ಬೆಂಗಳೂರು : Vastu Tips For Good Health and Money: ಪೌಷ್ಟಿಕ ಆಹಾರ ಸೇವನೆಯ ಜೊತೆಗೆ ಸರಿಯಾದ ಸ್ಥಳದಲ್ಲಿ ಕುಳಿತು ಸರಿಯಾದ ರೀತಿಯಲ್ಲಿ ಆಹಾರವನ್ನು ಸೇವಿಸಬೇಕು. ಆಹಾರವನ್ನು ಬೇಯಿಸುವ ಸ್ಥಳ ಅಥವಾ ವಿಧಾನ ತಪ್ಪಾಗಿದ್ದರೆ, ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ತಪ್ಪುಗಳು ಹಣದ ನಷ್ಟ, ರೋಗಗಳು ಇತ್ಯಾದಿಗಳನ್ನು ಉಂಟುಮಾಡುತ್ತವೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಅಡುಗೆ ಮಾಡುವುದು ಮಾತ್ರವಲ್ಲ,  ಆಹಾರ ಸೇವಿಸುವಾಗ ವಾಸ್ತುವಿನಲ್ಲಿ ಹೇಳಲಾದ ನಿಯಮಗಳನ್ನು  ಅನುಸರಿಸಿದರೆ,  ವ್ಯಕ್ತಿಯು ದೀರ್ಘಾಯುಷಿಯಾಗುತ್ತಾನೆ ಎನ್ನಲಾಗಿದೆ.  ಅಲ್ಲದೆ ಇದು ವ್ಯಕ್ತಿಯ ಆರ್ಥಿಕ ಸ್ಥಿತಿಯ ಮೇಲೆ ಕೂಡಾ ಪರಿಣಾಮ ಬೀರುತ್ತದೆ. 


COMMERCIAL BREAK
SCROLL TO CONTINUE READING

ಯಾವ ದಿಕ್ಕಿಗೆ ಮುಖ ಮಾಡಿ ಆಹಾರ ಸೇವಿಸಬೇಕು ? 
ವಾಸ್ತು ಶಾಸ್ತ್ರದ ಪ್ರಕಾರ ಆಹಾರವನ್ನು ಸೇವಿಸಲು ಪೂರ್ವ ದಿಕ್ಕಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಈ ದಿಕ್ಕಿಗೆ ಮುಖಮಾಡಿ ಕುಳಿತು ಆಹಾರ ಸೇವಿಸುವುದರಿಂದ ಆರೋಗ್ಯ ಸಮಸ್ಯೆ ದೂರವಾಗುತ್ತದೆ ಮಾತ್ರವಲ್ಲ ವ್ಯಕ್ತಿಯ ಆಯಸ್ಸು ಕೂಡಾ ಹೆಚ್ಚುತ್ತದೆ.  ಇದರೊಂದಿಗೆ ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಕೂಡಾ ವೃದ್ದಿಯಾಗುತ್ತದೆ. 


ಇದನ್ನೂ ಓದಿ : Astrology Tips: ನಿಮ್ಮ ದೇವರ ಮನೆಯಿಂದ ಇಂದೇ ಈ 5 ವಸ್ತುಗಳನ್ನು ತೆಗೆಯಿರಿ


ಅತ್ಯಂತ ವೇಗವಾಗಿ ಹಣ ಸಂಪಾದಿಸಲು ಬಯಸುವವರು ಯಾವಾಗಲೂ ಉತ್ತರ ದಿಕ್ಕಿಗೆ ಮುಖಮಾಡಿ ಆಹಾರವನ್ನು ಸೇವಿಸಬೇಕು. ಇದು ಸಂಪತ್ತಿನ ದೇವರಾದ ಕುಬೇರನ ದಿಕ್ಕು. ಈ ಕಡೆ ಮುಖಮಾಡಿ ಆಹಾರ ಸೇವಿಸುವುದರಿಂದ ವ್ಯಕ್ತಿ ಶ್ರೀಮಂತನಾಗುತ್ತಾನೆ ಎನ್ನಲಾಗುತ್ತದೆ. ಮನೆಯ ಯಜಮಾನ ಯಾವಾಗಲೂ ಈ ದಿಕ್ಕಿಗೆ ಮುಖಮಾಡಿ ಆಹಾರವನ್ನು ಸೇವಿಸಬೇಕು. 


ಉದ್ಯೋಗ ಮಾಡುವವರು ಅಥವಾ ಪರೀಕ್ಷೆ-ಸಂದರ್ಶನಕ್ಕೆ ತಯಾರಿ ನಡೆಸುತ್ತಿರುವವರು ಉತ್ತರಾಭಿಮುಖವಾಗಿ ಆಹಾರವನ್ನು ಸೇವಿಸಬೇಕು. ಇದು ಅವರಿಗೆ ಯಶಸ್ಸನ್ನು ನೀಡುತ್ತದೆ ಮತ್ತು ಲಕ್ಷ್ಮೀ ದೇವಿಯ ಕೃಪೆಯಿಂದ ಅವರು ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. 


ಇದನ್ನೂ ಓದಿ : Shani Vakri: ಮುಂದಿನ ತಿಂಗಳಿನಿಂದ ಈ ರಾಶಿಯವರಿಗೆ ಕೆಟ್ಟ ದಿನಗಳು ಪ್ರಾರಂಭ


ಮತ್ತೊಂದೆಡೆ, ಪಶ್ಚಿಮ ದಿಕ್ಕಿಗೆ ಎದುರಾಗಿ ಕುಳಿತು ಆಹಾರವನ್ನು ಸೇವಿಸುವುದರಿಂದ ರೋಗಗಳು ದೂರವಾಗುತ್ತವೆ. ಆರೋಗ್ಯ ಉತ್ತಮವಾಗಿರುತ್ತದೆ. ಆದ್ದರಿಂದ ಯಾವುದೇ ಕಾಯಿಲೆಗೆ ತುತ್ತಾದವರು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತು ಪ್ರತಿನಿತ್ಯ ಆಹಾರ ಸೇವಿಸಿದರೆ ಶೀಘ್ರ ಲಾಭವಾಗುತ್ತದೆ. 


ಆದರೆ ದಕ್ಷಿಣ ದಿಕ್ಕಿಗೆ ಮುಖಮಾಡಿ ಕುಳಿತು ಯಾವ ಕಾರಣಕ್ಕೂ ಆಹಾರವನ್ನು ಸೇವಿಸಲೇ ಬಾರದು. ಹೀಗೆ ಮಾಡುವುದರಿಂದ ವ್ಯಕ್ತಿಯನ್ನು ರೋಗಗಳು ಆವರಿಸಿಕೊಳ್ಳುತ್ತವೆ. ಮನೆಯಲ್ಲಿ ಬಡತನ ಬರುತ್ತದೆ. ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಈ ದಿಕ್ಕು ಪೂರ್ವಜರ ದಿಕ್ಕು, ಆದ್ದರಿಂದ ಈ ದಿಕ್ಕಿಗೆ ಮುಖಮಾಡಿ ಆಹಾರವನ್ನು ಸೇವಿಸಬಾರದು. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.