ಬೆಂಗಳೂರು : Vastu Tips For wallet: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರಿಸಲಾಗಿರುವ ಪ್ರತಿಯೊಂದು ವಸ್ತು ಮತ್ತು ನಾವು ಬಳಸುವ ವಸ್ತುಗಳು ನಮ್ಮ ಜೀವನದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಇದು ಒಳ್ಳೆಯದೂ ಆಗಿರಬಹುದು, ಕೆಟ್ಟ ಪರಿಣಾಮವೂ ಆಗಿರಬಹುದು. ವಾಸ್ತು ನಿಯಮಗಳ ಪ್ರಕಾರ ಕೆಲವು ವಸ್ತುಗಳನ್ನು ಆಯ್ಕೆ ಮಾಡುವಾಗ ಮತ್ತು ಬಳಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ದಿನನಿತ್ಯ ಬಳಸುವ ಪ್ರಮುಖ ವಸ್ತುಗಳಲ್ಲಿ ಪರ್ಸ್ ಕೂಡಾ ಒಂದು. ಪುರುಷರು ಮತ್ತು ಮಹಿಳೆಯರು ಹೀಗೆ ಎಲ್ಲರೂ ಹಣವನ್ನು ಇಡಲು ಪರ್ಸ್ ಬಳಸುತ್ತಾರೆ. ಈ ಪರ್ಸ್  ಬಳಕೆಯ ಸಮಯದಲ್ಲಿಯೂ ಕೆಲವು ವಾಸ್ತು ನಿಯಮಗಳನ್ನು ಅನುಸರಿಸಬೇಕು. 


COMMERCIAL BREAK
SCROLL TO CONTINUE READING

ಪರ್ಸ್  ಅಥವಾ ವ್ಯಾಲೆಟ್ ಬಳಸುವಾಗ ಈ ತಪ್ಪುಗಳಾಗದಂತೆ ನೋಡಿಕೊಳ್ಳಿ : 
ಹರಿದ ಪರ್ಸ್ ಅಥವಾ ವಾಲೆಟ್ ಅನ್ನು ಎಂದಿಗೂ ಬಳಸಬೇಡಿ. ಪರ್ಸ್ ಹರಿದು ಹೋಗಿದ್ದಾರೆ ಅದನ್ನು ತಕ್ಷಣ ಬದಲಾಯಿಸಿ. ಹರಿದ ಪರ್ಸ್ ಬಳಸುವುದರಿಂದ ಹಣದ ಅಭಾವ ಹೆಚ್ಚಾಗಬಹುದು. 


ಇದನ್ನೂ ಓದಿ : Astrology Tips: ನಿಮ್ಮ ದೇವರ ಮನೆಯಿಂದ ಇಂದೇ ಈ 5 ವಸ್ತುಗಳನ್ನು ತೆಗೆಯಿರಿ


1.ಪರ್ಸ್‌ನಲ್ಲಿ ನೋಟುಗಳು ಮತ್ತು ಬೇರೆ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ತುರುಕಿ ಇಟ್ಟುಕೊಳ್ಳಬೇಡಿ. ಅವುಗಳನ್ನು ಕ್ರಮಬದ್ಧವಾಗಿ ಜೋಡಿಸಿ ಇರಿಸಿ. ಪರ್ಸ್‌ನಲ್ಲಿ ಬೇಕಾಬಿಟ್ಟಿಯಾಗಿ ನೋಟುಗಳನ್ನು ಇಟ್ಟುಕೊಳ್ಳುವುದು ಸಂಪತ್ತಿನ ದೇವತೆಯಾದ ಲಕ್ಷ್ಮೀಯ ಕೋಪಕ್ಕೆ ಕಾರಣವಾಗಬಹುದು.  


2.ಯಾವತ್ತೂ ಹಳೆಯ ಬಿಲ್, ವೇಸ್ಟ್ ಪೇಪರ್ ಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಬೇಡಿ. ಹೀಗೆ ಮಾಡುವುದರಿಂದ ನಕಾರಾತ್ಮಕತೆ ಹೆಚ್ಚಾಗುತ್ತದೆ. ಇದು ಅನೇಕ ರೀತಿಯ ಸಮಸ್ಯೆಗಳು ಎದುರಾಗುವಂತೆ ಮಾಡಬಹುದು. 


3.ಪರ್ಸ್‌ನಲ್ಲಿ ಕೀ ಅಥವಾ ಚೂಪಾದ ವಸ್ತುಗಳನ್ನು ಎಂದಿಗೂ ಇಟ್ಟುಕೊಳ್ಳಬೇಡಿ. ಹೀಗೆ ಮಾಡುವುದರಿಂದ ಖರ್ಚು ಹೆಚ್ಚಾಗುತ್ತದೆ. ಹಣ ನಷ್ಟವಾಗುತ್ತದೆ. ಕಬ್ಬಿಣದ ವಸ್ತುಗಳನ್ನು ಪರ್ಸ್ ನಲ್ಲಿ ಇಡಬೇಡಿ.   


ಇದನ್ನೂ ಓದಿ : Shani Vakri: ಮುಂದಿನ ತಿಂಗಳಿನಿಂದ ಈ ರಾಶಿಯವರಿಗೆ ಕೆಟ್ಟ ದಿನಗಳು ಪ್ರಾರಂಭ


4.ಪರ್ಸ್ ನಲ್ಲಿ ದೇವರ ಫೋಟೋ ಇಡಬಾರದು. ಹೀಗೆ ಮಾಡುವುದರಿಂದ ದೇವತೆಗಳಿಗೆ ಅಪಮಾನವಾಗುತ್ತದೆ. 


5.ಒಣಗಿದ ಹೂವುಗಳು ಇತ್ಯಾದಿಗಳನ್ನು ಪರ್ಸ್‌ನಲ್ಲಿ ಇಡಲೇ ಬಾರದು. ಇವುಗಳು ನಕಾರಾತ್ಮಕತೆಯನ್ನು ಉಂಟುಮಾಡುತ್ತವೆ.  


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.