Vastu Tips: ಮನೆ, ಜಮೀನು ಖರೀದಿಸುವ ಮುನ್ನ ತಪ್ಪದೇ ಈ ನಿಯಮ ಅನುಸರಿಸಿ
Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂದೆ ಮುಳ್ಳಿನ ಮರ, ಕಂಬ ಅಥವಾ ದೇವಸ್ಥಾನ ಇದ್ದರೆ ಅಶುಭ. ಇದು ವಾಸ್ತು ದೋಷಗಳಿಗೆ ಕಾರಣವಾಗುತ್ತದೆ. ಇದರಿಂದ ಮನೆಯ ಜನರ ಪ್ರಗತಿ ನಿಲ್ಲುತ್ತದೆ ಎಂದು ಹೇಳಲಾಗುತ್ತದೆ.
Vastu Tips: ಮನೆಯ ವಾಸ್ತು ದೋಷಗಳನ್ನು ಹೋಗಲಾಡಿಸಲು ಹಲವು ಪರಿಹಾರಗಳನ್ನು ನೀಡಲಾಗಿದೆ. ವಾಸ್ತು ಶಾಸ್ತ್ರದ ಪರಿಣಿತರ ಪ್ರಕಾರ ಮನೆ ಕೊಳ್ಳುವಾಗ ಅಥವಾ ಕಟ್ಟುವಾಗ ವಾಸ್ತು ನಿಯಮಗಳನ್ನು ಪಾಲಿಸಬೇಕು. ಇದನ್ನು ನಿರ್ಲಕ್ಷಿಸಿದರೆ ವಾಸ್ತು ದೋಷದ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ನೀವು ಸಹ ಹೊಸ ವರ್ಷದಲ್ಲಿ ಮನೆ ನಿರ್ಮಿಸಲು ಅಥವಾ ಖರೀದಿಸಲು ಯೋಚಿಸುತ್ತಿದ್ದರೆ, ಈ ವಾಸ್ತು ನಿಯಮಗಳು ನಿಮಗೆ ಉಪಯುಕ್ತವಾಗಬಹುದು.
ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ದಕ್ಷಿಣಾಭಿಮುಖವಾಗಿರುವ ಮನೆಯನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನೆ ಕಟ್ಟುವಾಗ ಅಥವಾ ಖರೀದಿಸುವಾಗ ಈ ವಾಸ್ತು ನಿಯಮದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಮನೆಯು ದಕ್ಷಿಣಾಭಿಮುಖವಾಗಿದ್ದರೆ, ವಾಸ್ತು ದೋಷಗಳನ್ನು ಶಮನಗೊಳಿಸಲು ವಾಸ್ತು ತಜ್ಞರನ್ನು ಸಂಪರ್ಕಿಸಿ.
ಮನೆಯ ಮುಖ್ಯ ದ್ವಾರವು ಉತ್ತರ, ಈಶಾನ್ಯ ಅಥವಾ ಪಶ್ಚಿಮದ ಕಡೆಗೆ ಇರುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ದಕ್ಷಿಣ, ನೈಋತ್ಯ, ವಾಯುವ್ಯ ಅಥವಾ ಆಗ್ನೇಯದಲ್ಲಿ ಮುಖ್ಯ ದ್ವಾರವನ್ನು ಹೊಂದಿರುವುದು ಅಶುಭ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Kitchen Vastu Tips: ಅಡುಗೆಮನೆಯ ಈ ದಿಕ್ಕಿನಲ್ಲಿ ಸ್ಟೌವ್ ಇರಿಸುವುದರಿಂದ ಹೆಚ್ಚಾಗುತ್ತೆ ಸಂಪತ್ತು; ಎಂದಿಗೂ ಕಾಡಲ್ಲ ಬಡತನ
ಸೂರ್ಯನ ಬೆಳಕು ಮತ್ತು ಶುದ್ಧ ಗಾಳಿ ಇಲ್ಲದ ಮನೆಗಳನ್ನು ಖರೀದಿಸುವುದನ್ನು ತಪ್ಪಿಸಿ. ವಾಸ್ತು ಪ್ರಕಾರ, ಅಂತಹ ಮನೆಗಳಲ್ಲಿ ನಕಾರಾತ್ಮಕ ಶಕ್ತಿ (Negative Energy) ಇರುತ್ತದೆ. ಇದರ ಹೊರತಾಗಿ ಹೊಸ ಜಮೀನಿನಲ್ಲಿ ಮುಳ್ಳಿನ ಮರಗಳು, ಹೊಂಡಗಳು ಇರಬಾರದು. ಏಕೆಂದರೆ ಅಂತಹ ಭೂಮಿಯಲ್ಲಿ ಮನೆ ಕಟ್ಟುವುದು ಶುಭವೆಂದು ಪರಿಗಣಿಸುವುದಿಲ್ಲ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂಭಾಗದಲ್ಲಿ ಮುಳ್ಳಿನ ಮರ, ಕಂಬ ಅಥವಾ ದೇವಸ್ಥಾನ ಇದ್ದರೆ ಅಶುಭ. ಇದು ವಾಸ್ತು ದೋಷಗಳಿಗೆ ಕಾರಣವಾಗುತ್ತದೆ. ಇದರಿಂದ ಮನೆಯ ಜನರ ಪ್ರಗತಿ ನಿಲ್ಲುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ- Vastu Tips: ಮನೆಯ ಉತ್ತರ ದಿಕ್ಕಿನಲ್ಲಿ ಈ 3 ವಸ್ತುಗಳಿದ್ದರೆ, ದೇವಿ ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ
ಮನೆಯ ಪಕ್ಕದಲ್ಲಿ ನೈಋತ್ಯ ದಿಕ್ಕಿನಲ್ಲಿ ಬಾವಿ ಅಥವಾ ಕೊಳವಿದ್ದರೂ ಅದನ್ನೂ ಸಹ ಅಶುಭ ಎಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿ ಮನೆಯ ಯಾವುದೇ ಮೂಲೆಯನ್ನು ಕತ್ತರಿಸಬಾರದು. ಇದು ವಾಸ್ತು ದೋಷಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.