ನವದೆಹಲಿ : ಪ್ರತಿಯೊಬ್ಬರ ಜೀನವದಲ್ಲೂ ವಾಸ್ತುವಿಗೆ (Vastu) ಸಾಕಷ್ಟು ಮಹತ್ವವಿದೆ. ಇದು ವ್ಯಕ್ತಿಯ ಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ, ಒಬ್ಬ ವ್ಯಕ್ತಿಯು ಮನೆಯನ್ನು ನಿರ್ಮಿಸದಿದ್ದರೆ, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತು ಸರಿಯಿಲ್ಲದೆ ಹೋದರೆ ನಕಾರಾತ್ಮಕತೆ (Negetive Energy) ಮನೆಯಲ್ಲಿ ನೆಲೆಯಾಗುತ್ತದೆ. ಒಂದು ವೇಳೆ  ಮನೆ ವಾಸ್ತು ಪ್ರಕಾರ ಇಲ್ಲ ಎಂದಾದರೆ ಕೆಲ ವಸ್ತುಗಳನ್ನು ಮನೆಯಲ್ಲಿಟ್ಟರೆ ದೋಷ ನಿವಾರಣೆಯಾಗುತ್ತದೆ ಎಂದು ಹೇಳುತ್ತದೆ ವಾಸ್ತು ಶಾಸ್ತ್ರ.


COMMERCIAL BREAK
SCROLL TO CONTINUE READING

ವಾಸ್ತುವಿನಲ್ಲಿ (Vastu) ಅಕ್ವೇರಿಯಂಗೆ ಬಹಳ ಪ್ರಾಮುಖ್ಯತೆಯಿದೆ. ಮೀನಿನ ಅಕ್ವೇರಿಯಂ ಅನ್ನು ಮನೆಯಲ್ಲಿ ಇಡುವುದರಿಂದ, ಒಂದೆಡೆ ಮನೆ ಬಹಳ ಸುಂದರವಾಗಿ ಕಾಣುತ್ತದೆ. ಮತ್ತೊಂದೆಡೆ, ಇದು ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿರುತ್ತದೆ. ಆದರೆ, ನೆನಪಿರಲಿ, ಅಕ್ವೇರಿಯಂ ಅನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದು ಕೂಡಾ ಬಹಳ ಮುಖ್ಯ. ಅಕ್ವೇರಿಯಂ (Aquarium)ಅನ್ನು ಸರಿಯಾದ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿ ಇಟ್ಟುಕೊಳ್ಳುವುದರಿಂದ, ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. 


ಇದನ್ನೂ ಓದಿ : ಶುಕ್ರವಾರದ ವೃತ ಯಾರು ಮಾಡಬೇಕು ? ತಿಳಿದಿರಲಿ ವೃತದ ಸಂಪೂರ್ಣ ಮಾಹಿತಿ


-ವಾಸ್ತು ಪ್ರಕಾರ,  ಅಕ್ವೇರಿಯಂ ಅನ್ನು ಮನೆಯಲ್ಲಿ ಇಡುವುದರಿಂದ ಪಾಸಿಟಿವ್ ಎನರ್ಜಿ (Positive energy) ಮನೆಯಲ್ಲಿ ನೆಲೆಯಾಗುತ್ತದೆ. 


- ಅಕ್ವೇರಿಯಂ ಒಳಗೆ ಮೀನು (Fish)ವೇಗವಾಗಿ ಸಂಚರಿಸುತ್ತಿದ್ದರೆ, ಮನೆಯಲ್ಲಿ ಹೆಚ್ಚು ಪಾಸಿಟಿವ್ ಎನರ್ಜಿ ನೆಲೆಯಾಗುತ್ತದೆ. 


– ಅಕ್ವೇರಿಯಂ ಒಳಗೆ ಹರಿಯುವ ನೀರಿನ (water) ಶಬ್ದದಿಂದಲೂ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ. ಅಕ್ವೇರಿಯಂನ ನೀರಿನ ಹರಿವು ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ : ಈ ನಾಲ್ಕು ಚಿಹ್ನೆ ಕೈಯಲ್ಲಿದ್ದರೆ ಹಣದ ಕೊರತೆಯಾಗುವುದೇ ಇಲ್ಲ; ದೇವರ ಕೃಪೆ ಸದಾ ಇವರ ಮೇಲಿರುತ್ತದೆ


-ಅಕ್ವೇರಿಯಂನಲ್ಲಿರುವ ಮೀನುಗಳನ್ನು ನೋಡುತ್ತಿದ್ದರೆ, ಒತ್ತಡ, ಆತಂಕ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಕೂಡಾ ನಿವಾರಣೆಯಾಗುತ್ತದೆ.  ಮೀನುಗಳ ಸೌಂದರ್ಯವು ಮೆದುಳಿನ ನರಗಳನ್ನು ಶಾಂತಗೊಳಿಸುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.