ವಾಸ್ತು ಸಲಹೆಗಳು:  ಮನೆಯ ಪ್ರತಿಯೊಂದು ಭಾಗವನ್ನು ವಾಸ್ತು ಶಾಸ್ತ್ರದ ಪ್ರಕಾರ ಮಾಡಿದರೆ, ಮನೆಯಲ್ಲಿ ಧನಾತ್ಮಕ ಶಕ್ತಿ ಇರುತ್ತದೆ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ವ್ಯಕ್ತಿಯು ಬಹಳಷ್ಟು ಸಂಪತ್ತನ್ನು ಗಳಿಸುತ್ತಾನೆ. ಆದರೆ ಮನೆಯ ವಾಸ್ತುವಿನಲ್ಲಿ ಯಾವುದೇ ದೋಷ ಉಂಟಾದರೆ, ಶ್ರೀಮಂತ ವ್ಯಕ್ತಿಯೂ ದರಿದ್ರನಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮನೆಯ ವಾತಾವರಣವು ನಕಾರಾತ್ಮಕವಾಗುತ್ತದೆ, ಜಗಳಗಳು ಪ್ರಾರಂಭವಾಗುತ್ತವೆ. ಇದು ತಾಯಿ ಲಕ್ಷ್ಮಿ ಕೋಪಕ್ಕೂ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ ಮನೆಯಲ್ಲಿ ಸುಖ-ಶಾಂತಿ-ಸಮೃದ್ಧಿಗಾಗಿ ಕೆಲವು ವಾಸ್ತು ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯ. ಇಂದು ನಾವು ಅಂತಹ ಕೆಲವು ವಾಸ್ತು ಪರಿಹಾರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ತಿಜೋರಿ ಯಾವಾಗಲೂ ಹಣದಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಧನವೃದ್ಧಿಗಾಗಿ ತಿಜೋರಿ ಮುಖವು ಸರಿಯಾದ ದಿಕ್ಕಿನಲ್ಲಿರಬೇಕು:
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ತಿಜೋರಿಯ ಮುಖ ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿಗೆ ಇರಬೇಕು. ಇದು ಕುಬೇರನ ದಿಕ್ಕು ಮತ್ತು ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ಈ ದಿಕ್ಕಿಗೆ ಎದುರಾಗಿ ಇರಿಸಲಾಗಿರುವ ತಿಜೋರಿ ಅಥವಾ ಹಣದ ಪೆಟ್ಟಿಗೆಯು ಯಾವಾಗಲೂ ಸಂಪತ್ತು, ಚಿನ್ನ ಮತ್ತು ಬೆಳ್ಳಿಯಿಂದ ತುಂಬಿರುತ್ತದೆ ಎಂಬ ನಂಬಿಕೆ ಇದೆ.


ಇದನ್ನೂ ಓದಿ- ಮನೆಯ ಈ ದಿಕ್ಕಿನಲ್ಲಿ ಈ ವಸ್ತುವನ್ನು ಇಡುವುದರಿಂದ ಸದಾ ತುಂಬಿರುತ್ತೆ ಸಂಪತ್ತು


ಮತ್ತೊಂದೆಡೆ, ಪಶ್ಚಿಮ ಅಥವಾ ದಕ್ಷಿಣ ದಿಕ್ಕಿಗೆ ಮುಖಮಾಡಿ ಇಟ್ಟಿರುವ ಸೇಫ್ ಸಾಕರ್ ಅಥವಾ ತಿಜೋರಿಯು ಹಣದ ನಷ್ಟವನ್ನು ಉಂಟುಮಾಡುತ್ತದೆ. ಮನುಷ್ಯ ಎಷ್ಟೇ ಹಣ ಸಂಪಾದಿಸಿದರೂ ಅವನ ಹಣ ಮನೆಯಲ್ಲಿ ಉಳಿಯುವುದಿಲ್ಲ ಮತ್ತು ವ್ಯರ್ಥವಾಗುತ್ತದೆ. ವ್ಯಕ್ತಿ ಕೂಡ ಸಾಲದಲ್ಲಿ ಮುಳುಗಬಹುದು ಎಂದು ಹೇಳಲಾಗುತ್ತದೆ.


ಈ ತಪ್ಪುಗಳಾಗದಂತೆ ನಿಗಾವಹಿಸಿ:
ನೀವು ಯಾವಾಗಲೂ ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಇಚ್ಚಿಸುವುದೇ ಆದರೆ ತಿಜೋರಿ ಮುಖವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರ ಜೊತೆಗೆ, ಕೆಲವು ತಪ್ಪುಗಳಾಗದಂತೆ ಎಚ್ಚರವಹಿಸಿ...
>> ಅಕಸ್ಮಾತ್ ಯಾವತ್ತೂ ಪೊರಕೆಯನ್ನು ಸೇಫ್ ಬಳಿ ಇಟ್ಟುಕೊಳ್ಳಬೇಡಿ. ಹಾಗೆ ಮಾಡುವುದರಿಂದ ದೊಡ್ಡ ಆರ್ಥಿಕ ನಷ್ಟವಾಗುತ್ತದೆ. 


>> ಸೂರ್ಯಾಸ್ತದ ಸಮಯದಲ್ಲಿ ಮತ್ತು ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸಬೇಡಿ. ಇದು ಲಕ್ಷ್ಮಿಯ ಮನೆಗೆ ಬರುವ ಸಮಯ. ಹಗಲಿನಲ್ಲಿ ಯಾವಾಗಲೂ ಶುಚಿಗೊಳಿಸುವ ಕೆಲಸವನ್ನು ಮಾಡಿ. 


>> ಈಶಾನ್ಯದಲ್ಲಿ ಕಸವನ್ನು ಎಂದಿಗೂ ಇಡಬೇಡಿ. ಇದು ಅತ್ಯಂತ ಮಂಗಳಕರವಾದ ಕೋನವೆಂದು ಪರಿಗಣಿಸಲಾಗಿದೆ ಮತ್ತು ಈ ದಿಕ್ಕಿನಲ್ಲಿ ಸಂಗ್ರಹವಾಗುವ ಕೊಳಕು ಮನೆಯಲ್ಲಿ ಬಡತನವನ್ನು ತರುತ್ತದೆ ಎನ್ನಲಾಗುವುದು.


ಇದನ್ನೂ ಓದಿ- Surya Gochar: ಮುಂದಿನ 30 ದಿನಗಳ ಕಾಲ ಸೂರ್ಯನಂತೆ ಹೊಳೆಯುತ್ತೆ ಈ ರಾಶಿಯವರ ಅದೃಷ್ಟ


>> ಮನೆಯ ಮುಖ್ಯ ದ್ವಾರದ ಮೇಲೆ ಎಂದಿಗೂ ಕಸವನ್ನು ಇಡಬೇಡಿ, ಆದರೆ ಅದನ್ನು ಯಾವಾಗಲೂ ಸ್ವಚ್ಛವಾಗಿಡಿ. ಸಾಧ್ಯವಾದರೆ, ಪ್ರತಿದಿನ ಸಂಜೆ ಮುಖ್ಯ ದ್ವಾರದಲ್ಲಿ ತುಪ್ಪದ ದೀಪವನ್ನು ಬೆಳಗಿಸಿ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.