ನವದೆಹಲಿ: Vastu Tips For Happy Married Life - ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ಕ್ರಮಗಳನ್ನು (Vastu Tips) ನಾವು ನಮ್ಮ ಜೀವನದಲ್ಲಿ ಸರಿಯಾಗಿ ಅಳವಡಿಸಿಕೊಂಡರೆ ನಮ್ಮ ಮನೆ ಮತ್ತು ಜೀವನದಲ್ಲಿ ಇರುವ ಋಣಾತ್ಮಕ ಶಕ್ತಿಯು (Negative Energy)ನಾಶವಾಗುತ್ತದೆ ಮತ್ತು ಧನಾತ್ಮಕ ಶಕ್ತಿ (Positive Energy) ನಮ್ಮ ಮನೆಯ ಸುತ್ತ ತುಂಬಿಕೊಳ್ಳಲು ಆರಂಭಿಸುತ್ತದೆ. ನೀವು ಹಣಕಾಸಿನ ಸಮಸ್ಯೆಗಳಿಂದ ಮುಕ್ತರಾಗಲು ಅಥವಾ ಉದ್ಯೋಗದಲ್ಲಿ ಯಶಸ್ವಿಯಾಗಲು ಅಥವಾ ವೈವಾಹಿಕ ಜೀವನಲ್ಲಿ ಪ್ರೀತಿ ಮತ್ತು ಸಂತೋಷ ನಿಮ್ಮದಾಗಿಸಲುವಾಸ್ತು ಶಾಸ್ತ್ರ ತುಂಬಾ ಸಹಾಯಕಾರಿಯಾಗಿದೆ. ಇದರಲ್ಲಿ ವಾಸ್ತುಗೆ (Vastu Shastra) ಸಂಬಂಧಿಸಿದ ಸರಿಯಾದ ನಿಯಮಗಳನ್ನು ಮಾತ್ರ ಪಾಲಿಸುವ ಅವಶ್ಯಕತೆಯಿದೆ.


COMMERCIAL BREAK
SCROLL TO CONTINUE READING

ರಾಧಾ-ಕೃಷ್ಣರ ಭಾವಚಿತ್ರ ಅಂಟಿಸಿ, ಪ್ರೀತಿ ಹೆಚ್ಚಾಗುತ್ತದೆ
ದೇವರ ಕೋಣೆ ಯ (Puja Graha) ಜೊತೆಗೆ, ನೀವು ದೇವರ ಕೋಣೆ ಮತ್ತು ಮನೆಯ ಇತರೆ  ಗೋಡೆಗಳ ಮೇಲೆ ದೇವಿ-ದೇವತೆಗಳ ಮೇಲೆ ದೇವ-ದೇವತೆಗಳ ಭಾವಚಿತ್ರಗಳನ್ನು ಅಂಟಿಸುತ್ತಿರಬಹುದು , ಆದರೆ ಯಾವ ಚಿತ್ರವನ್ನು ಎಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಇಡಬೇಕು, ಇದರ ಮಾಹಿತಿ ನಿಮಗೆ ಸರಿಯಾಗಿ ದೊರೆತರೆ ಶುಭ ಫಲಿತಾಂಶಗಳು ನಿಮ್ಮದಾಗಲಿವೆ. ಯಾವುದೇ ಒಬ್ಬ ವ್ಯಕ್ತಿಯ ವೈವಾಹಿಕ ಜೀವನದಲ್ಲಿ (Married Life) ತೊಂದರೆಗಳಿದ್ದರೆ ಮತ್ತು ಪತಿ-ಪತ್ನಿಯರ ನಡುವೆ ನಿರಂತರ ಕ್ಲೇಶಗಳು ಸಂಭವಿಸುತ್ತಿದ್ದರೆ. ರಾಧಾ-ಕೃಷ್ಣರ (Radha-Krishna) ಭಾವಚಿತ್ರ ಅವರ ಈ ಸಮಸ್ಯೆಯನ್ನು ಹೇಗೆ ನಿವಾರಿಸುತ್ತದೆ ಎಂಬುದರ ಕುರಿತು ಹೇಳಲಿದ್ದೇವೆ.


ಶಯನ ಕಕ್ಷೆಯಲ್ಲಿ (Bedroom)ಯಲ್ಲಿ ರಾಧಾ-ಕೃಷ್ಣರ ಭಾವಚಿತ್ರವಿರಲಿ
ಸಾಮಾನ್ಯವಾಗಿ ಬೆಡ್ ರೂಮ್ ನಲ್ಲಿ ದೇವಿ-ದೇವತೆಗಳ ಭಾವಚಿತ್ರ ಅಂಟಿಸಬಾರದು ಎನ್ನಲಾಗುತ್ತದೆ. ಆದರೆ, ವಾಸ್ತು (Vastu Dosha)ಶಾಸ್ತ್ರದ ಪ್ರಕಾರ ದಂಪತಿಗಳ ನಡುವೆ ಪ್ರೀತಿಯ ಕೊರತೆ ಇದ್ದರೆ, ಆ ದಂಪತಿಗಳು ತಮ್ಮ ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣರ ಭಾವಚಿತ್ರ ಅಂಟಿಸಬೇಕು ಎನ್ನಲಾಗಿದೆ.


- ಆದರೆ, ಬೆಡ್ ರೂಮ್ ನಲ್ಲಿ ನೀವು ಅಂಟಿಸುತ್ತಿರುವ ಭಾವಚಿತ್ರದಲ್ಲಿ ಕೇವಲ ರಾಧಾ ಮತ್ತು ಕೃಷ್ಣರು ಇರಬೇಕು. ಗೋಪಿಯರಿರಬಾರದು ಎಂಬುದನ್ನು ನೆನಪಿನಲ್ಲಿಡಿ. ಭಾವಚಿತ್ರದಲ್ಲಿ ರಾಧಾ-ಕೃಷ್ಣರು ಪರಸ್ಪರ ಪ್ರೀತಿಯಿಂದ ನೋಡುತ್ತಿದ್ದರೆ ಇನ್ನೂ ಉತ್ತಮ.


- ರಾಧಾ-ಕೃಷ್ಣನ ಪ್ರೇಮ ಭಾವ ವ್ಯಕ್ತಪಡಿಸುತ್ತಿರುವ  ಈ ಚಿತ್ರವನ್ನು ಮಲಗುವ ಕೋಣೆಯಲ್ಲಿ ಸುಲಭವಾಗಿ ಕಣ್ಣಿಗೆ ಬೀಳುವ ಗೋಡೆಗೆ ಅಂಟಿಸಿ. ಬೆಳಿಗ್ಗೆ ಎದ್ದೇಳುತ್ತಲೇ ನೀವು ಈ ಚಿತ್ರವನ್ನು ನೋಡಿದರೆ, ಅದು ಇನ್ನೂ ಉತ್ತಮವಾಗಿರುತ್ತದೆ.


ಇದನ್ನು ಓದಿ- Marriage Planet Venus Setting - ನಾಳೆಯಿಂದ ಶುಕ್ರಾಸ್ತ ಆರಂಭವಾಗಲಿದೆ, ವಿವಾಹ-ಶುಭಕಾರ್ಯಗಳಿಗೆ ಬ್ರೇಕ್


- ಕೆಲವು ಕಾರಣಗಳಿಂದ ಗಂಡ ಮತ್ತು ಹೆಂಡತಿಯ ನಡುವೆ ವಿರಸ ಏರ್ಪಟ್ಟಿದ್ದರೆ, ನಂತರ ಮಲಗುವ ಕೋಣೆಯಲ್ಲಿ ನಿಮ್ಮ ತಲೆಯ ಹತ್ತಿರವಿರುವ  ಗೋಡೆಯ ಮೇಲೆ ಕೆಂಪು ಚೌಕಟ್ಟಿನಲ್ಲಿ ರಾಧಾ ಕೃಷ್ಣನ ಸುಂದರವಾದ ಚಿತ್ರವನ್ನು ಇರಿಸಿ. ಇದನ್ನು ಮಾಡುವುದರಿಂದ ಕೆಟ್ಟ ಸಮಯ ಶೀಘ್ರದಲ್ಲಿಯೇ ತೊಲಗುತ್ತದೆ.


ಇದನ್ನು ಓದಿ- Money: ನೀವು ಆರ್ಥಿಕವಾಗಿ ಬಲಿಷ್ಠರಾಗಬೇಕೆ ಹಾಗಿದ್ರೆ ಈ 7 ನಿಯಮಗಳನ್ನು ಪಾಲಿಸಿ..!


- ನೀವು ಬೇಕಾದರೆ ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣರ ಭಾವಚಿತ್ರ ಅಂಟಿಸಿದ ಗೋಡೆಯ ಎದುರು ಪತಿ-ಪತ್ನಿಯರಿಬ್ಬರ ಭಾವಚಿತ್ರ ಅಂಟಿಸಿದರೂ ಕೂಡ ತಪ್ಪೇನಿಲ್ಲ. ಇದರಿಂದ ಪರಸ್ಪರ ಪ್ರೀತಿ-ವಿಶ್ವಾಸ ಹೆಚ್ಚಾಗುತ್ತದೆ (Remedies For Happy Married Life).


ಇದನ್ನು ಓದಿ-Hanuman Pooja: ರಾತ್ರಿ ಪೂಜೆ ಮಾಡುವಾಗ ಮಾಡಬೇಡಿ ಈ ತಪ್ಪು..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.