Vastu Tips Related To Parijat: ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿದ್ದೀರಾ? ಮನೆಯಲ್ಲಿರಲಿ ಈ ವಿಶೇಷ ಗಿಡ
Benefits Of Parijat In House - ಧಾರ್ಮಿಕ ಗ್ರಂಥಗಳಲ್ಲಿ ತುಳಸಿ (Tulsi) ಗಿಡವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ, ಮನೆಯಲ್ಲಿ ತುಳಸಿ ಇಲ್ಲದಿದ್ದರೆ ಪಾರಿಜಾತ (Parijat) ಅಂದರೆ ಹರಸಿಂಗಾರ (Harshingar) ಗಿಡವನ್ನು ಸಹ ನೀವು ನೆಡಬಹುದು. ಅದರಿಂದಲೂ ಕೂಡ ತುಳಿಸಿಗಿಡದಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ.
ನವದೆಹಲಿ: Benefits Of Parijat In House - ಧಾರ್ಮಿಕ ಗ್ರಂಥಗಳಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ತುಳಸಿ ಗಿಡವನ್ನು ನೆಟ್ಟ ಮನೆಯಲ್ಲಿ ದೇವಿ ಲಕ್ಷ್ಮಿ (Goddess Lakshmi) ಮತ್ತು ವಿಷ್ಣು (Lord Vishnu) ನೆಲೆಸಿರುತ್ತಾರೆ ಎಂಬುದು ಧಾರ್ಮಿಕ ನಂಬಿಕೆ. ಮನೆಯಲ್ಲಿ ತುಳಸಿ ಗಿಡವಿಲ್ಲದಿದ್ದರೆ ಪಾರಿಜಾತ ಅಂದರೆ ಹರಸಿಂಗಾರ್ ಗಿಡವನ್ನೂ ಸಹ ನೀವು ನೆಡಬಹುದು. ಇದನ್ನು ನೆಡುವುದರಿಂದ ತುಳಸಿಯಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ.
ಪಾರಿಜಾತದ ಗಿಡದಲ್ಲಿ ದೇವಿ ಲಕ್ಷ್ಮಿಯ ವಾಸ
ಪಾರಿಜಾತ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂಬುದು ಧಾರ್ಮಿಕ ನಂಬಿಕೆ. ಮನೆಯ ಅಂಗಳದಲ್ಲಿ ಈ ಗಿಡವನ್ನು ನೆಟ್ಟರೆ ಮನೆಯ ವಾಸ್ತುದೋಷ (Vastu Tips) ನಿವಾರಣೆಯಾಗಿ ಸಂಸಾರದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ. ಈ ಕಾರಣದಿಂದಾಗಿ, ನಕಾರಾತ್ಮಕ ಶಕ್ತಿಗಳು ಮನೆಯಿಂದ ದೂರವಿರುತ್ತವೆ ಮತ್ತು ಕುಟುಂಬ ಸದಸ್ಯರಲ್ಲಿ ಒಗ್ಗಟ್ಟು ಹೆಚ್ಚಾಗುತ್ತದೆ.
ಕುಟುಂಬದಲ್ಲಿ ಭಿನ್ನಾಭಿಪ್ರಾಯ ದೂರಗುತ್ತವೆ
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಮನೆಯಲ್ಲಿ ಪಾರಿಜಾತ ಗಿಡವನ್ನು ನೆಟ್ಟರೆ ಕುಟುಂಬದಲ್ಲಿನ ವೈಮನಸ್ಸು ಕೊನೆಗೊಳ್ಳುತ್ತದೆ. ಇದರಿಂದ ರೋಗಗಳು ನಿವಾರಣೆಯಾಗಿ ಕುಟುಂಬದ ಸದಸ್ಯರು ದೀರ್ಘಾಯುಷ್ಯ ಹೊಂದುತ್ತಾರೆ. ಇದರಿಂದ ಮಾನಸಿಕ ಒತ್ತಡ ದೂರವಾಗುತ್ತದೆ ಮತ್ತು ಮನೆಯ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ.
ಮನೆಯಲ್ಲಿ ಪರಿಮಳದ ವಾಸನೆ
ಪಾರಿಜಾತ ಗಿಡದಲ್ಲಿ ಬಿಳಿ ಬಣ್ಣದ ಹೂವುಗಳಾಗುತ್ತವೆ. ಅವುಗಳ ಸುಗಂಧ ಮನೆಯಲ್ಲೆಲ್ಲ ಕಂಪು ಬೀರುತ್ತದೆ. ಈ ಹೂವು ದೇವಿ ಲಕ್ಷ್ಮಿಗೆ ತುಂಬಾ ಪ್ರಿಯವಾದ ಹೂವು ಎನ್ನಲಾಗುತ್ತದೆ. ಆದ್ದರಿಂದ ಪಾರಿಜಾತದ ಹೂವನ್ನು ಮನೆಯ ದೇವಸ್ಥಾನದಲ್ಲಿರುವ ಲಕ್ಷ್ಮಿ ದೇವಿಯ ಫೋಟೋಗೆ ಅರ್ಪಿಸಬೇಕು. ಇದರಿಂದ ಲಕ್ಷ್ಮೀದೇವಿಯು ಪ್ರಸನ್ನಳಾಗಿ ಭಕ್ತರಿಗೆ ಇಷ್ಟದ ವರವನ್ನು ನೀಡುತ್ತಾಳೆ.
ಇದನ್ನೂ ಓದಿ-Morning Tips : ಬೆಳಿಗ್ಗೆ ಎದ್ದ ನಂತರ ಮರೆತು ನೋಡಬೇಡಿ ಈ ವಸ್ತುಗಳನ್ನ! ಇಲ್ಲದಿದ್ದರೆ ತಪ್ಪಿದಲ್ಲ ಸಮಸ್ಯೆ
ಸಾಗರ ಮಂಥನದಿಂದ ಸಸ್ಯದ ಉತ್ಪತ್ತಿ
ಸಾಗರ ಮಂಥನದ ಸಮಯದಲ್ಲಿ ಪಾರಿಜಾತ ಸಸ್ಯವು ಹುಟ್ಟಿಕೊಂಡಿತು ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. ಇದರ ನಂತರ, ಇಂದ್ರ ದೇವರು ಈ ಅದ್ಭುತ ಸಸ್ಯವನ್ನು ಸ್ವರ್ಗದ ಉದ್ಯಾನದಲ್ಲಿ ನೆಟ್ಟನು. ಪುರಾಣಗಳ ಪ್ರಕಾರ, ಶ್ರೀಕೃಷ್ಣನು ತನ್ನ ಹೆಂಡತಿ ರುಕ್ಮಿಣಿಗೆ ಈ ಸಸ್ಯವನ್ನು ಅರ್ಪಿಸಿದ ಕಾರಣ ಅವಳಿಗೆ ಚಿರಯೌವನ ಪ್ರಾಪ್ತಿಯಾಯ್ತು ಎನ್ನಲಾಗುತ್ತದೆ. ಈ ಸಸ್ಯದಿಂದಾಗಿ, ಇಂದ್ರ ಮತ್ತು ಶ್ರೀ ಕೃಷ್ಣನ ನಡುವೆ ಯುದ್ಧವೂ ನಡೆಯುತ್ತದೆ. ನಂತರ ಇಂದ್ರನ ಶಾಪದಿಂದ ಈ ಸಸ್ಯದಲ್ಲಿ ಎಂದಿಗೂ ಫಲಗಳು ಬರಲಿಲ್ಲ. ಅದರಲ್ಲಿ ಹೂವುಗಳು ಬೆಳೆಯುತ್ತಲೇ ಇದ್ದವು ಎನ್ನಲಾಗುತ್ತದೆ.
ಇದನ್ನೂ ಓದಿ-Shani Sade Sati : ಈ ರಾಶಿಗಳ ಮೇಲೆ ಆರಂಭವಾಗಿದೆ ಶನಿ - ಸಾಡೇಸಾತಿ : ಯಾವ ರಾಶಿಯವರಿಗೆ ಲಾಭ?
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-Budh Vakri 2022 : ಸಂಕ್ರಾಂತಿಗೆ ಬುಧದ ಹಿಮ್ಮುಖ ಚಲನೆ ಆರಂಭ : ಮುಂದಿನ 22 ದಿನ ಈ ರಾಶಿಯ ಮೇಲೆ ಭಾರೀ ಪರಿಣಾಮ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.