ಓದಿ-    Vastu Tips For Broom: ಈ ಹೊತ್ತಿನಲ್ಲಿ ತಪ್ಪಿಯೂ ಮನೆಯಿಂದ ಕಸ ಹೊರ ಹಾಕಬೇಡಿ ಎದುರಾಗುತ್ತದೆ ಆರ್ಥಿಕ ಸಮಸ್ಯೆ


ಸಾಮಾನ್ಯವಾಗಿ ಹಣದ ವಹಿವಾಟು ಮಾಡುವಾಗ, ನಾವು ಹಣವನ್ನು ಎಣಿಸಿ ಕೊಡುತ್ತೇವೆ ಅಥವಾ ತೆಗೆದುಕೊಳ್ಳುತ್ತೇವೆ. ಆದರೆ ನಿಮಗೆ ಗೊತ್ತಾ ವಾಸ್ತು ಪ್ರಕಾರ ಹಣವನ್ನು ತೆಗೆದುಕೊಳ್ಳುವಾಗ, ಕೊಡುವಾಗ ಮತ್ತು ಎಣಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು. ಹಾಗಾಗಿ, ಹಣದ ವ್ಯವಹಾರ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡುವುದು ಅಗತ್ಯ.


ಹಣವನ್ನು ಎಣಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:
ವಾಸ್ತು ಶಾಸ್ತ್ರದ ಪ್ರಕಾರ, ಪರ್ಸ್‌ನಲ್ಲಿ ನೋಟುಗಳು ಅಥವಾ ಹಣದೊಂದಿಗೆ ಆಹಾರ ಪದಾರ್ಥಗಳನ್ನು ಇಡುವುದನ್ನು ತಪ್ಪಿಸಿ. ಇದು ಹಣಕ್ಕೆ ಮಾಡುವ ಅವಮಾನ ಎಂದು ಪರಿಗಣಿಸಲಾಗುತ್ತದೆ. 


ಬಡವರಿಗೆ ಅಥವಾ ನಿರ್ಗತಿಕರಿಗೆ ಹಣವನ್ನು ನೀಡುವಾಗ, ಹಣವನ್ನು ಎಂದಿಗೂ ಎಸೆಯಬಾರದು ಎಂಬುದನ್ನು ನೆನಪಿನಲ್ಲಿಡಿ. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿಗೆ ಅಪಮಾನವಾಗುತ್ತದೆ ಎನ್ನಲಾಗುತ್ತದೆ.


ನೋಟು ಎಣಿಕೆ ಮಾಡುವಾಗ ಜನರು ಪದೇ ಪದೇ ಬೆರಳಿಗೆ ಉಗುಳು ಹಚ್ಚುವ ಅಭ್ಯಾಸ ಹೊಂದಿರುತ್ತಾರೆ. ಹೀಗೆ ಮಾಡುವುದರಿಂದ ಲಕ್ಷ್ಮಿಗೆ ಅಗೌರವವಾಗುತ್ತದೆ. ಹಣವನ್ನು ಎಣಿಸುವಾಗ, ನೀವು ಅದರ ಮೇಲೆ ನೀರು ಅಥವಾ ಪುಡಿಯನ್ನು ಬಳಸಬಹುದು. 


ಇದನ್ನೂ  ಓದಿ-  Wednesday Remedies: ಜೀವನದಲ್ಲಿ ಯಶಸ್ಸನ್ನು ಪಡೆಯಲು ಬುಧವಾರ ತಪ್ಪದೇ ಮಾಡಿ ಈ ಕೆಲಸ


ನಿಮ್ಮ ಹಾಸಿಗೆಯ ತಲೆ ಅಥವಾ ಬದಿಯಲ್ಲಿ ಹಣವನ್ನು ಇಟ್ಟುಕೊಂಡು ಮಲಗಬೇಡಿ. ಇದರಿಂದ ಲಕ್ಷ್ಮಿಗೆ ಅಗೌರವ ತೋರಿದಂತಾಗುತ್ತದೆ. ಹಣವನ್ನು ಸದಾ ಬೀರು ಅಥವಾ ಸುರಕ್ಷಿತವಾಗಿರುವಂತಹ ಸ್ವಚ್ಛವಾದ ಸ್ಥಳದಲ್ಲಿ ಇರಿಸಿ. ಅಲ್ಲದೆ, ಯಾವಾಗಲೂ ಗೋಮತಿ ಚಕ್ರ ಅಥವಾ ಕೌರಿಯೊಂದಿಗೆ ಹಣವನ್ನು ಇರಿಸಿ. 


ಲಕ್ಷ್ಮಿಯು ಸಂಪತ್ತಿನಲ್ಲಿ ನೆಲೆಸುತ್ತಾಳೆ ಎಂದು ನಂಬಲಾಗಿದೆ. ಆದ್ದರಿಂದ, ನೆಲದ ಮೇಲೆ ಬಿದ್ದರೆ ಅಂತಹ ಹಣವನ್ನು ಕಣ್ಣಿಗೆ ಒತ್ತಿ ನಮಸ್ಕರಿಸಿದ ಬಳಿಕವೇ ಜೇಬಿಗೆ ಇರಿಸಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.