ನವದೆಹಲಿ : ದಿಕ್ಕುಗಳ ಕುರಿತಾದ ವಿಜ್ಞಾನವನ್ನು ಸಾಮಾನ್ಯವಾಗಿ ವಾಸ್ತು (Vastu) ಎನ್ನಲಾಗುತ್ತದೆ. ಒಳ್ಳೆಯ ದಿಕ್ಕಿನಲ್ಲಿ ಒಳ್ಳೆಯ ಕೆಲಸ ಮಾಡಿದರೆ ವ್ಯಕ್ತಿಯ ಬದುಕಿನ ದಿಕ್ಕೆ ಬದಲಾಗುತ್ತದೆ.  ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡಿದರೆ, ದುರ್ದೆಸೆ ಉಂಟಾಗುತ್ತದೆ. ವಾಸ್ತುಶಾಸ್ತ್ರದಲ್ಲಿ (Vastu shastra) ಕಿಚನ್ ಗೆ ವಿಶೇಷ ಸ್ಥಾನ  ಇದೆ. ಕಿಚನ್ ನಲ್ಲಿ ನೀವು ಮಾಡುವ ತಪ್ಪು ಮನೆಯಲ್ಲಿ ದರಿದ್ರ ಉಂಟುಮಾಡಬಹುದು.  


COMMERCIAL BREAK
SCROLL TO CONTINUE READING

ಕಿಚನ್ ನಲ್ಲಿ ಈ ತಪ್ಪುಗಳನ್ನು ಮಾಡಬೇಡಿ..!
ವಾಸ್ತು (Vastu) ಪ್ರಕಾರ ಶುದ್ದ ಮತ್ತು ಪವಿತ್ರ  ಇರುವ ಜಾಗದಲ್ಲಿ ದೇವರು ವಾಸಮಾಡುತ್ತಾನೆ.  ಕಿಚನ್ ನಲ್ಲಿ (Kitchen)  ಎಂಜಲು ಪಾತ್ರೆ ಬಿದ್ದಿದ್ದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆಯಂತೆ. ಹಾಗಾಗಿ, ಎಂಜಲು ಪಾತ್ರೆ ಕಿಚನ್ ನಲ್ಲಿ ಇರಕೂಡದು. 


ಇದನ್ನೂ ಓದಿ : Chandra Grahan 2021 : ಬುದ್ದ ಪೂರ್ಣಿಮದ ದಿನವೇ ವರ್ಷದ ಮೊದಲ ಚಂದ್ರಗ್ರಹಣ


ವಾಸ್ತು ಪ್ರಕಾರ ಕಿಚನ್ ನಲ್ಲೇ ಅತಿ ಹೆಚ್ಚು ವಾಸ್ತು ದೋಷ  (Vastu Dosha) ಉಂಟಾಗುತ್ತದೆ. ಕಿಚನ್ ನಲ್ಲೇ  ಜಲ, ವಾಯು, ಅಗ್ನಿ ಈ ಮೂರೂ ತತ್ವಗಳಿರುತ್ತವೆ.  ಕೆಲವರು ಕಿಚನ್ ನನ್ನು ಎಷ್ಟೊಂದು ಪವಿತ್ರ  ಎಂದು ಭಾವಿಸುತ್ತಾರೆಂದರೆ, ಕಿಚನ್ ನಲ್ಲೇ ಮಂದಿರ ಕೂಡಾ ಇಟ್ಟು ಬಿಡುತ್ತಾರೆ. ಆದರೆ ಹಾಗೆ ಮಾಡುವುದು ತಪ್ಪು.


ಕೆಲವರು ರಾತ್ರಿ ಎಂಜಲು ಪಾತ್ರೆ ಬೆಳಗ್ಗೆ ತೊಳೆಯುತ್ತಾರೆ. ಹೀಗೆ ಮಾಡುವುದು ದಾರಿದ್ರ್ಯಕ್ಕೆ ಕಾರಣವಾಗುತ್ತದೆ.  ವಾಸ್ತು ಶಾಸ್ತ್ರ (Vastu shastra) ಪ್ರಕಾರ ಯಾವ  ವ್ಯಕ್ತಿ ತನ್ನ ಎಂಜಲು ಪಾತ್ರೆ ತೊಳೆಯುವುದಿಲ್ಲವೋ, ಆತನಿಗೆ ಸಫಲತೆ ಪಡೆಯುವಲ್ಲಿ ಸಾಕಷ್ಟು ಅಡಚಣೆಗಳು ಉಂಟಾಗುತ್ತವೆ. ಕಿಚನ್ ಯಾವತ್ತಿಗೂ ಸ್ವಚ್ಛವಾಗಿರಬೇಕು ಎಂದು ಹೇಳುತ್ತದೆ ವಾಸ್ತು.
ಕಿಚನ್ ನಲ್ಲಿ ಎಂಜಲು ಪಾತ್ರೆ ಇಟ್ಟಿದ್ದರೆ ವಾಸ್ತು ದೋಷ  ಉಂಟಾಗುತ್ತದೆ. ಈ ವಾಸ್ತು ದೋಷ  ಆಗ್ನೇಯ ದಿಕ್ಕಿನಲ್ಲಿ ಉಂಟಾಗುತ್ತದೆ. ಮನೆಯಲ್ಲಿ ಸಂಪಾದನೆ ಮಾಡುವ ವ್ಯಕ್ತಿ ಮೇಲೆ ಇದರ ಪ್ರಭಾವ ಬೀರುತ್ತದೆ. ಯಾವ ಮನೆಯಲ್ಲಿ ಕಿಚನ್ ಕ್ಲೀನ್ (Kitchen clean) ಆಗಿರುತ್ತದೆಯೇ ಅಲ್ಲಿ ಲಕ್ಷ್ಮಿ (godess Lakshmi) ನೆಲೆಸುತ್ತಾಳಂತೆ.  ಯಾವ ಮನೆಯಲ್ಲಿ ಲಟ್ಟಣಿಗೆ ಮತ್ತು ಮಣೆಯನ್ನು  ದಿನಾ ತೊಳೆಯುತ್ತಾರೋ ಆ ಮನೆಯಲ್ಲಿ ವಾಸ್ತು ದೋಷ ನಿವಾರಣೆಯಾಗುತ್ತದೆಯಂತೆ. 


ಇದನ್ನೂ ಓದಿ : ನಿಮ್ಮ ಕೈಯಲ್ಲೂ ಈ ರೇಖೆಗಳಿದ್ದರೆ ಅದೃಷ್ಟವೂ ಅದೃಷ್ಟ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.