ಮನೆಯಲ್ಲಿನ ತಿಜೋರಿ ಯಾವಾಗಲೂ ತುಂಬಿ ತುಳುಕಲು ಇಲ್ಲಿದೆ ಒಂದು ಸುಲಭ ಉಪಾಯ!
Vastu Tips For Mirror: ಮನೆಯ ಈಶಾನ್ಯ ದಿಕ್ಕನ್ನು ನೀರಿನ ಸ್ಥಳ ಎಂದು ಹೇಳಲಾಗುತ್ತದೆ. ಈಶಾನ್ಯ ಎಂದರೆ ಪೂರ್ವ ಮತ್ತು ಉತ್ತರದ ನಡುವಿನ ದಿಕ್ಕು. ನೀವು ಈ ದಿಕ್ಕಿನಲ್ಲಿ ಕನ್ನಡಿಯನ್ನು ಹಾಕಬಹುದು. ಮನೆಯ ಪೂರ್ವ ಅಥವಾ ಉತ್ತರದಲ್ಲಿ ಕನ್ನಡಿ ಇಟ್ಟರೂ ಕೂಡ ಶುಭ.(Lifestyle News In Kannada)
ಬೆಂಗಳೂರು: ಪ್ರತಿ ಮನೆಯಲ್ಲೂ ಕನ್ನಡಿ ಇರುತ್ತದೆ, ಅದನ್ನು ನಾವು ದರ್ಪಣ ಎಂದೂ ಕೂಡ ಕರೆಯುತ್ತೇವೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಇದು ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ.ಮನೆಯಲ್ಲಿ ಅಥವಾ ಹೊರಗೆ ಪ್ರತಿಯೊಬ್ಬರಿಗೂ ಕನ್ನಡಿ ಬೇಕೇ ಬೇಕು. ಪ್ರತಿ ಮನೆಯ ಯಾವುದಾದರೊಂದು ಮೂಲೆಯಲ್ಲಿ ಕನ್ನಡಿ ಖಂಡಿತವಾಗಿಯೂ ಇರುತ್ತದೆ. ಮುಖವನ್ನು ಅಂದವಾಗಿರಿಸಲು ಬಲಾಲಾಗುವ ಈ ಕನ್ನಡಿ ನಿಮ್ಮ ಅದೃಷ್ಟಕ್ಕೂ ಸಂಬಂಧಿಸಿದೆ. ಮನೆಯಲ್ಲಿ ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟುಕೊಳ್ಳಬೇಕು, ಇದರಿಂದ ವ್ಯಕ್ತಿಗೆ ಅದರ ಸಕಾರಾತ್ಮಕ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ, ಆದರೆ ತಪ್ಪು ದಿಕ್ಕಿನಲ್ಲಿ ಇರಿಸಲಾದ ಕನ್ನಡಿಯು ಮನೆಯಲ್ಲಿ ವಾಸಿಸುವ ಜನರಿಗೆ ಹಲವು ರೀತಿಯ ಸಮಸ್ಯೆಗಳನ್ನು ತರುತ್ತದೆ. (Lifestyle News In Kannada)
ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದು ತುಂಬಾ ಮುಖ್ಯ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಅಳವಡಿಸಲಾಗಿರುವ ಕನ್ನಡಿಯ ಮೂಲಕ ಒಂದು ವಿಶೇಷ ರೀತಿಯ ಶಕ್ತಿಯು ಪಸರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮನೆಯಲ್ಲಿ ಕನ್ನಡಿಯನ್ನು ಹಾಕುವಾಗ, ಅದರ ದಿಕ್ಕಿನ ಬಗ್ಗೆ ವಿಶೇಷ ಕಾಳಜಿ ವಹಿಸಿ. ಮನೆಯಲ್ಲಿರುವ ಕನ್ನಡಿಯ ಸರಿಯಾದ ದಿಕ್ಕು ಹೇಗಿರಬೇಕು, ಯಾವ ಗಾತ್ರದ ಕನ್ನಡಿಗಳು ವಾಸ್ತು ಪ್ರಕಾರ ಸರಿಯಾಗಿವೆ, ಈ ಎಲ್ಲಾ ವಿಷಯಗಳನ್ನು ವಾಸ್ತು ಶಾಸ್ತ್ರದಲ್ಲಿ ಚರ್ಚಿಸಲಾಗಿದೆ. ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಕನ್ನಡಿಗೆ ಸಂಬಂಧಿಸಿದ ಕೆಲ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಇದರಿಂದ ಮನೆಯಲ್ಲಿ ನಮಾರಾತ್ಮಕ ಶಕ್ತಿಯ ಸಂಚಾರವಾಗುತ್ತದೆ
ಮನೆಯ ದಕ್ಷಿಣ ಮತ್ತು ನೈಋತ್ಯ ದಿಕ್ಕಿನಲ್ಲಿ ಕನ್ನಡಿಯನ್ನು ಇಡಬಾರದು. ಕನ್ನಡಿಯು ನೀರಿನ ಮೂಲವಾಗಿರುವುದರಿಂದ, ಅದನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಅವಶ್ಯಕ. ದಕ್ಷಿಣ ಅಥವಾ ಪಶ್ಚಿಮ ಗೋಡೆಗಳ ಮೇಲೆ ಇರಿಸಲಾಗಿರುವ ಕನ್ನಡಿಯು ವಿರುದ್ಧ ದಿಕ್ಕುಗಳಿಂದ ಬರುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.
ವರ್ಣರಂಜಿತ ಕನ್ನಡಿಯನ್ನು ಹೊರಹಾಕಿ
ಮನೆಯಲ್ಲಿ ಯಾವತ್ತೂ ವರ್ಣರಂಜಿತ ಕನ್ನಡಿಗಳನ್ನು ಹಾಕಬೇಡಿ, ಅದು ಕೆಟ್ಟ ಪ್ರಭಾವವನ್ನು ಬೀರುತ್ತದೆ, ಹಾಗೆಯೇ ನಿಮ್ಮ ಮಲಗುವ ಕೋಣೆಯಲ್ಲಿಯೂ ಕನ್ನಡಿಗಳನ್ನು ಅಳವಡಿಸಬೇಡಿ. ನೀರಿನ ಮೂಲವಾಗಿರುವುದರಿಂದ ಕನ್ನಡಿ ಸಮೃದ್ಧಿಯನ್ನು ಸಹ ತರುತ್ತದೆ. ಆದರೆ ಅದರ ಜಾಗ ಸರಿಯಾಗಿದ್ದರೆ ಮಾತ್ರ ಅದು ಪರಿಣಾಮಕಾರಿಯಾಗಿರುತ್ತದೆ. ಮನೆಯ ಗೋಡೆಯ ಮೇಲೆ ದಕ್ಷಿಣ ದಿಕ್ಕಿನಲ್ಲಿ ಕನ್ನಡಿ ಇಡಬೇಡಿ. ಈ ದಿಕ್ಕು ಯಮನ ದಿಕ್ಕಾಗಿರುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿಗಾಗಿ, ಅನೇಕ ಜನರು ದಕ್ಷಿಣ ದಿಕ್ಕಿನಲ್ಲಿ ಕನ್ನಡಿಯನ್ನು ಹಾಕುತ್ತಾರೆ, ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ಸರಿಯಲ್ಲ.
ಮನೆಯ ಈ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸಿ
ಮನೆಯ ಈಶಾನ್ಯ ದಿಕ್ಕನ್ನು ನೀರಿನ ದಿಕ್ಕು ಎಂದು ಹೇಳಲಾಗುತ್ತದೆ. ಈಶಾನ್ಯ ಎಂದರೆ ಪೂರ್ವ ಮತ್ತು ಉತ್ತರದ ನಡುವಿನ ದಿಕ್ಕು. ನೀವು ಇಲ್ಲಿ ಕನ್ನಡಿಯನ್ನು ಹಾಕಬಹುದು. ಮನೆಯ ಪೂರ್ವ ಅಥವಾ ಉತ್ತರದಲ್ಲಿ ಇಟ್ಟಿರುವ ಕನ್ನಡಿಗಳು ಎಂದಿಗೂ ಕೂಡ ಶುಭಕರ. ಹಾಗೆಯೇ 6 x 6 ರ ದರ್ಪಣವು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ಪೂರ್ವ ಅಥವಾ ಉತ್ತರದ ಗೋಡೆಯ ಮೇಲೆ ಕನ್ನಡಿಯನ್ನು ಯಾವ ರೀತಿ ನೇತು ಹಾಕಬೇಕು ಎಂದರೆ ನೋಡುವವರ ಮುಖವು ಪೂರ್ವ ಅಥವಾ ಉತ್ತರದ ಕಡೆಗೆ ಇರುವಂತಿರಬೇಕು.
ಈ ವಿಷಯಗಳನ್ನು ನೆನಪಿನಲ್ಲಿಡಿ
ಇದನ್ನೂ ಓದಿ-ಮೇಷ ರಾಶಿಯಲ್ಲಿ ಗಜಕೇಸರಿ ರಾಜಯೋಗ ರಚನೆ, ಧನಲಕ್ಷ್ಮಿ ಕೃಪೆಯಿಂದ ಈ ರಾಶಿಗಳ ಜನರಿಗೆ ಭಾರಿ ಧನಲಾಭ!
> ಊಟದ ಮೇಜಿನ ಮುಂದೆ ಕನ್ನಡಿಯನ್ನು ಇರಿಸಿ, ಅದು ಸಮೃದ್ಧಿಯನ್ನು ತರುತ್ತದೆ.
>> ಡ್ರಾಯಿಂಗ್ ರೂಮಿನ ಉತ್ತರ ಗೋಡೆಯ ಮೇಲೆ ಕನ್ನಡಿ ಇರಿಸಿ.
>> ಕನ್ನಡಿಯನ್ನು ಚೌಕಾಕಾರ ಅಥವಾ ವೃತ್ತಾಕಾರವಾಗಿ ಮಾಡಬಹುದು. ಆದರೆ ವಿಚಿತ್ರವಾದ ವಿನ್ಯಾಸಗಳನ್ನು ಹೊಂದಿರಬಾರದು
>> ಬಿರುವಿನಲ್ಲಿ ಅಥವಾ ತಿಜೋರಿಯಲ್ಲಿ ಕನ್ನಡಿಯನ್ನು ಇರಿಸಿ, ಅದು ನಿಮ್ಮ ಸಂಪತ್ತನ್ನು ಹೆಚ್ಚಿಸುತ್ತದೆ.
>> ಉತ್ತರ ದಿಕ್ಕನ್ನು ಸಂಪತ್ತಿನ ದೇವ ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ ಮತ್ತು ದಕ್ಷಿಣ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸುವುದರಿಂದ ಉತ್ತರದಿಂದ ಬರುವ ಚಿತ್ರವು ಕನ್ನಡಿಯಲ್ಲಿ ಗೋಚರಿಸುತ್ತದೆ, ಹೀಗಾಗಿ ಅದು ಒಳ್ಳೆಯದಲ್ಲ.
>> ತುಂಬಾ ಭಾರವಾದ, ಚೂಪಾದ ಅಥವಾ ಅಂಚು ಮುರಿದಿರುವಂತಹ ಕನ್ನಡಿ ಅಥವಾ ದರ್ಪಣವನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಅಲ್ಲದೆ, ತ್ರಿಕೋನ, ಅಂದರೆ ಮೂರು ಮೂಲೆಗಳ ಕನ್ನಡಿಯನ್ನು ಬಳಸಬಾರದು. ಇದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ-ಹೊಸ ವರ್ಷಾರಂಭದಲ್ಲಿಯೇ ಶತ್ರು ರಾಹುವಿನ ಜೊತೆ ಸೂರ್ಯನ ಮೈತ್ರಿ, ಈ ಜನರಿಗೆ ಭಾಗ್ಯೋದಯ-ಉನ್ನತಿಯ ಯೋಗ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ