Vastu Tips For Marriage: ಮದುವೆಯಲ್ಲಿ ಅನಗತ್ಯ ವಿಳಂಬ, ದಾಂಪತ್ಯ ಮುರಿದು ಬೀಳುವುದು ಅಥವಾ ಗಂಡ-ಹೆಂಡತಿ ನಡುವೆ ಆಗಾಗ ಜಗಳವಾಗುವುದು ಎಲ್ಲದಕ್ಕೂ ಜಾತಕದಲ್ಲಿ ಗ್ರಹಗಳ ಸ್ಥಾನಮಾನ ಕಾರಣವಾಗುತ್ತದೆ ಎಂದು ನಿಮಗೆ ತಿಳಿದಿರಬಹುದು. ಆದರೆ, ವಿವಾಹಕ್ಕಾಗಿ ಎಷ್ಟೇ ಪ್ರಯತ್ನಿಸಿದರೂ ಒಂದಲ್ಲಾ ಒಂದು ಕಾರಣಕ್ಕಾಗಿ ವಿವಾಹ ವಿಳಂಬವಾಗುತ್ತಲೇ ಇದ್ದರೆ ಇದಕ್ಕೆ ವಾಸ್ತು ದೋಷವೂ ಕಾರಣವಾಗಿರಬಹುದು. ಆದರೆ ಕೆಲವು ಸುಲಭ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ವಾಸ್ತು ದೋಷಗಳನ್ನು ಸರಿಪಡಿಸಬಹುದು.


COMMERCIAL BREAK
SCROLL TO CONTINUE READING

ಮನೆಯ ವಾಸ್ತು ದೋಷದಿಂದ ಮದುವೆ ಆಗುವ ಹುಡುಗ-ಹುಡುಗಿಯರ ಮದುವೆ ವಿಳಂಬವಾಗುತ್ತದೆ. ಅದೇ ಸಮಯದಲ್ಲಿ, ಪತಿ-ಪತ್ನಿಯರ ನಡುವಿನ ಸಂಬಂಧವೂ ಹುಳಿಯಾಗುತ್ತದೆ. ಇದಕ್ಕಾಗಿ, ಕೆಲವು ಸರಳ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮದುವೆ ಅಥವಾ ವೈವಾಹಿಕ ಜೀವನದಲ್ಲಿ (Vastu Tips For Marriage) ಉಂಟಾಗುವ ತೊಂದರೆಗಳನ್ನು ನಿವಾರಿಸಬಹುದು. 


ಇದನ್ನೂ ಓದಿ- Jupiter Transit: ಮುಂದಿನ 3 ತಿಂಗಳು ಈ 5 ರಾಶಿಯವರಿಗೆ ಗುರುವಿನ ಆಶೀರ್ವಾದ, ಅಪಾರ ಯಶಸ್ಸು


ಮನೆಯ ಮಗ ಅಥವಾ ಮಗಳ ಮದುವೆ ವಿಳಂಬವಾದರೆ ಅವರ ಕೋಣೆ ಯಾವ ದಿಕ್ಕಿನಲ್ಲಿರಬೇಕು ಎಂದು ನೋಡಿ. ಮದುವೆಯಾಗುವ ಹುಡುಗ ಮತ್ತು ಹುಡುಗಿಯ ಕೋಣೆ ಯಾವಾಗಲೂ ವಾಯುವ್ಯ ದಿಕ್ಕಿನಲ್ಲಿರಬೇಕು. ಇದು ಸಾಧ್ಯವಾಗದಿದ್ದರೆ ಉತ್ತರ ದಿಕ್ಕಿಗೆ ಮಲಗುವುದು ಕೂಡ ಒಳ್ಳೆಯದು.


ಕೋಣೆಯ ದಿಕ್ಕನ್ನು ಹೊರತುಪಡಿಸಿ, ಅವರ ಹಾಸಿಗೆ ಗೋಡೆಗೆ ಅಂಟಿಕೊಂಡಿರಬಾರದು ಎಂದು ಖಚಿತಪಡಿಸಿಕೊಳ್ಳಿ. ಅವರ ಕೋಣೆಯ ಗೋಡೆಯ ಮೇಲೆ ಬಣ್ಣಬಣ್ಣದ ಹೂವುಗಳ ಫೋಟೋ ಹಾಕಿದರೆ ಒಳ್ಳೆಯದು.


ಇದನ್ನೂ ಓದಿ- Vastu Tips: ವ್ಯವಹಾರದಲ್ಲಿ ಪ್ರಗತಿ ಬಯಸಿದರೆ, ಈ 5 ವಿಶೇಷ ವಾಸ್ತು ಸಲಹೆಗಳನ್ನು ಅಳವಡಿಸಿಕೊಳ್ಳಿ


ಅನಗತ್ಯ ಕಾರಣಗಳಿಂದಾಗಿ ಪದೇ ಪದೇ ಮದುವೆ (Marriage) ಮುಂದೂಡುತ್ತಿದ್ದರೆ ಅಂತಹ ಹುಡುಗ-ಹುಡುಗಿಯ ಕೋಣೆಯ ಗೋಡೆಗಳ ಮೇಲೆ ತಿಳಿ ಗುಲಾಬಿ ಬಣ್ಣವನ್ನು ಬಳಸುವುದು ತುಂಬಾ ಮಂಗಳಕರವಾಗಿದೆ. ಗುಲಾಬಿ ಬಣ್ಣದ ಬಳಕೆ ಸಾಧ್ಯವಾಗದಿದ್ದರೆ ಬೇರೆ ಯಾವುದೇ ತಿಳಿ ಬಣ್ಣವನ್ನು ಸಹ ಬಳಸಬಹುದು. ಆದರೆ ಗೋಡೆಗಳ ಮೇಲೆ ಅಪ್ಪಿ-ತಪ್ಪಿಯೂ ಸಹ ನೀಲಿ, ಕಪ್ಪು ಅಥವಾ ಬೂದು ಬಣ್ಣವನ್ನು ಬಳಸಬೇಡಿ. 


ಹುಡುಗರು ಮತ್ತು ಹುಡುಗಿಯರ ಕೊಠಡಿಗಳ ಗೋಡೆಯ ಮೇಲೆ ಮ್ಯಾಂಡರಿನ್ ಬಾತುಕೋಳಿಗಳ ಜೋಡಿಯ ಫೋಟೋವನ್ನು ಹಾಕುವುದು ಅಥವಾ ಅದರ ಕಲಾಕೃತಿಯನ್ನು ಇಡುವುದು ತುಂಬಾ ಮಂಗಳಕರವಾಗಿದೆ. ಇದರಿಂದ ಶೀಘ್ರದಲ್ಲೇ ಕಂಕಣಭಾಗ್ಯ ಕೂಡಿಬರಲಿದೆ ಎಂದು ಹೇಳಲಾಗುತ್ತದೆ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಊಹೆಗಳು ಮತ್ತು ಸಾಮಾನ್ಯ  ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ