Money counting tips : ಪ್ರತಿಯೊಂದು ಕೆಲಸವನ್ನು ಮಾಡುವ ಸರಿಯಾದ ಮಾರ್ಗ- ವಿಧಾನದ ಬಗ್ಗೆ ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಕೆಲವು ಕೆಲಸಗಳು ಬಹಳ ಮುಖ್ಯವಾದವು ಮತ್ತು ಅವುಗಳನ್ನು ಮಾಡುವಲ್ಲಿ ಮಾಡಿದ ತಪ್ಪುಗಳು ಲಕ್ಷ್ಮಿ ದೇವಿಯನ್ನು ಕೋಪಗೊಳ್ಳುವಂತೆ ಮಾಡುತ್ತದೆ. ಇದರಿಂದ ಜೀವನದಲ್ಲಿ ಹಣದ ನಷ್ಟ ಮತ್ತು ಆದಾಯ ನಷ್ಟವಾಗುತ್ತದೆ. ಅಂದರೆ, ಈ ತಪ್ಪುಗಳು ಉತ್ತಮ ಆರ್ಥಿಕ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಬಡವರನ್ನಾಗಿ ಮಾಡುತ್ತವೆ. ಅಂತಹ ಒಂದು ಪ್ರಮುಖ ಕಾರ್ಯವೆಂದರೆ ಹಣವನ್ನು ಎಣಿಸುವುದು.


COMMERCIAL BREAK
SCROLL TO CONTINUE READING

ಹಣವನ್ನು ಎಣಿಸುವಾಗ ಮಾಡಿದ ತಪ್ಪುಗಳು ಲಕ್ಷ್ಮಿದೇವಿಯನ್ನು ಕೋಪಗೊಳ್ಳುವಂತೆ ಮಾಡುತ್ತವೆ. ಇದರಿಂದಾಗಿ ಅನಗತ್ಯ ಖರ್ಚು, ಹಣ ಮನೆಯಲ್ಲಿ ಉಳಿಯದಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಣವನ್ನು ಎಣಿಸುವಾಗ ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಇದರಿಂದ ಲಕ್ಷ್ಮಿದೇವಿ ಯಾವಾಗಲೂ ನಿಮ್ಮೊಂದಿಗೆ ಸಂತೋಷವಾಗಿರುತ್ತಾಳೆ.


ಇದನ್ನೂ ಓದಿ : Palmistry: ಅಂಗೈಯಲ್ಲಿ ಈ ರೇಖೆ ಹೀಗಿದ್ದರೆ ನೀವು ಶ್ರೀಮಂತರಾಗುತ್ತೀರಿ ಎಂದರ್ಥ!


ಹಣವನ್ನು ಎಣಿಸುವಾಗ ಈ ತಪ್ಪುಗಳನ್ನು ಮಾಡಬೇಡಿ


ಪರ್ಸ್ ನಲ್ಲಿ ಅನಗತ್ಯ ವಸ್ತುಗಳನ್ನು ಇಡಬೇಡಿ: ಹಿಂದೂ ಧರ್ಮದಲ್ಲಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಹಣವನ್ನು ಎಣಿಸುವಲ್ಲಿ ತಪ್ಪುಗಳನ್ನು ಮಾಡಬಾರದು. ಆದ್ದರಿಂದ, ಪರ್ಸ್‌ನಲ್ಲಿ ಹಣವನ್ನು ಮಾತ್ರ ಇಟ್ಟುಕೊಳ್ಳಿ, ಅನಗತ್ಯ ಪೇಪರ್‌ಗಳು ಅಥವಾ ಬಿಲ್‌ಗಳನ್ನು ಇಡಬೇಡಿ. ಹೀಗೆ ಮಾಡುವುದರಿಂದ ಹಣದ ನಷ್ಟವಾಗುತ್ತದೆ ಮತ್ತು ಹಣವು ನಿಮ್ಮ ಬಳಿ ಉಳಿಯುವುದಿಲ್ಲ.


ನೋಟುಗಳಿಗೆ ಉಗುಳು ಹಚ್ಚಬೇಡಿ : ಅನೇಕ ಜನರು ಅಂಟಿಕೊಂಡಿರುವ ನೋಟುಗಳನ್ನು ತೆಗೆಯಲು ಉಗುಳು ಹಚ್ಚುವ ಅಭ್ಯಾಸವಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ ಮತ್ತು ಕಷ್ಟಪಟ್ಟು ಕೆಲಸ ಮಾಡಿ ದುಡಿದ ಹಣ ಕೂಡ ಕೈಯಲ್ಲಿ ನಿಲ್ಲುವುದಿಲ್ಲ. ಅಲ್ಲದೆ, ನೋಟುಗಳಿಗೆ ಉಗುಳು ಹಚ್ಚುವುದರಿಂದ ಈ ಕೊಳಕು ಅಭ್ಯಾಸವು ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.


ನೋಟುಗಳನ್ನು ತಿರುಚಬೇಡಿ: ನೋಟುಗಳನ್ನು ಯಾವತ್ತೂ ತಿರುಚಬೇಡಿ. ಹೀಗೆ ಮಾಡುವುದರಿಂದ  ಲಕ್ಷ್ಮಿಯೂ ಕೋಪಗೊಳ್ಳುತ್ತಾಳೆ. ನೋಟುಗಳನ್ನು ಯಾವಾಗಲೂ ಕ್ರಮಬದ್ಧವಾಗಿ ಮತ್ತು ಗೌರವಯುತವಾಗಿ ಇರಿಸಿ.


ಇದನ್ನೂ ಓದಿ : Garuda Purana : ಜೀವನದಲ್ಲಿ ಯಾವತ್ತೂ ಮಾಡಬೇಡಿ ಈ ತಪ್ಪುಗಳನ್ನು, ಇವು ಲಕ್ಷ್ಮಿದೇವಿ ಕೋಪಕ್ಕೆ ಕಾರಣ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.