Vastu Tips: ಪೊರಕೆಗೆ ಸಂಬಂಧಿಸಿದ ಈ ವಾಸ್ತು ಸಲಹೆ ಪಾಲಿಸಿದ್ರೆ ಬಡತನ ದೂರವಾಗುತ್ತದೆ!
ಪೊರಕೆಯ ವಾಸ್ತು ಸಲಹೆಗಳು: ವಾಸ್ತು ಶಾಸ್ತ್ರದಲ್ಲಿ ಪೊರಕೆಗೆ ವಿಶೇಷ ಸ್ಥಾನವಿದೆ. ಪೊರಕೆಯನ್ನು ಇಡುವಾಗ ಮತ್ತು ಕಸ ಗುಡಿಸುವಾಗ ಕೆಲವು ಪ್ರಮುಖ ವಿಷಯಗಳ ಬಗ್ಗೆ ಗಮನಹರಿಸಬೇಕು. ಪೊರಕೆಗೆ ಸಂಬಂಧಿಸಿದ ಕೆಲವು ಪ್ರಮುಖ ನಿಯಮಗಳ ಬಗ್ಗೆ ತಿಳಿಯಿರಿ.
ನವದೆಹಲಿ: ಧಾರ್ಮಿಕ ಗ್ರಂಥಗಳಲ್ಲಿ ಪೊರಕೆಯನ್ನು ಲಕ್ಷ್ಮಿದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ ವಾಸ್ತುಶಾಸ್ತ್ರದಲ್ಲಿ ಪೊರಕೆಗೆ ವಿಶೇಷ ಪ್ರಾಮುಖ್ಯತೆ ಇದೆ. ಪೊರಕೆ ಮನೆಯಲ್ಲಿರುವ ಕೊಳಕು ಮತ್ತು ಕಸ ತೆಗೆದುಹಾಕಲು ಮಾತ್ರ ಬಳಕೆಯಾಗಲ್ಲ, ಪೊರಕೆಯಿಂದ ಮನೆಯ ಬಡತನವನ್ನೂ ಹೋಗಲಾಡಿಸಬಹುದು. ವಾಸ್ತು ಶಾಸ್ತ್ರದಲ್ಲಿ ಪೊರಕೆಗೆ ಸಂಬಂಧಿಸಿದ ಅನೇಕ ನಿಯಮಗಳು ಮತ್ತು ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಈ ಸಲಹೆಗಳನ್ನು ಪಾಲಿಸಿದ್ರೆ ತಾಯಿ ಲಕ್ಷ್ಮಿದೇವಿ ಪ್ರಸನ್ನಳಾಗುತ್ತಾಳೆ ಮತ್ತು ಮನೆಯಲ್ಲಿ ಸಂತೋಷ-ಸಮೃದ್ಧಿ ಇರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಪೊರಕೆ ಇಡಲು ಸರಿಯಾದ ದಿಕ್ಕು ಮತ್ತು ಕಸ ಗುಡಿಸುವ ಸಮಯದ ಬಗ್ಗೆ ತಿಳಿಯುವುದು ಬಹಳ ಮುಖ್ಯ. ಪೊರಕೆಗೆ ಸಂಬಂಧಿಸಿದ ಸಣ್ಣ ತಪ್ಪು ಕೂಡ ನಿಮಗೆ ತೊಂದರೆ ಉಂಟುಮಾಡಬಹುದು. ಹೀಗಾಗಿ ಪೊರಕೆಗೆ ಸಂಬಂಧಿಸಿದ ಎಲ್ಲಾ ನಿಯಮ ಅನುಸರಿಸುವುದು ಬಹಳ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯಿಂದ ಕಸ ಗುಡಿಸಲು ಸರಿಯಾದ ಸಮಯ ನಿಗದಿಪಡಿಸಲಾಗಿದೆ. ಕಸವನ್ನು ಯಾವಾಗ ಗುಡಿಸಬೇಕು ಮತ್ತು ಗುಡಿಸಬಾರದು ಅನ್ನೋದರ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Ramadan 2023: ರಂಜಾನ್ ತಿಂಗಳು ಯಾವಾಗ ಆರಂಭ, ರೋಜಾ ಎಂದಿನಿಂದ ಆರಂಭ?
ಪೊರಕೆಗೆ ಸಂಬಂಧಿಸಿದ ಈ ತಪ್ಪು ಮಾಡಬೇಡಿ
- ಪೊರಕೆಗೆ ಸಂಬಂಧಿಸಿದ ಹಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ದಿನದಲ್ಲಿ 4 ಗಂಟೆ ಗುಡಿಸಲು ಉತ್ತಮ ಸಮಯ. ಅದೇ ರೀತಿ ರಾತ್ರಿ 4 ಗಂಟೆ ಈ ಕೆಲಸಕ್ಕೆ ಸೂಕ್ತವಲ್ಲವೆಂದು ಹೇಳಲಾಗಿದೆ. ರಾತ್ರಿ ವೇಳೆ ಮನೆಯನ್ನು ಗುಡಿಸುವುದರಿಂದ ಮನೆಯಲ್ಲಿ ದಾರಿದ್ರ್ಯ ನೆಲೆಸುತ್ತದೆ ಮತ್ತು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿಯು ಕೋಪಗೊಳ್ಳುತ್ತಾಳೆಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಹಣದ ಒಳಹರಿವಿನ ಮೇಲೆ ನಕಾರಾತ್ಮಕ ಪರಿಣಾಮವಿರುತ್ತದಂತೆ.
- ಪೊರಕೆಯನ್ನು ಯಾವಾಗಲೂ ಮನೆಯಲ್ಲಿ ಅಡಗಿಸಿಡಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಪೊರಕೆಯನ್ನು ಹೊರಗಿನ ಯಾವುದೇ ಸದಸ್ಯರು ನೋಡಬಾರದು ಎಂಬುದನ್ನು ನೆನಪಿನಲ್ಲಿಡಿ.
- ಯಾವಾಗಲೂ ಪೊರಕೆಯನ್ನು ಮಲಗಿಸಿಡಬೇಕು. ನಿಂತಿರುವ ಪೊರಕೆಯಿದ್ದರೆ ತಾಯಿ ಲಕ್ಷ್ಮಿದೇವಿ ನಿರ್ಗಮಿಸುತ್ತಾಳೆ ಮತ್ತು ಮನೆಯಲ್ಲಿ ಬಡತನ ಹರಡುತ್ತದೆ.
- ಮುರಿದ ಪೊರಕೆಯನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ರೀತಿಯ ಪೊರಕೆಯನ್ನು ತಕ್ಷಣವೇ ಮನೆಯಿಂದ ತೆಗೆದುಹಾಕಬೇಕು. ಇಲ್ಲದಿದ್ದರೆ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗುತ್ತವೆ.
- ಮನೆಯಲ್ಲಿ ಪೊರಕೆಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು ಎಂದು ವಾಸ್ತು ಶಾಸ್ತ್ರಗಳು ಹೇಳುತ್ತವೆ. ಇದನ್ನು ಯಾವಾಗಲೂ ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: Budhaditya Yog : ಮಾ.31 ರವರೆಗೆ 'ಬುಧಾದಿತ್ಯ ರಾಜಯೋಗ' : ಈ ರಾಶಿಯವರಿಗೆ ಹಣದ ಜೊತೆ ಯಶಸ್ಸು!
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.