Vastu Shastra:ಕೆಲವೊಮ್ಮೆ ನಮ್ಮ ಸತತ ಪ್ರಯತ್ನಗಳ ನಂತರವೂ ನಮಗೆ ಬೇಕಾದ ಕೆಲಸ ಸಿಗುವುದಿಲ್ಲ. ಆದ್ದರಿಂದ ನಾವು ಅದರ ಬಗ್ಗೆ ಯೋಚಿಸುವುದರಲ್ಲಿ ತೊಡಗುತ್ತೇವೆ ಮತ್ತು ಯಶಸ್ಸಿಗೆ ಅಡ್ಡಿಯಾಗಿರುವಅಂಶಗಳ ಬಗ್ಗೆ ಸಕಾರಾತ್ಮಕ ವಿಶ್ಲೇಷಣೆ ಮಾಡಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ವಾಸ್ತು ಶಾಸ್ತ್ರದಲ್ಲಿ ಕೆಲವು ಕ್ರಮಗಳನ್ನು ತಿಳಿಸಲಾಗಿದೆ, ಇವುಗಳನ್ನು ಅನುಸರಿಸುವ ಮೂಲಕ ಒಬ್ಬ ವ್ಯಕ್ತಿಯು ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗುವ ಸಾಧ್ಯತೆಗಳು ಹೆಚ್ಚಾಗಲಿವೆ. ನೀವೂ ಕೂಡ ಈ ವಾಸ್ತುಶಾಸ್ತ್ರದ ಸಲಹೆಗಳನ್ನು ಅನುಸರಿಸುವ ಮೂಲಕ  ಮೂಲಕ ಉದ್ಯೋಗ ಪಡೆಯುವಲ್ಲಿ ಎದುರಾಗುತ್ತಿರುವ ಅಡಚಣೆಗಳನ್ನು ದೂರಗೊಳಿಸಬಹುದು. ಆದರೆ, ಇವು ನಿಮಗೆ ನೌಕರಿಯ ಗ್ಯಾರಂಟಿ ಮಾತ್ರ ನೀಡುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.


COMMERCIAL BREAK
SCROLL TO CONTINUE READING

ವಾಸ್ತುಶಾಸ್ತ್ರದ ಉಪಾಯಗಳು (Vastu Shastra Remedies)
>>ಯಾವುದೇ ಒಂದು ನೌಕರಿಗಾಗಿ ಸಂದರ್ಶನಕ್ಕೆ (Vastu For Interview) ಹೋಗುವ ಮೊದಲು ಕೆಂಪು ಬಣ್ಣದ ಬಟ್ಟೆ ಧರಿಸಿ ಹೋಗಿ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ಕೆಂಪು ಬಣ್ಣದ ಕರವಸ್ತ್ರವನ್ನು ನೀವು ನಿಮ್ಮ ಜೆಬಿನಲ್ಲಿಡಿ. ಏಕೆಂದರೆ ವಾಸ್ತುಶಾಸ್ತ್ರದಲ್ಲಿ ಕೆಂಪುಬಣ್ಣವನ್ನು ಬಡ್ತಿ ಹಾಗೂ ನೌಕರಿ ದೊರಕಿಸುವಲ್ಲಿ ಸಹಕಾರಿ ಎಂದು ಹೇಳಲಾಗಿದೆ.


>>ವಿದ್ಯಾರ್ಥಿಗಳು ಅಥವಾ ನೌಕರಿ ಆಸಕ್ತರು ಹಳದಿ, ಕೆಂಪು ಹಾಗೂ ಬಂಗಾರದ ಬಣ್ಣದ ಅಧಿಕ ಉಪಯೋಗಿಸಬೇಕು. ಇವುಗಳ ಪ್ರಯೋಗ ನೌಕರಿ ಸಿಗುವ ಮತ್ತು ಅದರಲ್ಲಿ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಇವರು ತಮ್ಮ ಬೆಡ್ ರೂಂ ನಲ್ಲಿ ಹಳದಿ ಬಣ್ಣದ ಪ್ರಯೋಗ ಮಾಡಬೇಕು.


>>ಮನೆಯಿಂದ ಹೊರಹೋಗುವ ಮುನ್ನ ಎಡಗಾಲಿನ ಹೆಜ್ಜೆಯನ್ನು ಮೊದಲು ಮನೆಯ ಹೊರಗಿಡಿ. ಈ ವಾಸ್ತು ಸಲಹೆ ಏಳ್ಗೆಯಲ್ಲಿ ಸಹಾಯಕಾರಿಯಾಗಿದೆ.


>>ಸಂದರ್ಶನ ಅಥವಾ ಪರೀಕ್ಷೆ ನೀಡಲು ಹೋಗುವ ಮೊದಲು ವಿಘ್ನ ವಿನಾಶಕ ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿ. ನಂಬಿಕೆಗಳ ಪ್ರಕಾರ ಗಣೇಶನಿಗೆ ಪೂಜೆ ಸಲ್ಲಿಸುವುದರಿಂದ ಎಲ್ಲಾ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ. ನೀವೂ ಮನೆಯಿಂದ ಹೊರಬಿದ್ದು, ಪೂರ್ಣಗೊಳಿಸಬೇಕಾಗಿರುವ ಕೆಲಸದಲ್ಲಿ ಗಣೇಶ ನಿಮಗೆ ಸಹಾಯ ಮಾಡುತ್ತಾನೆ ಎನ್ನಲಾಗುತ್ತದೆ. 


>>ಒಂದು ವೇಳೆ ನಿಮಗೆ ನೌಕರಿಯ ಅವಕಾಶಗಳು ಕಡಿಮೆ ಅನ್ನಿಸುತ್ತಿದ್ದರೆ, ಮನೆಯ (Vastu Tips For Home) ಉತ್ತರ ದಿಕ್ಕಿನಲ್ಲಿರುವ ಗೋಡೆಯ ಮೇಲೆ ದೊಡ್ಡ ಗಾತ್ರದ ಕನ್ನಡಿಯನ್ನು ತೂಗು ಹಾಕಿ. ಆದರೆ, ಅದರಲ್ಲಿ ನಿಮ್ಮ ಸಂಪೂರ್ಣ ಶರೀರ ಕಾಣಿಸಬೇಕು ಎಂಬುದನ್ನು ನೆನಪಿಡಿ. ಹೀಗೆ ಮಾಡುವುದರಿಂದ ನೌಕರಿ ಸಿಗುವ ಅಥವಾ ನೌಕರಿಯ ಸಾಧ್ಯತೆಗಳು ಹೆಚ್ಚಾಗುತ್ತವೆ.


ಇದನ್ನೂ ಓದಿ- Vastu Tips: ನಿಮ್ಮ ಮನೆಯಲ್ಲೂ ಈ ವಸ್ತು ಇದ್ದರೆ ಆಗಲಿದೆ ಭಾರೀ ಧನ ಪ್ರಾಪ್ತಿ


>>ಒಂದು ವೇಳೆ ನೀವು ಫೋನ್ ಇನ್ ಸಂದರ್ಶನ ನೀಡುತ್ತಿದ್ದಾರೆ, ಸಂದರ್ಶನ ನೀಡುವ ಸಮಯದಲ್ಲಿ ನೀವು ನಿಮ್ಮ ಮುಖವನ್ನು ಉತ್ತರ ಅಥವಾ ಪೂರ್ವದಿಕ್ಕಿನಲ್ಲಿಡಬೇಕು ಹಾಗೂ ನಿಮ್ಮ ಬೆನ್ನ ಹಿಂದೆ ಗೋಡೆ ಇರಬೇಕು. ವಾಸ್ತುಶಾಸ್ತ್ರದಲ್ಲಿ ಇದನ್ನು ಶುಭಕರ ಹಾಗೂ ಉತ್ತಮ ಎನ್ನಲಾಗಿದೆ.


ಇದನ್ನೂ ಓದಿ- Vastu Tips : ದಾರಿಯಲ್ಲಿ ಹಣ ಸಿಕ್ಕಿದರೆ ಶುಭ ಫಲಾನಾ ? ಅಶುಭಾನಾ ?


>>ನಿಮಗೆ ಮನಸಿಗೆ ತಕ್ಕಂತೆ ನೌಕರಿಯನ್ನು (Vastu Tips, Vastu Tips For Good Job) ಪಡೆಯಲು ನೀವು ರುದ್ರಾಕ್ಷ ಮಾಲೆಯನ್ನು ಧರಿಸಬೇಕು. ಯಾರು ಯಾವ ರೀತಿಯ ರುದ್ರಾಕ್ಷದ ಮಾಲೆ ಧರಿಸಬೇಕು ಎಂಬುದನ್ನು ತಿಳಿಯಲು ವಾಸ್ತುಶಾಸ್ತ್ರಜ್ಯರ ಸಲಹೆಯನ್ನು ಪಡೆದರೆ ಉಚಿತ.


ಇದನ್ನೂ ಓದಿ- Vastu Tips For money: ಹಣಕಾಸಿನ ತೊಂದರೆಯೇ? ಹಾಗಾದ್ರೆ ಈ ಮೂರು ವಸ್ತುಗಳನ್ನ ಮನೆಯಲ್ಲಿಡಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.