ಬೆಂಗಳೂರು : ಮನೆಯ ಪ್ರತಿಯೊಂದು ಕೋಣೆಯನ್ನು ಸರಿಯಾದ ದಿಕ್ಕಿನಲ್ಲಿ ನಿರ್ಮಾಣ ಮಾಡಿದರೆ ಸಾಕಾಗುವುದಿಲ್ಲ. ವಾಸ್ತು ಶಾಸ್ತ್ರದ (Vastu Shastra)ಪ್ರಕಾರ, ಮನೆಯಲ್ಲಿ ಇರಿಸಲಾಗಿರುವ ವಸ್ತುಗಳು ಕೂಡಾ ಧನಾತ್ಮಕ ಅಥವಾ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ (Negetive Energy). ಆದುದರಿಂದ ಮನೆಯಲ್ಲಿ ಇಟ್ಟಿರುವ ವಸ್ತುಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಮನೆಯ ಸಂತೋಷ ಮತ್ತು ಶಾಂತಿ ಹಾಳಾಗುತ್ತದೆ.  
 
ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ :
ಮನೆಯಲ್ಲಿ ಎಂದಿಗೂ ಮುಳ್ಳಿನ ಗಿಡಗಳನ್ನು ಇಡಬೇಡಿ. ಕಳ್ಳಿಯಂತಹ ಮುಳ್ಳು ಗಿಡಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತವೆ (Negetive energy). ಕುಟುಂಬ ಸದಸ್ಯರಲ್ಲಿ ವೈಮನಸ್ಸು ಮೂಡುತ್ತದೆ.  ಅದೇ ಸಮಯದಲ್ಲಿ, ಬೋನ್ಸಾಯ್ ಸಸ್ಯ ಕೂಡಾ  ಬೆಳವಣಿಗೆಯನ್ನು ತಡೆಯುತ್ತದೆ. ಮನೆಯಲ್ಲಿ ಈ ಸಸ್ಯಗಳ ಉಪಸ್ಥಿತಿಯು ಅನೇಕ ವಾಸ್ತು ದೋಷಗಳನ್ನು (Vastu Dosha) ಸೃಷ್ಟಿಸುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ವಧು ಆರಿಸುವ ವೇಳೆ ಮಾಡುವ ಈ ತಪ್ಪು ಜೀವನಪರ್ಯಂತ ಪಶ್ಚಾತಾಪ ಪಡುವಂತೆ ಮಾಡುತ್ತದೆ


ಮನೆಯ ಗೋಡೆಗಳ ಮೇಲೆ ಕಾಡು ಪ್ರಾಣಿಗಳ ಚಿತ್ರಗಳು, ಯುದ್ಧದ ಚಿತ್ರಗಳು, ನಿರ್ಜನ ಭೂದೃಶ್ಯ, ಒಣ ಮರಗಳ ಚಿತ್ರಗಳನ್ನು ಹಾಕಬಾರದು.  ಹೀಗೆ ಮಾಡುವುದರಿಂದ ಅನೇಕ ಸಮಸ್ಯೆಗಳು, ಒತ್ತಡಗಳು ಎದುರಾಗುತ್ತವೆ. ಮನೆಯಲ್ಲಿ ಯಾವಾಗಲೂ ವರ್ಣರಂಜಿತ ಮತ್ತು ಮನಸ್ಸಿಗೆ ಮುದ ನೀಡುವ ಚಿತ್ರಗಳನ್ನು ಇರಿಸಿ (Vastu Tips for home). 


ಮನೆಯಲ್ಲಿ ಜೇಡರ ಬಲೆ ಇರುವುದು ತುಂಬಾ ಅಶುಭ. ಇದರಿಂದ ಮನೆ ಮಂದಿಯಲ್ಲಿ  ಸೋಮಾರಿತನ ಮನೆ ಮಾಡುತ್ತದೆ. ಮಾತ್ರವಲ್ಲ ಮನೆಯವರು ಸದಾ  ಗೊಂದಲದಲ್ಲಿಯೇ ಇರುತ್ತಾರೆ. ಪ್ರಗತಿ ನಿಂತು ಹೋಗುತ್ತದೆ. ಯಾವುದೇ ವಿಚಾರದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವುತ್ತಾರೆ. ಒಟ್ಟಾರೆಯಾಗಿ, ಮನೆಯಲ್ಲಿ ಜೇಡರ ಬಲೆಯನ್ನು ಹೊಂದಿರುವುದು ಪರಸ್ಪರ ಸಂಬಂಧಗಳು ಮತ್ತು ಉದ್ಯೋಗ-ವ್ಯವಹಾರ ಎರಡೂ ವಿಚಾರದಲ್ಲಿ ಒಳ್ಳೆಯದಲ್ಲ.  


ಇದನ್ನೂ ಓದಿ : Rahu Gochar 2022: ಇಂದಿನಿಂದ ಬದಲಾಗಲಿದೆ ಈ 5 ರಾಶಿಯವರ ಭವಿಷ್ಯ, ಸುರಿಯಲಿದೆ ಹಣದ ಮಳೆ


ಮನೆಯಲ್ಲಿ ನಟರಾಜನ ಮೂರ್ತಿ (Nataraja Statue)ಇಡುವುದು ಕೂಡ ಒಳ್ಳೆಯದಲ್ಲ. ಇದು ಶಿವನ ತಾಂಡವದ ಚಿತ್ರವಾಗಿದ್ದು, ಮನೆಯಲ್ಲಿ ಅವರ ಉಪಸ್ಥಿತಿಯು ಸಂಬಂಧಗಳು ಮತ್ತು ಪರಸ್ಪರ ಪ್ರೀತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ (Vastu Tips). ಆದುದರಿಂದ ನಟರಾಜನ ಮೂರ್ತಿಯನ್ನು ಮನೆಯಲ್ಲಿ ಇಡಬೇಡಿ. 


ಒಡೆದ ಗಾಜು, ಒಡೆದ ಪಾತ್ರೆಗಳು, ಕೆಟ್ಟ ಎಲೆಕ್ಟ್ರಾನಿಕ್ ವಸ್ತುಗಳು, ಹರಿದ ಚಿತ್ರಗಳು, ಪೀಠೋಪಕರಣಗಳು ಮುಂತಾದವುಗಳನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಅವುಗಳು ನಕಾರಾತ್ಮಕ ಶಕ್ತಿಯನ್ನು ಉಂಟು ಮಾಡುತ್ತದೆ. ಮಾತ್ರವಲ್ಲ ಹಣದ ನಷ್ಟವನ್ನು ಕೂಡಾ ಉಂಟುಮಾಡುತ್ತದೆ.  


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.