Vastu Tips for Plants: ಹಸಿರು ಸುಖ-ಸಮೃದ್ಧಿಯ ಸಂಕೇತ. ಹಸಿರು ಸಸ್ಯಗಳು ಕಣ್ಣಿಗೆ ಶಾಂತಿಯನ್ನು ನೀಡುವುದರ ಜೊತೆಗೆ ಮನಸ್ಸಿಗೆ ಮುದವನ್ನು ನೀಡುತ್ತವೆ.  ಮನೆಗಳಲ್ಲಿ ಸಸ್ಯಗಳನ್ನು ನೆಡುವುದರಿಂದ ಮನೆಯ ಸೌಂದರ್ಯ ಹೆಚ್ಚುತ್ತದೆ. ಮಾತ್ರವಲ್ಲ, ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಹಾಗಂತ ಸಿಕ್ಕ ಸಿಕ್ಕ ಸಸ್ಯಗಳನ್ನೆಲ್ಲಾ ಮನೆಗೆ ತಂದಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಸಂಶಯವೇ ಇಲ್ಲ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರದಲ್ಲಿಯೂ ಕೂಡ ಮನೆಯಲ್ಲಿ ಯಾವ ಸಸ್ಯಗಳನ್ನು ನೆಡಬೇಕು, ಯಾವ ಸಸ್ಯಗಳನ್ನು ಮನೆಯಿಂದ ದೂರವಿಡಬೇಕು ಎಂಬುದರ ಬಗ್ಗೆ ಉಲ್ಲೇಖಿಸಲಾಗಿದೆ. ವಾಸ್ತು ಪ್ರಕಾರ, ಮನೆಯಲ್ಲಿ ಕೆಲವು ಸಸ್ಯಗಳನ್ನು ನೆಡುವುದರಿಂದ ದುಷ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸಿ ಮನೆಯ ನಾಶಕ್ಕೆ ಕಾರಣವಾಗುತ್ತವೆ. ಕೆಲಸ-ಕಾರ್ಯಗಳಲ್ಲಿ ತೊಡಕು ಉಂಟಾಗಿ,  ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಗೆ ಅಡ್ಡಿಯಾಗುತ್ತದೆ. ಆರ್ಥಿಕ ಸಂಕಷ್ಟದಿಂದ ಕುಟುಂಬದ ನೆಮ್ಮದಿ ಹಾಳಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಕೆಲವು ಸಸ್ಯಗಳನ್ನು ಅಪ್ಪಿತಪ್ಪಿಯೂ ಮನೆ ಮುಂದೆ ನೆಡಬಾರದು ಎಂದು ಹೇಳಲಾಗುತ್ತದೆ. ಅಂತಹ ಸಸ್ಯಗಳು ಯಾವುವು ಎಂದು ತಿಳಿಯೋಣ...


ಇದನ್ನೂ ಓದಿ- ತಾಯಿ ಮಹಾಲಕ್ಷ್ಮಿಯ ಆಶೀರ್ವಾದ ಪಡೆಯಲು ನಿಮ್ಮ ಮನೆಯ ಈ ದಿಕ್ಕಿನಲಿರಲಿ ತುಳಸಿ ಸಸ್ಯ


ವಾಸ್ತು ಪ್ರಕಾರ, ಈ ರೀತಿಯ ಗಿಡಗಳನ್ನು ಮನೆ ಮುಂದೆ ನೆಡುವುದರಿಂದ ಕುಟುಂಬ ವಿನಾಶದತ್ತ ಸಾಗುತ್ತದೆ:
* ಮುಳ್ಳಿನ ಸಸ್ಯಗಳು:

ವಾಸ್ತು ಶಾಸ್ತ್ರದ ಪ್ರಕಾರ ಮುಳ್ಳಿರುವ ಸಸ್ಯಗಳನ್ನು ಯಾವುದೇ ಕಾರಣಕ್ಕೂ ಮನೆಯ ಮುಂದೆ ನೆಡಬಾರದು. ಉದಾಹರಣೆಗೆ, ಗುಲಾಬಿ ಗಿಡ, ಕಳ್ಳಿ ಗಿಡ, ನಿಂಬೆ ಸಸ್ಯವನ್ನು ಮನೆಯ ಮುಂದೆ ಅಥವಾ ಮನೆ ಒಳಗೆ ಎಂದಿಗೂ ನೆಡಬಾರದು. ಮುಳ್ಳು ದ್ವೇಷ, ವೈಷಮ್ಯದ ಸಂಕೇತವಾಗಿದೆ. ಇಂತಹ ಗಿಡಗಳನ್ನು ನೆಡುವುದರಿಂದ ಕುಟುಂಬದಲ್ಲಿ ಜಗಳ, ವಿಷಮ್ಯಗಳು ಹೆಚ್ಚಾಗಿ, ಕುಟುಂಬವೇ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ, ಇಂತಹ ಗಿಡಗಳನ್ನು ಮನೆಯ ಮುಂದೆ ನೆಡುವುದನ್ನು ತಪ್ಪಿಸಿ.


* ಹುಣಸೆ ಮರ:
ವಾಸ್ತು ಶಾಸ್ತ್ರದ ಪ್ರಕಾರ, ಕುಟುಂಬಸ್ಥರು ವಾಸವಿರುವ ಮನೆ ಬಳಿ ಎಂದಿಗೂ ಕೂಡ ಹುಣಸೆ ಮರ ಇರಬಾರದು. ಹುಣಸೆ ಮರವು ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯವನ್ನು ಹೆಚ್ಚಿಸುತ್ತದೆ. ಕುಟುಂಬದ ಸದಸ್ಯರ ನಡುವೆ ವೈಮಸ್ಯ ಹೆಚ್ಚಾಗಿ ಒಗ್ಗಟ್ಟು ಮುರಿಯುತ್ತದೆ. ಹಾಗಾಗಿ, ಮನೆಯ ಮುಂದೆ ಹುಣಸೆ ಮರವನ್ನು ಎಂದಿಗೂ ನೆಡಬೇಡಿ.


ಇದನ್ನೂ ಓದಿ- Vastu Tips: ಮನೆಯ ಈ ದಿಕ್ಕಿನಲ್ಲಿ ಟಿವಿ ಇಡುವುದರಿಂದ ಧನ ನಷ್ಟ


* ಖರ್ಜೂರದ ಸಸ್ಯ:
ಖರ್ಜೂರ ಆರೋಗ್ಯಕ್ಕೆ ಉತ್ತಮ. ಆದರೆ, ಭಾರತೀಯ ಸಂಸ್ಕೃತಿಯಲ್ಲಿ ಇದನ್ನು ಅತ್ಯಂತ ಅಮಂಗಳಕರ ಸಸ್ಯ ಎಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ಮನೆಯ ಮುಂದೆ ಖರ್ಜೂರದ ಗಿಡ ನೆಡುವುದರಿಂದ ಕುಟುಂಬದ ಕೆಟ್ಟ ದಿನಗಳು ಆರಂಭವಾಗುತ್ತದೆ. ಆರ್ಥಿಕ ಸಂಕಷ್ಟಗಳು ಹೆಚ್ಚಾಗಿ ಕುಟುಂಬ ಬೀದಿಗೆ ಬರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ, ಕನಸಿನಲ್ಲಿಯೂ ಖರ್ಜೂರದ ಗಿಡವನ್ನು ನೆಡುವ ಚಿಂತನೆ ಮಾಡಬೇಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.