Vastu Tips: ಮನೆ ಮುಂದೆ ಬೇವಿನ ಮರ ಇರುವುದು ಶುಭವೋ? ಅಶುಭವೋ?
Vastu Tips: ವಾಸ್ತು ಶಾಸ್ತ್ರದಲ್ಲಿ ಕೇವಲ ಮನೆಯೊಳಗೆ ಯಾವ ವಸ್ತು ಎಲ್ಲಿರಬೇಕು ಎಂಬುದರ ಬಗ್ಗೆ ಮಾತ್ರವಲ್ಲದೆ, ಮನೆ ಮುಂದೆ ಯಾವ ಗಿಡಗಳಿದ್ದರೆ ಶುಭ, ಯಾವ ಗಿಡಗಳು ಇರಬಾರದು ಎಂಬುದನ್ನೂ ಸಹ ಉಲ್ಲೇಖಿಸಲಾಗಿದೆ.
Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಂದೆ ಕೆಲವು ಗಿಡ ಮರಗಳಿರುವುದನ್ನು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ಇಂತಹ ಗಿಡ-ಮರಗಳು ಮನೆಯಲ್ಲಿ ಸಂತೋಷ-ಸಮೃದ್ಧಿಯನ್ನು ತರುತ್ತವೆ ಎಂತಲೂ ಹೇಳಲಾಗುತ್ತದೆ. ಹಾಗಿದ್ದರೆ, ಮನೆಯ ಮುಂಭಾಗದಲ್ಲಿ ಬೇವಿನ ಮರ ಇದ್ದರೆ ಶುಭವೋ ಅಥವಾ ಅಶುಭವೋ ಎಂದು ತಿಳಿಯೋಣ...
ಮನೆ ಮುಂದೆ ಬೇವಿನ ಮರ ಇರುವುದು ಶುಭವೋ? ಅಶುಭವೋ?
ಧಾರ್ಮಿಕ ನಂಬಿಕೆಗಳ ಪ್ರಕಾರ, ಆರೋಗ್ಯದ ಗಣಿ ಎಂದು ಬಣ್ಣಿಸಲ್ಪಡುವ ಬೇವಿನ ಮರದಲ್ಲಿ ರಾಮನ ಭಂಟ ಹನುಮಂತ ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ. ಹಾಗಾಗಿ, ಮನೆಯ ಮುಂದೆ ಬೇವಿನ ಮರ ಇರುವುದನ್ನು ಅತ್ಯಂತ ಶುಭ ಎಂದು ನಂಬಲಾಗಿದೆ.
ಇದನ್ನೂ ಓದಿ- Vastu Tips: ಮನೆಯ ನಾಲ್ಕು ಜಾಗಗಳಲ್ಲಿ ಈ ಬಿಳಿ ವಸ್ತು ಇಟ್ಟರೆ ಎಂದಿಗೂ ಎದುರಾಗಲ್ಲ ಹಣಕಾಸಿನ ಸಮಸ್ಯೆ
ಮನೆಯ ಯಾವ ದಿಕ್ಕಿನಲ್ಲಿ ಬೇವಿನ ಮರವಿದ್ದರೆ ಶುಭ:
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ಬೇವಿನ ಸಸಿ ನೆಡುವುದನ್ನು ಅತ್ಯಂತ ಮಂಗಳಕರ. ಬೇವು ಶನಿ ಮತ್ತು ಕೇತುವಿಗೆ ಸಂಬಂಧಿಸಿದೆ. ಈ ದಿಕ್ಕಿನಲ್ಲಿ ಬೇವಿನ ಸಸ್ಯ ನೆಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ. ಜಾತಕದಲ್ಲಿ ಅಶುಭ ಸ್ಥಾನದಲ್ಲಿರುವ ಕೇತುವು ಸಹ ಶುಭ ಪರಿಣಾಮಗಳನ್ನು ಉಂಟು ಮಾಡುತ್ತಾನೆ ಎನ್ನಲಾಗುತ್ತದೆ.
ಮನೆಯ ಮುಂದೆ ಬೇವಿನ ಮರ ಇದ್ದರೆ ಏನು ಪ್ರಯೋಜನ?
ನಕಾರಾತ್ಮಕ ಶಕ್ತಿ ಪ್ರವೇಶಿಸುವುದಿಲ್ಲ:
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಂದೆ ಬೇವಿನ ಮರ ಇದ್ದರೆ ಅಂತಹ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಮಾತ್ರವಲ್ಲ, ಇಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶಿಸುವುದಿಲ್ಲ ಎಂದು ಹೇಳಲಾಗುತ್ತದೆ.
ದುರಾದೃಷ್ಟವನ್ನೂ ಬದಲಾಯಿಸುತ್ತದೆ:
ಶಾಸ್ತ್ರಗಳ ಪ್ರಕಾರ, ಮನೆಯ ಮುಂಭಾಗದಲ್ಲಿರುವ ಬೇವಿನ ಮರವು ವ್ಯಕ್ತಿಯ ದುರಾದೃಷ್ಟವನ್ನೂ ಅದೃಷ್ಟವಾಗಿ ಬದಲಾಯಿಸುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ- ವಾಸ್ತು ಪರಿಹಾರ : ಈ ದಿಕ್ಕಿನಲ್ಲಿ ಗಡಿಯಾರ ಇಟ್ಟರೆ ಗೌರವ, ಕೀರ್ತಿ ಜೊತೆಗೆ ಸಂಪತ್ತು ಹೆಚ್ಚಾಗುತ್ತದೆ!
ಕೇತು ದೋಷ ನಿವಾರಣೆ:
ಸ್ನಾನ ಮಾಡುವ ನೀರಿನಲ್ಲಿ ಬೇವಿನ ಎಲೆಗಳನ್ನು ಹಾಕಿ ಸ್ನಾನ ಮಾಡುವುದರಿಂದ ಕೇತು ದೋಷ ನಿವಾರಣೆಯಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.